Thursday, December 4, 2025
HomeSpecialಭಾರತದಲ್ಲಿ ಹೊಸ ಟ್ರೆಂಡ್: ಮದುವೆಗೂ ಬಂತು ಇನ್ಶೂರೆನ್ಸ್ (Insurance)! ಮದುವೆ ರದ್ದಾದರೆ ಖರ್ಚಾದ ಹಣವನ್ನೆಲ್ಲಾ ವಾಪಸ್...

ಭಾರತದಲ್ಲಿ ಹೊಸ ಟ್ರೆಂಡ್: ಮದುವೆಗೂ ಬಂತು ಇನ್ಶೂರೆನ್ಸ್ (Insurance)! ಮದುವೆ ರದ್ದಾದರೆ ಖರ್ಚಾದ ಹಣವನ್ನೆಲ್ಲಾ ವಾಪಸ್ ಪಡೆಯಬಹುದು!

ಲೈಫ್ ಇನ್ಶೂರೆನ್ಸ್ (Life Insurance), ಹೆಲ್ತ್ ಇನ್ಶೂರೆನ್ಸ್, ಬೈಕ್ ಅಥವಾ ಕಾರ್ ಇನ್ಶೂರೆನ್ಸ್ ಬಗ್ಗೆ ನಮಗೆಲ್ಲಾ ಗೊತ್ತು. ಆದರೆ, ಇತ್ತೀಚೆಗೆ ಭಾರತದಲ್ಲಿ ‘ವೆಡ್ಡಿಂಗ್ ಇನ್ಶೂರೆನ್ಸ್’ (Wedding Insurance) ಎಂಬ ಹೊಸ ಟ್ರೆಂಡ್ ಜೋರಾಗಿ ಕೇಳಿಬರುತ್ತಿದೆ. “ಅರೇ.. ಇದೇನಿದು ಮದುವೆಗೆ ಇನ್ಶೂರೆನ್ಸಾ?” ಅಂತ ಹುಬ್ಬೇರಿಸಬೇಡಿ. ಈಗಿನ ಕಾಲದ ಮದುವೆಗಳು ಮತ್ತು ಅಲ್ಲಿನ ಖರ್ಚು-ವೆಚ್ಚಗಳನ್ನು ನೋಡಿದರೆ, ಇದು ಅನಿವಾರ್ಯ ಎನಿಸುತ್ತಿದೆ.

Wedding Insurance in India is gaining popularity as it helps recover advance expenses when weddings get cancelled or postponed

ಹೌದು, ಇತ್ತೀಚಿನ ದಿನಗಳಲ್ಲಿ ಮದುವೆ ಎಂಬುದು ಕೇವಲ ಎರಡು ಕುಟುಂಬಗಳು ಒಂದಾಗುವ ಸರಳ ಸಂಪ್ರದಾಯವಾಗಿ ಉಳಿದಿಲ್ಲ. ಅದೊಂದು ‘ಸ್ಟೇಟಸ್ ಸಿಂಬಲ್’ (Status Symbol) ಆಗಿ ಬದಲಾಗಿದೆ. ಶ್ರೀಮಂತರಿಂದ ಹಿಡಿದು ಮಧ್ಯಮ ವರ್ಗದವರವರೆಗೂ ತಮ್ಮ ಶಕ್ತಿಮೀರಿ, ಸಾಲ ಮಾಡಿಯಾದರೂ ಅದ್ದೂರಿಯಾಗಿ ಮದುವೆ ಮಾಡಬೇಕೆಂಬ ಆಸೆ ಇಟ್ಟುಕೊಂಡಿರುತ್ತಾರೆ.

Insurance – ಮದುವೆ ಅಂದ್ರೆ ಬರೀ ತಾಳಿ ಕಟ್ಟೋದಲ್ಲ

ಈಗಿನ ಮದುವೆಗಳು ಒಂದೇ ದಿನಕ್ಕೆ ಮುಗಿಯುವುದಿಲ್ಲ. ಹಲ್ದಿ, ಮೆಹಂದಿ, ಸಂಗೀತ, ರಿಸೆಪ್ಷನ್, ಪ್ರೀ-ವೆಡ್ಡಿಂಗ್ ಶೂಟ್, ಡಿಜೆ ಪಾರ್ಟಿ, ಬಾರಾತ್ ಹೀಗೆ ವಾರಗಟ್ಟಲೆ ನಡೆಯುವ ಹಬ್ಬವಿದು. ಇದಕ್ಕಾಗಿ ಕೋಟಿಗಟ್ಟಲೆ ಹಣ ನೀರನಂತೆ ಖರ್ಚಾಗುತ್ತದೆ. ಇವೆಲ್ಲದರ ಜೊತೆಗೆ ಈಗ ‘ಡೆಸ್ಟಿನೇಷನ್ ವೆಡ್ಡಿಂಗ್’ (Destination Wedding) ಕ್ರೇಜ್ ಕೂಡ ಜೋರಾಗಿದೆ. ರಾಜಸ್ಥಾನದ ಅರಮನೆಗಳಲ್ಲೋ ಅಥವಾ ವಿದೇಶದ ಸುಂದರ ತಾಣಗಳಲ್ಲೋ ಮದುವೆ ಮಾಡಲು ತಿಂಗಳುಗಳ ಮುಂಚೆಯೇ ಪ್ಲಾನಿಂಗ್ ನಡೆಯುತ್ತದೆ.

Insurance – ರಿಸ್ಕ್ ಎಲ್ಲಿದೆ ಗೊತ್ತಾ?

ಹೀಗೆ ಅದ್ದೂರಿ ಮದುವೆಗಾಗಿ ವೆಡ್ಡಿಂಗ್ ಪ್ಲಾನರ್ಸ್‌ಗೆ, ಹೋಟೆಲ್‌ಗಳಿಗೆ, ಫ್ಲೈಟ್ ಟಿಕೆಟ್‌ಗಳಿಗೆ, ಡೆಕೋರೇಷನ್‌ಗೆ ಮತ್ತು ಊಟದ ಕಾಂಟ್ರಾಕ್ಟರ್‌ಗಳಿಗೆ ಲಕ್ಷಾಂತರ ಅಥವಾ ಕೋಟಿಗಟ್ಟಲೆ ರೂಪಾಯಿ ‘ಅಡ್ವಾನ್ಸ್’ (Advance) ನೀಡಲಾಗಿರುತ್ತದೆ. ಆದರೆ, ವಿಧಿಯಾಟ ಬೇರೆಯೇ ಇರಬಹುದು. ಅನಿವಾರ್ಯ ಕಾರಣಗಳಿಂದ ಅಥವಾ ಆಕಸ್ಮಾತ್ ಆಗಿ ಮದುವೆ ರದ್ದಾದರೆ ಅಥವಾ ಮುಂದೂಡಲ್ಪಟ್ಟರೆ ಕಥೆ ಏನು? ಕೊಟ್ಟ ಅಡ್ವಾನ್ಸ್ ಹಣವೆಲ್ಲಾ ಬೂದಿಯಲ್ಲಿ ಸುರಿದ ಪನ್ನೀರಾ? ಖಂಡಿತ ಇಲ್ಲ, ಇಲ್ಲಿಯೇ ಈ ‘ವೆಡ್ಡಿಂಗ್ ಇನ್ಶೂರೆನ್ಸ್’ ನಿಮ್ಮ ಸಹಾಯಕ್ಕೆ ಬರುತ್ತದೆ.

Wedding Insurance in India is gaining popularity as it helps recover advance expenses when weddings get cancelled or postponed

Insurance – ವೆಡ್ಡಿಂಗ್ ಇನ್ಶೂರೆನ್ಸ್‌ನ ಲಾಭಗಳೇನು?

ಈ ವಿಮೆಯು ಮದುವೆಗೆ ಮಾಡುವ ಖರ್ಚಿನ ಬಜೆಟ್ ಅನ್ನು ಅವಲಂಬಿಸಿರುತ್ತದೆ. ಇದನ್ನು ಮಾಡಿಸಿದ್ದರೆ ಈ ಕೆಳಗಿನ ಸಂದರ್ಭಗಳಲ್ಲಿ ನೀವು ಖರ್ಚು ಮಾಡಿದ ಹಣವನ್ನು ಕ್ಲೈಮ್ (Claim) ಮಾಡಬಹುದು:

  • ನೈಸರ್ಗಿಕ ವಿಕೋಪಗಳು: ಮಳೆ, ಪ್ರವಾಹ ಅಥವಾ ಇತರೆ ನೈಸರ್ಗಿಕ ವಿಕೋಪಗಳಿಂದ ಮದುವೆ ನಿಂತುಹೋದರೆ.
  • ಅನಿರೀಕ್ಷಿತ ಸಾವು: ಕುಟುಂಬದ ಹತ್ತಿರದ ಸಂಬಂಧಿಗಳು ಅಥವಾ ರಕ್ತಸಂಬಂಧಿಗಳು ಮದುವೆ ಸಮಯದಲ್ಲಿ ಮರಣಹೊಂದಿದರೆ.
  • ಅಪಘಾತ: ಮದುಮಕ್ಕಳಿಗೆ ಅಪಘಾತ ಸಂಭವಿಸಿ ಮದುವೆ ಮುಂದೂಡಲ್ಪಟ್ಟರೆ.

ಇಂತಹ ಸಂದರ್ಭಗಳಲ್ಲಿ ಮದುವೆ ರದ್ದಾದರೆ, ನೀವು ಹೋಟೆಲ್, ಡೆಕೋರೇಷನ್ ಅಥವಾ ಟ್ರಾವೆಲ್‌ಗೆ ಮುಂಗಡವಾಗಿ ನೀಡಿದ ಹಣವನ್ನು ಇನ್ಶೂರೆನ್ಸ್ ಕಂಪನಿಗಳು ಭರಿಸುತ್ತವೆ. Read this also : ಸಾಲದ ಜೊತೆಗೆ ಸಬ್ಸಿಡಿ ಕೂಡ ಲಭ್ಯ : ಕೇಂದ್ರ ಸರ್ಕಾರದ ಈ 5 ಉದ್ಯಮ ಸಾಲ ಯೋಜನೆಗಳ ಬಗ್ಗೆ ನಿಮಗೆ ಗೊತ್ತಾ?

Wedding Insurance in India is gaining popularity as it helps recover advance expenses when weddings get cancelled or postponed

ಮುಂದಿನ ದಿನಗಳಲ್ಲಿ ಬಿಗ್ ಟ್ರೆಂಡ್

ಇದು ಪಾಶ್ಚಿಮಾತ್ಯ ದೇಶಗಳಲ್ಲಿ ಈಗಾಗಲೇ ಜನಪ್ರಿಯವಾಗಿದೆ. ಭಾರತದಲ್ಲಿ ಈಗಷ್ಟೇ ಇದರ ಬಗ್ಗೆ ಜಾಗೃತಿ ಮೂಡುತ್ತಿದೆ. ನಾವು ಕಷ್ಟಪಟ್ಟು ದುಡಿದ ಹಣ, ಒಂದು ಅನಿರೀಕ್ಷಿತ ಘಟನೆಯಿಂದ ಹಾಳಾಗಬಾರದು ಎಂದರೆ, ಮದುವೆ ಬಜೆಟ್‌ನಲ್ಲಿ ಸಣ್ಣ ಮೊತ್ತವನ್ನು ಇನ್ಶೂರೆನ್ಸ್‌ಗೆ ಎತ್ತಿಡುವುದು ಜಾಣತನ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಡುತ್ತಾರೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular