Waqf Board – ಸದ್ಯ ದೇಶದಲ್ಲಿ ವಕ್ಫ್ ಬೋರ್ಡ್ ಗೆ ಸಂಬಂಧಿಸಿದಂತೆ ಚರ್ಚೆ ನಡೆಯುತ್ತಿದ್ದು, ಈ ನಡುವೆ ಕರ್ನಾಟಕದ ವಿಜಯಪುರ ವ್ಯಾಪ್ತಿಯ ರೈತರ ಜಮೀನಿಗೆ ವಕ್ಫ್ ಬೋರ್ಡ್ (Waqf Board) ನಿಂದ ನೀಡಿರುವ ನೊಟೀಸ್ ಕುರಿತು ಸಚಿವ ಜಮೀರ್ ಅಹಮದ್ ರಿಯಾಕ್ಟ್ ಆಗಿದ್ದಾರೆ. ಈ ನೊಟೀಸ್ ಅನ್ನು ಸಮರ್ಥನೆ ಮಾಡಿಕೊಂಡಿರುವ ಅವರು, ನಾವು ರೈತರ ಜಮೀನು ಒಂದು ಇಂಚು ಪಡೆದಿಲ್ಲ. ವಕ್ಫ್ ಗೆ ಸೇರಿದ ಆಸ್ತಿಯನ್ನು ನಾವು ದಾಖಲಾತಿ (Waqf Board ) ಮಾಡಿಕೊಂಡರೇ ತಪ್ಪೇನು ಎಂದು ಪ್ರಶ್ನೆ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಈ ಸಂಬಂಧ ಮಾತನಾಡಿದ ಸಚಿವ ಜಮೀರ್ ಅಹ್ಮದ್ ವಿಜಯಪುರದಲ್ಲಿ ನಾವು ವಕ್ಫ್ ಆದಾಲತ್ ಮಾಡುತ್ತಿದ್ದೇವು. ಈ ಸಭೆಗೆ ಶಾಸಕ ಯತ್ನಾಳ್ ರವರನ್ನು ಸಹ ಕರೆದಿದ್ದೆವು. ಆದರೆ ಅವರು ಸಭೆಗೆ ಬರದೇ ಸುಮ್ಮನೆ ಆರೋಪಗಳನ್ನು ಮಾಡುತ್ತಿದ್ದಾರೆ. ರೈತರ ಒಂದು ಇಂಚು ಆಸ್ತಿ ಪಡೆದಿಲ್ಲ. ರೈತರ ಆಸ್ತಿ ಆಗಿದ್ರೆ ಅದನ್ನ ವಾಪಸ್ ಕೊಡ್ತೀವಿ. ಸುಮ್ಮನೆ ಆರೋಪ ಮಾಡ್ತಿದ್ದಾರೆ. ವಕ್ಫ್ ಆಸ್ತಿ ದಾಖಲಾತಿ ಮಾಡ್ತಿದ್ದೇವೆ. ಅದರಲ್ಲಿ ರೈತರ ಜಾಗ ಯಾವುದೂ ಇಲ್ಲ. ಇವರು ಸುಮ್ಮನೆ ಕ್ರಿಯೇಟ್ ಮಾಡಿಕೊಂಡಿದ್ದಾರೆ. ರೈತರ ಆಸ್ತಿ ಯಾರು ಮುಟ್ಟೋಕೆ ಆಗುವುದಿಲ್ಲ ಎಂದು ರೈತರಿಗೆ ವಕ್ಫ್ ಬೋರ್ಡ್ ನಿಂದ ನೀಡಿದ ನೊಟೀಸ್ ಸಮರ್ಥನೆ ಮಾಡಿಕೊಂಡರು.
ಇನ್ನೂ ಶಾಸಕ ಯತ್ನಾಳ್ ರವರಿಗೂ ಈ ಸಭೆಗೆ ಆಹ್ವಾನ ನೀಡಿದ್ದೆವು. ಆದರೆ ಅವರು ಬರಲಿಲ್ಲ. ಮೂರು ದಿನಗಳು ಕಳೆದ ಬಳಿಕ ಆರೋಪ ಮಾಡುತ್ತಿದ್ದಾರೆ. ವಕ್ಫ್ ಆಸ್ತಿಯನ್ನು ನಾವು ದಾಖಲಾತಿ ಮಾಡಿಕೊಂಡರೇ ತಪ್ಪೇನು, ನಾವು ರೈತರಿಗೆ ಸೇರಿದ ಆಸ್ತಿಯನ್ನು ಒಂದು ಇಂಚು ಪಡೆದುಕೊಂಡಿಲ್ಲ. ವಕ್ಫ್ ಆಸ್ತಿ ಖಾತಾ ಮಾಡಿದ್ದೇವೆ. ಬೇರೆಯವರಿಗೆ ಸೇರಿದ ಜಾಗವನ್ನು ನಾವು ಹೇಗೆ ಪಡೆಯಲು ಸಾಧ್ಯ. ಶಾಸಕ ಯತ್ನಾಳ್ ರವರು ಸಭೆಗೆ ಬಂದು ವಿರೋಧ ಮಾಡಬೇಕಾಗಿತ್ತು. ಆದರೆ ಸಭೆಗೆ ಬರಲಿಲ್ಲ ಏಕೆ ಎಂದು ಪ್ರಶ್ನೆ ಮಾಡಿದರು.
ಇನ್ನೂ ವಿಜಯಪುರ ಜಿಲ್ಲೆಯಲ್ಲಿ ಉಸ್ತುವಾರಿ ಸಚಿವ ಎಂ ಬಿ ಪಾಟೀಲ ಮತಕ್ಷೇತ್ರದ ಹೊನವಾಡ ಗ್ರಾಮದ ರೈತರ ಜಮೀನು ತನ್ನದೆಂದು ವಕ್ಫ್ ಬೋರ್ಡ್ ನೋಟಿಸ್ ನೀಡಿತ್ತು. ಈ ಸಂಬಂಧ ರೈತರು ವಕ್ಫ್ ಕಾಯ್ದೆ ಕುರಿತ ಸಂಸದೀಯ ಜಂಟಿ ಸದನ ಸಮಿತಿ ಸದಸ್ಯರು ಆಗಿರುವ ಸಂಸದ ತೇಜಸ್ವೀ ಸೂರ್ಯರನ್ನು ಭೇಟಿ ಮಾಡಿದ್ದರು. ಈ ಕುರಿತು ಮಾತನಾಡಿದ ಅವರು, ತರಾತುರಿಯಲ್ಲಿ ವಕ್ಫ್ ಬೋರ್ಡ್ ನಿಂದ ನೀಡಿದ ನೊಟೀಸ್ ನಿಂದ ರಾಜ್ಯದ ಸಾವಿರಾರು ರೈತರು, ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದಾರೆ. ಅವರ ಆಂತಕವನ್ನು ಶೀಘ್ರವೇ ದೂರ ಮಾಡಿ ನ್ಯಾಯ ನೀಡುವ ಕೆಲಸ ಮಾಡಲಾಗುತ್ತದೆ. ವಕ್ಫ್ ತಿದ್ದುಪಡಿ ಬಿಲ್ ಜಾರಿಯಾಗುವುದಕ್ಕೂ ಮುನ್ನಾ ಸಾಧ್ಯವಾದಷ್ಟು ಜಾಗವನ್ನು ವಕ್ಫ್ ಹೆಸರಿಗೆ ನೊಂದಣಿ ಮಾಡಿಕೊಡುವ ಹುನ್ನಾರವನ್ನು ರಾಜ್ಯ ಸರ್ಕಾರ ಮಾಡುತ್ತಿರುವುದು ದೊಡ್ಡ ಅಪರಾದ ಎಂದು ಸಂಸದ ತೇಜಸ್ವಿ ಸೂರ್ಯ ರಾಜ್ಯ ಸರ್ಕಾರದ ವಿರುದ್ದ ಕಿಡಿಕಾರಿದರು.