HomeNationalWife Assaults Husband : ಗಂಡನಿಗೆ ಹೊಡೆದು ಚಿನ್ನ, ಹಣದೊಂದಿಗೆ ಎಸ್ಕೇಪ್ ಆದ್ಲಾ ಪತ್ನಿ? ಯುಪಿ...

Wife Assaults Husband : ಗಂಡನಿಗೆ ಹೊಡೆದು ಚಿನ್ನ, ಹಣದೊಂದಿಗೆ ಎಸ್ಕೇಪ್ ಆದ್ಲಾ ಪತ್ನಿ? ಯುಪಿ ವಿಡಿಯೋ ವೈರಲ್

ಇತ್ತೀಚಿನ ದಿನಗಳಲ್ಲಿ ಪವಿತ್ರವಾದ ಗಂಡ-ಹೆಂಡತಿ ಸಂಬಂಧ ಬೀದಿಗೆ ಬರುತ್ತಿದೆ. ಸಣ್ಣಪುಟ್ಟ ಜಗಳಗಳು ವಿಕೋಪಕ್ಕೆ ತಿರುಗಿ ಕೊಲೆ ಅಥವಾ ಆತ್ಮಹತ್ಯೆಯಲ್ಲಿ ಅಂತ್ಯವಾಗುತ್ತಿರುವ ಸುದ್ದಿಯನ್ನು (Wife Assaults Husband) ನಾವು ನಿತ್ಯ ನೋಡುತ್ತಲೇ ಇದ್ದೇವೆ. ‘ಪ್ರೀತಿಸಿ ಮದುವೆಯಾದರೆ ಇಂತಹ ಯಾವುದೇ ಸಮಸ್ಯೆ ಇರಲ್ಲ, ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುತ್ತಾರೆ’ ಎಂದುಕೊಂಡರೆ, ಅದೂ ಕೂಡ ಈಗ ಸುಳ್ಳಾಗುತ್ತಿದೆ. ಉತ್ತರ ಪ್ರದೇಶದ ಗೊಂಡಾದಲ್ಲಿ ನಡೆದಿರುವ ಇಂತಹದ್ದೇ ಒಂದು ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.

Wife assaults husband during a heated domestic dispute inside home captured on CCTV camera

Wife Assaults Husband – ಪ್ರೇಮ ವಿವಾಹ, ಆಮೇಲೆ ಶುರುವಾಯ್ತು ಕಿರಿಕಿರಿ

ಉತ್ತರ ಪ್ರದೇಶದ ಗೊಂಡಾದ ನವಾಬ್‌ಗಂಜ್‌ನಲ್ಲಿ ಈ ಘಟನೆ ನಡೆದಿದೆ. ಅನಿತಾ ಮೌರ್ಯ ಎಂಬ ಯುವತಿ, ರೈಲ್ವೆ ಲೋಕೋ ಪೈಲಟ್ ಆಗಿರುವ ಯುವಕನನ್ನು ಪ್ರೀತಿಸಿ ಕಳೆದ ವರ್ಷ ಫೆಬ್ರವರಿ 14ರಂದು ಮದುವೆಯಾಗಿದ್ದಳು. ಮದುವೆಯಾದ ಕೆಲವು ದಿನಗಳ ಕಾಲ ಈ ಜೋಡಿಯ ಸಂಸಾರ ಅನ್ಯೋನ್ಯವಾಗಿಯೇ ಇತ್ತು. ಆದರೆ ಆಮೇಲೆ ಇಬ್ಬರ ಮಧ್ಯೆ ಸಣ್ಣಪುಟ್ಟ ವಿಚಾರಗಳಿಗೂ ಜಗಳ ಶುರುವಾಗಿದೆ. ಕುಟುಂಬದ ಹಿರಿಯರು ಎಷ್ಟೇ ಬಾರಿ ಪಂಚಾಯಿತಿ ಮಾಡಿ, ಬುದ್ಧಿವಾದ ಹೇಳಿದರೂ ಇವರ ಜಗಳ ಮಾತ್ರ ನಿಂತಿರಲಿಲ್ಲ. ದಿನಕಳೆದಂತೆ ಇಬ್ಬರ ನಡುವಿನ ಕಂದಕ ಹೆಚ್ಚಾಗುತ್ತಲೇ ಇತ್ತು. ಬಳಿಕ ಇದು ತಾರಕಕ್ಕೆ ಏರಿದೆ.  Read this also : ಮಗುವೇ ಸಂಸಾರಕ್ಕೆ ಅಡ್ಡಿ ಎಂದು ಭಾವಿಸಿದ ತಾಯಿ: 2 ತಿಂಗಳ ಕಂದಮ್ಮನನ್ನು ನೀರುಪಾಲು ಮಾಡಿದ ಹೆತ್ತಮ್ಮ!

ಸೋಫಾ ಮೇಲೆ ಕೆಡವಿ ಗುದ್ದಿದ ಪತ್ನಿ!

ಇತ್ತೀಚೆಗೆ ಈ ಗಂಡ-ಹೆಂಡತಿಯ ಜಗಳ ತಾರಕಕ್ಕೇರಿದೆ. ರೈಲ್ವೆ ಲೋಕೋ ಪೈಲಟ್ ಆಗಿರುವ ಗಂಡನನ್ನು ಮನೆಯ ಹಾಲಿನಲ್ಲಿರುವ ಸೋಫಾ ಮೇಲೆ ಕೆಡವಿ ಪತ್ನಿ ಮನಬಂದಂತೆ ಥಳಿಸಿದ್ದಾಳೆ. ಗಂಡ ಎಷ್ಟೇ ಬೇಡಿಕೊಂಡರೂ ಬಿಡದೆ ಪಿಡಿಗುದ್ದಿನ ಸುರಿಮಳೆಗೈದಿದ್ದಾಳೆ. ಅಷ್ಟೇ ಅಲ್ಲದೆ, ಜಗಳ ಬಿಡಿಸಲು ಬಂದ ಅತ್ತೆಯ ಮೇಲೂ ಆಕೆ ಕೈ ಮಾಡಿದ್ದಾಳೆ ಎನ್ನಲಾಗಿದೆ. (Wife Assaults Husband) ಈ ಘಟನೆಯ ನಂತರ, ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ಹಣವನ್ನು ತೆಗೆದುಕೊಂಡು ಆಕೆ ತನ್ನ ತವರು ಮನೆಗೆ ಹೋಗಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ. ಅಷ್ಟಕ್ಕೂ ಇವರಿಬ್ಬರ ಮಧ್ಯೆ ಅಷ್ಟೊಂದು ದೊಡ್ಡ ಮಟ್ಟದ ಜಗಳಕ್ಕೆ ಕಾರಣವೇನು ಎಂಬುದು ಇನ್ನೂ ನಿಖರವಾಗಿ ತಿಳಿದುಬಂದಿಲ್ಲ.

Wife assaults husband during a heated domestic dispute inside home captured on CCTV camera

ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ, ನೆಟ್ಟಿಗರ ಆಕ್ರೋಶ

ಗಂಡ-ಹೆಂಡತಿಯ ಈ ಗಲಾಟೆಯು ಮನೆಯ ಹಾಲಿನಲ್ಲಿದ್ದ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ರೆಕಾರ್ಡ್ ಆಗಿದೆ. ಈ ವಿಡಿಯೋ ಈಗ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದ್ದು, ಪತ್ನಿಯ ಈ (Wife Assaults Husband) ಕ್ರೌರ್ಯವನ್ನು ನೋಡಿ ಜನ ದಂಗಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ದೂರಿನ ಮೇರೆಗೆ ಪೊಲೀಸರು ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here

ನೆಟ್ಟಿಗರ ಪ್ರತಿಕ್ರಿಯೆ

“ಸಮಾಜದಲ್ಲಿ ಮಹಿಳೆಯರು ಮಾತ್ರವಲ್ಲ, ಪುರುಷರು ಕೂಡ ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ. ಕೇವಲ ಪುರುಷರ ಮೇಲೆ ಮಾತ್ರವಲ್ಲ, ತಪ್ಪು ಮಾಡಿದ (Wife Assaults Husband) ಮಹಿಳೆಯರ ಮೇಲೂ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ನೆಟ್ಟಿಗರು ತೀವ್ರ ಕಳವಳ ಮತ್ತು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular