ದೇಶದಾದ್ಯಂತ ಚುನಾವಣಾ ಕಾವು ಜೋರಾಗಿದ್ದು, ಮತದಾರರನ್ನು ಸೆಳೆಯಲು ರಾಜಕೀಯ ಪಕ್ಷಗಳು ತಮ್ಮದೇ ಆದ ಭರವಸೆಗಳನ್ನು ನೀಡುವ ಕೆಲಸ ಮಾಡುತ್ತಿದ್ದಾರೆ. ಮತದಾನದ ಮಹತ್ವ, ಮತದಾನ ಮಾಡುವಂತೆ ಚುನಾವಣಾ ಆಯೋಗ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಇದೀಗ ಮತದಾನದ ಶೇಕಡಾವಾರು ಪ್ರಮಾಣ ಏರಿಕೆ ಮಾಡಲು ವಿಶೇಷ ಲಕ್ಕಿ ಡ್ರಾ ಒಂದನ್ನು ಆಯೋಗ ಜಾರಿ ಮಾಡಿದೆ. ಈ ಡ್ರಾ ನಲ್ಲಿ ಆಯ್ಕೆಯಾದವರಿಗೆ ಭರ್ಜರಿ ಆಫರ್ ಕೊಟ್ಟಿದೆ. ಅಷ್ಟಕ್ಕೂ ಆಫರ್ ಏನು ಎಂಬ ವಿಚಾರಕ್ಕೆ ಬಂದರೇ,
ಮಧ್ಯಪ್ರದೇಶದ ಭೂಪಾಲ್ ನಲ್ಲಿ ಮತದಾನದ ಶೇಕಡಾವಾರು ಪ್ರಮಾಣವನ್ನು ಹೆಚ್ಚಿಸಲು ವಿಶೇಷ ಲಕ್ಕಿ ಡ್ರಾ ಒಂದನ್ನು ಘೋಷಣೆ ಮಾಡಿದೆ. ಮೇ.7 ರಂದು ಮತದಾನ ಮಾಡುವವರಿಗೆ ಈ ಲಕ್ಕಿ ಡ್ರಾನಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ತಮ್ಮ ಅಮೂಲ್ಯವಾದ ಮತ ಚಲಾಯಿಸುವ ಮೂಲಕ ಈ ಲಕ್ಕಿ ಡ್ರಾನಲ್ಲಿ ಭಾಗವಹಿಸಿ ವಿಜೇತರಾಗಬಹುದು. ಮತದಾನದ ದಿನದಂದು ಚುನಾವಣಾ ಆಯೋಗ ಭೂಪಾಲ್ ಲೋಕಸಭಾ ಕ್ಷೇತ್ರದಲ್ಲಿ ಪ್ರತಿ ಎರಡು ಗಂಟೆಗೊಮ್ಮೆ ಲಕ್ಕಿ ಡ್ರಾ ಘೋಷಣೆ ಮಾಡಿದೆ. ಮತದಾನದ ನಂತ ತಮ್ಮ ಶಾಯಿ ಗುರುತು ತೋರಿಸುವವರಿಗೆ ಡೈಮಂಡ್ ರಿಂಗ್, ಫ್ರಿಜ್ಡ್, ಟಿವಿ ಸೇರಿದಂತೆ ಮತಷ್ಟು ಬಹುಮಾನ ಗೆಲ್ಲುವ ಅವಕಾಶವಿದೆ ಎಂದು ತಿಳಿಸಿದೆ.
ಚುನಾವಣಾ ಆಯೋಗದ ಈ ಬಂಪರ್ ಆಫರ್ ನಿಂದ ಮತದಾನದ ಪ್ರಮಾಣ ಹೆಚ್ಚಾಗುತ್ತಾ ಇಲ್ಲವೇ ಎಂಬುದನ್ನು ಕಾದು ನೋಡಬೇಕಿದೆ. ಮೇ.7 ರಂದು ಮೂರನೇ ಹಂತದ ಮತದಾನ ನಡೆಯಲಿದೆ. ಮೊದಲ ಎರಡು ಹಂತಗಳಲ್ಲಿ ನಡೆದ ಚುನಾವಣೆಯಲ್ಲಿ ಮಧ್ಯಪ್ರದೇಶದ ಮತದಾನದ ಪ್ರಮಾಣ ಕಡಿಮೆಯಾಗಿದೆ. ಸರಾಸರಿ ಶೇ.8.5 ಗಿಂತಲೂ ಕಡಿಮೆಯಾಗಿದೆ. ಭೂಪಾಲ್ ನ ನಿವಾಸಿಗಳು ಮತದಾನದ ಬಗ್ಗೆ ನಿರಾಸಕ್ತಿ ಹೊಂದಿರುವುದು ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಕಳೆದ 2019 ರಲ್ಲಿ ಮತದಾನದ ಶೇಕಡಾವಾರು ಬೇರೆ ಕಡೆ ಹೆಚ್ಚಾಗಿದ್ದರೇ ಭೂಪಾಲ್ ನಲ್ಲಿ ಮಾತ್ರ ಶೇ.65.7 ರಷ್ಟು ಮಾತ್ರ ಮತದಾನವಾಗಿತ್ತು. ಈ ಕಾರಣದಿಂದ ಮತದಾನ ಹೆಚ್ಚಿಸಲು ಚುನಾವಣಾ ಆಯೋಗ ಎಲ್ಲ ರೀತಿಯ ಪ್ರಯತ್ನ ನಡೆಸುತ್ತಿದೆ.