ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ನೂರಾರು ವಿಡಿಯೋಗಳು ಹರಿದಾಡುತ್ತವೆ. ಆದರೆ, ಕೌಟುಂಬಿಕ ನ್ಯಾಯಾಲಯವೊಂದರ ಮುಂಭಾಗ ನಡೆದ ಈ ಘಟನೆಯ ವಿಡಿಯೋ (Viral Video) ಮಾತ್ರ ಈಗ ಇಂಟರ್ನೆಟ್‌ನಲ್ಲಿ ಬೆಂಕಿ ಹಚ್ಚಿದೆ. ವಿಚ್ಛೇದನದ ತೀರ್ಪು ಬಂದ ಬೆನ್ನಲ್ಲೇ ಮಹಿಳೆಯೊಬ್ಬರು ತನ್ನ ಪತಿಯ ಮೇಲೆ ನಡುರಸ್ತೆಯಲ್ಲೇ ಹಲ್ಲೆ ಮಾಡಿರುವ ಘಟನೆ ನಡೆದಿದೆ.

Viral Video – ಪತಿಯ ಕಾಲರ್ ಹಿಡಿದು ಎಳೆದ ಪತ್ನಿ!
ಹೌದು, ಫ್ಯಾಮಿಲಿ ಕೋರ್ಟ್ ಹೊರಗಡೆ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ವಿಡಿಯೋದಲ್ಲಿ ಕಾಣುವಂತೆ, ಮಹಿಳೆಯೊಬ್ಬರು ವ್ಯಕ್ತಿಯ ಕೂದಲನ್ನು ಎಳೆದು, ಆತನಿಗೆ ಮನಬಂದಂತೆ ಹೊಡೆಯುತ್ತಿದ್ದಾರೆ. ನೆರೆದಿದ್ದ ಜನರೆಲ್ಲಾ ಮೌನವಾಗಿ ನೋಡುತ್ತ ನಿಂತಿದ್ದರೆ, ಇತ್ತ ಮಹಿಳೆ ಮಾತ್ರ ಆಕ್ರೋಶದಿಂದ ಕೂಗಾಡುತ್ತಾ ಹಲ್ಲೆ ನಡೆಸುತ್ತಿದ್ದಾರೆ. ಅಚ್ಚರಿಯ ವಿಷಯವೆಂದರೆ, ಪತ್ನಿ ಇಷ್ಟೊಂದು ಹೊಡೆಯುತ್ತಿದ್ದರೂ ಆ ವ್ಯಕ್ತಿ ಮಾತ್ರ ಕಿಂಚಿತ್ತೂ ಎದುರೇಟು ನೀಡದೆ, ಮುಗುಳ್ನಗುತ್ತಲೇ ಇರುವುದು ನೆಟ್ಟಿಗರ ಗಮನ ಸೆಳೆದಿದೆ.
6 ಲಕ್ಷ ರೂ. ಜೀವನಾಂಶದ ಬೇಡಿಕೆ ಮತ್ತು ಕೋರ್ಟ್ ನೀಡಿದ ಶಾಕ್!
ವರದಿಗಳ ಪ್ರಕಾರ, ಈ ಮಹಿಳೆ ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ (Software Engineer). ವಿಚ್ಛೇದನದ ಸಮಯದಲ್ಲಿ ಈಕೆ ಪತಿಯಿಂದ ತಿಂಗಳಿಗೆ ಬರೋಬ್ಬರಿ 6 ಲಕ್ಷ ರೂಪಾಯಿ ಜೀವನಾಂಶ (Alimony) ಬೇಡಿಕೆ ಇಟ್ಟಿದ್ದರಂತೆ. ಆದರೆ ನ್ಯಾಯಾಲಯವು ಜೀವನಾಂಶದ ಮೊತ್ತವನ್ನು ‘ಶೂನ್ಯ’ (Zero Alimony) ಎಂದು ನಿಗದಿಪಡಿಸಿದೆ ಎನ್ನಲಾಗಿದೆ. ಇದೇ ಕಾರಣಕ್ಕೆ ಮಹಿಳೆ ರೊಚ್ಚಿಗೆದ್ದು ಪತಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. Read this also : ಗಂಡ ಇಲ್ಲದಾಗ ಫೋನ್ ಬಳಕೆ? ಅನುಮಾನದಿಂದ ಹೆಂಡತಿಯ ಕೊಲೆ, ಶವ ಹೂತುಹಾಕಿದ ಭೀಕರ ಕೃತ್ಯ!
ಪತಿಯ ‘ಮಾಸ್ಟರ್ ಪ್ಲಾನ್’: ಆಸ್ತಿಯೆಲ್ಲಾ ತಾಯಿಯ ಹೆಸರಿಗೆ!
ಈ ಪ್ರಕರಣದಲ್ಲಿ ಮತ್ತೊಂದು ಟ್ವಿಸ್ಟ್ ಇದೆ. ಪತ್ನಿ ದೊಡ್ಡ ಮೊತ್ತದ ಹಣ ಕೇಳಬಹುದು ಎಂದು ಮೊದಲೇ ಅಂದಾಜಿಸಿದ್ದ ಪತಿ, ಕಾನೂನುಬದ್ಧವಾಗಿ ತನ್ನ ಹೆಸರಲ್ಲಿದ್ದ ಎಲ್ಲಾ ಆಸ್ತಿ ಮತ್ತು ಆದಾಯದ ಮೂಲಗಳನ್ನು ತನ್ನ ತಾಯಿಯ ಹೆಸರಿಗೆ ವರ್ಗಾಯಿಸಿದ್ದನಂತೆ. ನ್ಯಾಯಾಲಯದಲ್ಲಿ ವಿಚಾರಣೆ ನಡೆದಾಗ, (Viral Video) ಪತಿಯ ಹೆಸರಿನಲ್ಲಿ ಯಾವುದೇ ಆಸ್ತಿ ಇಲ್ಲದ ಕಾರಣ ಕೋರ್ಟ್ ಜೀವನಾಂಶ ನೀಡುವಂತೆ ಆದೇಶಿಸಿಲ್ಲ ಎನ್ನಲಾಗಿದೆ. ಇದರಿಂದ ಹತಾಶೆಗೊಂಡ ಪತ್ನಿ ಬೀದಿಯಲ್ಲೇ ಪತಿಗೆ ಗೂಸಾ ನೀಡಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ : Click here
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋ
ಟ್ವಿಟ್ಟರ್ (X) ಸೇರಿದಂತೆ ವಿವಿಧ ವೇದಿಕೆಗಳಲ್ಲಿ ಈ (Viral Video) ವಿಡಿಯೋ ಸಖತ್ ಸದ್ದು ಮಾಡುತ್ತಿದೆ. “ಎಷ್ಟೇ ಕೋಪ ಬಂದರೂ ಕಾನೂನನ್ನು ಕೈಗೆತ್ತಿಕೊಳ್ಳುವುದು ತಪ್ಪು” ಎಂದು ಕೆಲವರು ಕಾಮೆಂಟ್ ಮಾಡಿದರೆ, ಇನ್ನೂ ಕೆಲವರು “ಪತಿಯ ತಾಳ್ಮೆಗೆ ಮೆಚ್ಚುಗೆ ಬೇಕು” ಎನ್ನುತ್ತಿದ್ದಾರೆ.
