ಭೂಮಿಯ ಮೇಲೆ ಮನುಷ್ಯತ್ವ ಸತ್ತಿದೆಯಾ? ಎಂಬ ಪ್ರಶ್ನೆ ಆಗಾಗ ಕಾಡುತ್ತಲೇ ಇರುತ್ತದೆ. ಆದರೆ, ಮನುಷ್ಯರಲ್ಲಿ ಸತ್ತಿರಬಹುದಾದ ಆ ಮನುಷ್ಯತ್ವ, ಮೂಕ ಪ್ರಾಣಿಗಳಲ್ಲಿ ಇನ್ನೂ ಜೀವಂತವಾಗಿದೆ ಎನ್ನುವುದಕ್ಕೆ ಪಶ್ಚಿಮ ಬಂಗಾಳದಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ತಾಯಿಯೊಬ್ಬಳು ತನ್ನ ಹಸುಗೂಸನ್ನು ಅನಾಥವಾಗಿ ಬಿಟ್ಟು ಹೋದರೆ, ಬೀದಿ ನಾಯಿಗಳು ಆ ಮಗುವಿಗೆ ತಾಯಿಯಾಗಿ ರಕ್ಷಣೆ ನೀಡಿವೆ. ಈ ಘಟನೆ ಓದಿದರೆ ನಿಮ್ಮ ಕಣ್ಣಂಚಿನಲ್ಲೂ ನೀರು ಬರುವುದು ಖಂಡಿತ.

Viral News – ನವದ್ವೀಪದಲ್ಲಿ ನಡೆದ ಪವಾಡ ಸದೃಶ ಘಟನೆ
ಪಶ್ಚಿಮ ಬಂಗಾಳದ (West Bengal) ನದಿಯಾ ಜಿಲ್ಲೆಯ ನವದ್ವೀಪ ರೈಲ್ವೆ ಕಾಲೋನಿಯಲ್ಲಿ ಈ ಹೃದಯಸ್ಪರ್ಶಿ ಘಟನೆ ನಡೆದಿದೆ. ಯಾರಿಗೂ ಬೇಡವಾಗಿ ಶೌಚಾಲಯದ ಹೊರಗೆ ನವಜಾತ ಶಿಶುವೊಂದನ್ನು ಬಿಟ್ಟು ಹೋಗಲಾಗಿತ್ತು. ಆದರೆ, ಆ ಮಗುವಿನ ಅದೃಷ್ಟ ಚೆನ್ನಾಗಿತ್ತು. ಅಲ್ಲಿಗೆ ಬಂದ ಬೀದಿ ನಾಯಿಗಳ ಗುಂಪೊಂದು, ಆ ಮಗುವನ್ನು ಭಕ್ಷಿಸುವ ಬದಲು, ಅದಕ್ಕೆ ರಕ್ಷಕನಾಗಿ ನಿಂತಿವೆ.
Viral News – ಇಡೀ ರಾತ್ರಿ ಕಾವಲು ಕಾಯ್ದ ಶ್ವಾನಪಡೆ!
ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿರುವ ಪ್ರಕಾರ, ಮಗುವಿನ ಮೈಮೇಲೆ ನೂಲು ಕೂಡ ಇರಲಿಲ್ಲ. ಅಂತಹ ಸ್ಥಿತಿಯಲ್ಲಿ ಮಗುವನ್ನು ಶೌಚಾಲಯದ ಬಳಿ ಬಿಡಲಾಗಿತ್ತು. ಇದನ್ನು ಗಮನಿಸಿದ ಬೀದಿ ನಾಯಿಗಳು, ಮಗುವಿನ ಸುತ್ತಲೂ ಒಂದು ವೃತ್ತದಂತೆ (Circle) ನಿಂತು, ಬೇರೆ ಯಾವುದೇ ಪ್ರಾಣಿಗಳು ಅಥವಾ ಅಪಾಯ ಮಗುವನ್ನು ಮುಟ್ಟದಂತೆ ಇಡೀ ರಾತ್ರಿ ಕಾವಲು ಕಾಯ್ದಿವೆ.
Viral News – ಬೆಳಗ್ಗೆ ಎದ್ದು ನೋಡಿದ ಜನರಿಗೆ ಶಾಕ್!
ಮರುದಿನ ಬೆಳಿಗ್ಗೆ ಸ್ಥಳೀಯರು ಎದ್ದು ನೋಡಿದಾಗ ಅವರಿಗೆ ಕಂಡ ದೃಶ್ಯ ಮೈ ನಡುಗಿಸುವಂತಿತ್ತು. ಈ ಬಗ್ಗೆ ಪ್ರತ್ಯಕ್ಷದರ್ಶಿ ಶುಕ್ಲಾ ಮೊಂಡಲ್ ಪಿಟಿಐ ಜೊತೆ ಮಾತನಾಡುತ್ತಾ, “ಬೆಳಗ್ಗೆ ಎದ್ದಾಗ ನಾಯಿಗಳು ಮಗುವಿನ ಸುತ್ತುವರೆದಿರುವುದನ್ನು ಕಂಡು ಆಶ್ಚರ್ಯವಾಯಿತು. ಅವುಗಳ ವರ್ತನೆ ಆಕ್ರಮಣಕಾರಿಯಾಗಿರಲಿಲ್ಲ, ಬದಲಾಗಿ ಆ ಮಗು ಬದುಕಬೇಕೆಂಬ ಕಾಳಜಿ ಅವುಗಳಲ್ಲಿ ಕಾಣುತ್ತಿತ್ತು,” ಎಂದು ಹೇಳಿದ್ದಾರೆ.

ಮತ್ತೊಬ್ಬ ಸ್ಥಳೀಯರಾದ ಸುಭಾಷ್ ಪಾಲ್, “ಬೆಳಗಿನ ಜಾವ ಮಗು ಅಳುವ ಶಬ್ದ ಕೇಳಿಸಿತು. ಯಾರೋ ಮನೆಯ ಮಗು ಅಳುತ್ತಿದೆ ಎಂದುಕೊಂಡೆ. ಆದರೆ ಹೋಗಿ ನೋಡಿದಾಗ ಶೌಚಾಲಯದ ಬಳಿ ಮಗು ಮಲಗಿತ್ತು, ನಾಯಿಗಳು ಕಾವಲು ಕಾಯುತ್ತಿದ್ದವು,” ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. Read this also : ಅಯ್ಯೋ ಪಾಪಿ.. ಮುಗ್ಧ ಮಗುವಿನ ಮೇಲೆ ಎಂಥಾ ದೌರ್ಜನ್ಯ! ಎದೆ ನಡುಗಿಸುತ್ತೆ ಈ ವೈರಲ್ ವಿಡಿಯೋ…!
Viral News – ಮಗುವಿನ ಆರೋಗ್ಯ ಹೇಗಿದೆ?
ಊರಿನ ಜನರೆಲ್ಲ ಸೇರಿ ತಕ್ಷಣವೇ ಮಗುವನ್ನು ರಕ್ಷಿಸಿ, ಮೊದಲು ಮಹೇಶ್‌ಗಂಜ್ ಆಸ್ಪತ್ರೆಗೆ ಹಾಗೂ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕೃಷ್ಣನಗರ ಸದರ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಗುವನ್ನು ಪರೀಕ್ಷಿಸಿದ ವೈದ್ಯರು ಸಿಹಿಸುದ್ದಿ ನೀಡಿದ್ದು, “ಮಗುವಿಗೆ ಯಾವುದೇ ಗಾಯಗಳಾಗಿಲ್ಲ, ತಲೆಯ ಮೇಲಿದ್ದ ರಕ್ತ ಹೆರಿಗೆಯ ಸಮಯದಲ್ಲಿ ಆದದ್ದು. ಮಗು ಸಂಪೂರ್ಣ ಆರೋಗ್ಯವಾಗಿದೆ,” ಎಂದು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಆರಂಭಿಸಿದ್ದು, ಮಗುವನ್ನು ಬಿಟ್ಟು ಹೋದವರು ಯಾರು ಎಂಬ ಶೋಧ ನಡೆಯುತ್ತಿದೆ. ಸ್ಥಳೀಯರೇ ಯಾರಾದರೂ ಈ ಕೃತ್ಯ ಎಸಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
