ಸಾಮಾನ್ಯವಾಗಿ ಸಾರ್ವಜನಿಕ ಸಾರಿಗೆಯಲ್ಲಿ ಮಹಿಳೆಯರ ಮೇಲೆ ಕಿರುಕುಳ ನಡೆಯುವ ಸುದ್ದಿಗಳನ್ನೇ ನಾವು ಕೇಳಿರುತ್ತೇವೆ. ಆದರೆ ಕಾಲ ಬದಲಾದಂತೆ, ರೈಲಿನಲ್ಲಿ ಗಂಡಸರಿಗೂ ರಕ್ಷಣೆ ಇಲ್ಲವೇನೋ ಅನ್ನಿಸುವಂತಹ (Watch) ಘಟನೆಯೊಂದು ನಡೆದಿದೆ! ‘ಕಾಮಾತುರಾಣಾಂ ನ ಭಯಂ ನ ಲಜ್ಜಾ’ ಎನ್ನುವ ಮಾತಿನಂತೆ, ಈ ಪತಿರಾಯ ಮಾಡಬಾರದ್ದು ಮಾಡಿ ಈಗ ಜಗತ್ತಿನ ಮುಂದೆ ನಗೆಪಾಟಲಿಗೀಡಾಗಿದ್ದಾನೆ.

Watch – ನಡೆದಿದ್ದೇನು? ರೈಲಿನಲ್ಲಿ ಅಸಭ್ಯ ವರ್ತನೆ!
ರೈಲಿನಲ್ಲಿ ರಾತ್ರಿ ವೇಳೆ ಪ್ರಯಾಣಿಕರೆಲ್ಲರೂ ಗಾಢ ನಿದ್ರೆಯಲ್ಲಿದ್ದಾಗ ಈ ಶಾಕಿಂಗ್ ಘಟನೆ ಸಂಭವಿಸಿದೆ. ಅಲ್ಲಿ ಒಬ್ಬ ಸುಂದರ ಯುವಕ ನೆಮ್ಮದಿಯಿಂದ ಮಲಗಿದ್ದ. ಅದೇ ಬೋಗಿಯಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯ ಜೊತೆ ಪ್ರಯಾಣಿಸುತ್ತಿದ್ದ. ಆದರೆ ಈ ‘ಪತಿ ಮಹಾಶಯ’ನ ಕಣ್ಣು ಮಾತ್ರ ತನ್ನ ಪತ್ನಿಯ ಮೇಲಿರದೆ, ಪಕ್ಕದ ಸೀಟಿನಲ್ಲಿ ಮಲಗಿದ್ದ ಯುವಕನ ಮೇಲೆ ಬಿದ್ದಿದೆ. ತನ್ನ ವಿಕೃತ ಆಸೆಯನ್ನು ತಡೆಯಲಾರದ ಈ ವ್ಯಕ್ತಿ, ಮೆಲ್ಲನೆ ಹೋಗಿ ನಿದ್ರೆಯಲ್ಲಿದ್ದ ಆ ಯುವಕನ ಅಂಗಾಂಗ ಮುಟ್ಟಿ, ಅನಿರೀಕ್ಷಿತವಾಗಿ ಜೋರಾಗಿ ಕಿಸ್ ಮಾಡಿದ್ದಾನೆ!
ಬಿಸಿರಕ್ತದ ಯುವಕ ಸುಮ್ಮನೆ ಬಿಟ್ಟಾನೆಯೇ?
ನಿದ್ರೆಯಲ್ಲಿದ್ದ ಯುವಕ ಯಾರೋ ಮುಟ್ಟಿದಂತಾಗಿ ಒಮ್ಮೆಲೇ ಬೆಚ್ಚಿಬಿದ್ದಿದ್ದಾನೆ. (Watch) ಕಣ್ಣು ಬಿಟ್ಟು ನೋಡಿದರೆ ತನ್ನ ಮೇಲೆ ವ್ಯಕ್ತಿಯೊಬ್ಬ ಅಸಭ್ಯವಾಗಿ ವರ್ತಿಸುತ್ತಿರುವುದು ಕಂಡು ಆಘಾತಕ್ಕೊಳಗಾಗಿದ್ದಾನೆ. ಕೂಡಲೇ ಎಚ್ಚೆತ್ತ ಆ ಬಿಸಿರಕ್ತದ ಯುವಕ, ಆ ವ್ಯಕ್ತಿಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾನೆ. ಮಧ್ಯರಾತ್ರಿಯೆನ್ನದೆ ಆ ಕಿರಾತಕನಿಗೆ ಸರಿಯಾದ ಪಾಠ ಕಲಿಸಿದ್ದಾನೆ.
ಪತಿಯ ಕಿತಾಪತಿಗೆ ಬೆಚ್ಚಿಬಿದ್ದ ಪತ್ನಿ!
ಇತ್ತ ತನ್ನ ಗಂಡ ಮಾಡುತ್ತಿರುವ ಕೆಲಸ ಕಂಡು ಪತ್ನಿಗೂ ದಿಕ್ಕು ತೋಚದಂತಾಗಿದೆ. “ಪತಿಯೇ ಪರದೈವ” ಎಂದು ನಂಬಿದ್ದ ಆಕೆ, ಪರಿಸ್ಥಿತಿ ಕೈಮೀರುತ್ತಿರುವುದನ್ನು ಕಂಡು ಯುವಕನ ಕಾಲು ಹಿಡಿದು “ನನ್ನ ಪತಿಯನ್ನು ಬಿಟ್ಟುಬಿಡಿ, ತಪ್ಪಾಗಿದೆ” ಎಂದು ಗೋಗರೆದಿದ್ದಾಳೆ. ಆದರೆ ಕೆರಳಿದ್ದ ಯುವಕ ಆಕೆಯನ್ನು ನೇರವಾಗಿ ಪ್ರಶ್ನಿಸಿದ್ದಾನೆ— “ಒಂದು ವೇಳೆ ನಿಮ್ಮ ಮೇಲೆ ಯಾರಾದರೂ ಹೀಗೆ ಮಾಡಿದ್ದರೆ (Watch) ನೀವು ಸುಮ್ಮನಿರುತ್ತಿದ್ದಿರಾ?” ಎಂದು ಕೇಳಿದಾಗ ಆಕೆಗೆ ಉತ್ತರವಿಲ್ಲದಂತಾಗಿದೆ. ಇದೇ ಪ್ರಶ್ನೆಯನ್ನು ಆ ವಿಕೃತ ವ್ಯಕ್ತಿಗೂ ಕೇಳಿದಾಗ ಆತ ಮಾತು ಬಾರದೆ ತಲೆತಗ್ಗಿಸಿದ್ದಾನೆ.
Read this also : ರೈಲಿನಲ್ಲಿ ಸೀಟಿಗಾಗಿ ‘ಚಪ್ಪಲಿ’ ಯುದ್ಧ: ಆಂಟಿಗೆ ಗ್ಯಾಪ್ ಇಲ್ಲದೆ ಬಾರಿಸಿದ ಯುವಕ! ವಿಡಿಯೋ ವೈರಲ್…!
ಕ್ಷಮೆ ಕೇಳಿದರೂ ಬಿಡದ ಯುವಕ!
ತಪ್ಪಾಯ್ತು ಎಂದು ಆ ವ್ಯಕ್ತಿ ಕಾಲು ಹಿಡಿದು ಬೇಡಿಕೊಂಡರೂ, ಯುವಕ ಮಾತ್ರ ಆತನ ಕಾಲರ್ ಹಿಡಿದು ದರದರನೆ ಎಳೆದುಕೊಂಡು ಹೋಗಿದ್ದಾನೆ. “ನಿನ್ನನ್ನು ಪೊಲೀಸರಿಗೆ ಒಪ್ಪಿಸದೆ ಬಿಡುವುದಿಲ್ಲ” ಎಂದು ಗುಡುಗಿದ್ದಾನೆ. ಸಹ ಪ್ರಯಾಣಿಕರೆಲ್ಲರೂ (Watch) ಈ ಘಟನೆಯನ್ನು ಮೂಕಪ್ರೇಕ್ಷಕರಾಗಿ ನೋಡುತ್ತಿದ್ದರು. ಅಂತಿಮವಾಗಿ ಯುವಕ ಆತನನ್ನು ಪೊಲೀಸರ ವಶಕ್ಕೆ ನೀಡಿದ್ದಾನೆ ಎನ್ನಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್!
ಈ ಘಟನೆಯ ವಿಡಿಯೋ ಈಗ bharat.broadcast ಎಂಬ (Video Here) ಇನ್ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೆಯಾಗಿದ್ದು, ನೆಟ್ಟಿಗರು ಯುವಕನ ಧೈರ್ಯಕ್ಕೆ ಶಹಬ್ಬಾಸ್ ಎನ್ನುತ್ತಿದ್ದಾರೆ. “ವಿಕೃತಿ ಎನ್ನುವುದು ಕೇವಲ ಹೆಣ್ಣು ಮಕ್ಕಳ ಮೇಲೆ ಮಾತ್ರವಲ್ಲ, ಈಗ (Watch) ಗಂಡಸರಿಗೂ ಅಪಾಯ ಎದುರಾಗಿದೆ. ಇಂತಹವರಿಗೆ ಕಠಿಣ ಶಿಕ್ಷೆಯಾಗಬೇಕು” ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.
