Viral – ರೈಲು ಪ್ರಯಾಣದಲ್ಲಿ ನಿದ್ದೆ ಮಾಡುವುದು ಸಾಮಾನ್ಯ. ಆದರೆ, ಈ ಬಾರಿ ರೈಲಿನಲ್ಲಿ ನಡೆದ ಒಂದು ಘಟನೆ ಸೋಶಿಯಲ್ ಮೀಡಿಯಾ ಮತ್ತು ಸಾರ್ವಜನಿಕರ ಚರ್ಚೆಗೆ ಕಾರಣವಾಗಿದೆ. ರೈಲಿನಲ್ಲಿ ಮಹಿಳೆಗಳು ಮತ್ತು ಮಕ್ಕಳ ಮೇಲೆ ದೌರ್ಜನ್ಯದ ಘಟನೆಗಳು ಸಾಮಾನ್ಯವಾಗಿ ವರದಿಯಾಗುತ್ತಿರುವಾಗ, ಈ ಸಲ ಗಂಡಸೊಬ್ಬನ ಮೇಲೆ ಕಾಮುಕ ವರ್ತನೆ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ಭಾರಿ ಸದ್ದು ಮಾಡುತ್ತಿದೆ.

Viral – ಘಟನೆಯ ವಿವರ:
ರೈಲು ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದ ಸಮಯದಲ್ಲಿ, ಲೋವರ್ ಬರ್ತ್ ನಲ್ಲಿ ಒಬ್ಬ ವ್ಯಕ್ತಿ ಮಲಗಿದ್ದ. ಅವನ ಪಕ್ಕದಲ್ಲಿ ದಂಪತಿ ಜೋಡಿ ಕುಳಿತಿದ್ದರು. ಮಲಗಿದ್ದ ವ್ಯಕ್ತಿಯನ್ನು ಬೇರೆಡೆ ಮಲಗಲು ಸೂಚಿಸಿದ್ದರೂ, ಜಾಗದ ಕೊರತೆಯಿಂದಾಗಿ ಅವನು ಅಲ್ಲೇ ಮಲಗಿದ್ದ. ಆದರೆ, ನಂತರ ಅವನು ಏಕಾಏಕಿ ಎದ್ದು, ತನ್ನ ಮೇಲೆ ಕುಳಿತಿದ್ದ ವ್ಯಕ್ತಿ ಮುತ್ತಿಕ್ಕಿ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಿದ್ದಾನೆ. ಬಳಿಕ ರೈಲಿನಲ್ಲಿ ರಂಪಾಟ ಜೋರಾಗಿದೆ. ಮಲಗಿದ್ದ ವ್ಯಕ್ತಿ ತನಗೆ ನ್ಯಾಯ ಬೇಕು ಎಂದು ಕೂಗಾಡಲು ಪ್ರಾರಂಭಿಸಿದ. ಆದರೆ, ರೈಲಿನಲ್ಲಿದ್ದ ಇತರ ಪ್ರಯಾಣಿಕರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಇದರ ನಡುವೆ, ಮುತ್ತಿಕ್ಕಿದವನ ಪತ್ನಿ ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸಿದರೂ ರಂಪಾಟ ಕಡಿಮೆಯಾಗಿಲ್ಲ. ಈ ಕುರಿತು ದೃಶ್ಯ ಇದೀಗ ಭಾರಿ ಚರ್ಚೆಗೆ ಕಾರಣವಾಗಿದೆ.
Viral – ವಿಡಿಯೋದಲ್ಲಿ ಸೆರೆಹಿಡಿದ ಘಟನೆ:
ಈ ಘಟನೆಯ ಸಂಪೂರ್ಣ ವಿವರ ವಿಡಿಯೋದಲ್ಲಿ ಸೆರೆಹಿಡಿಯಲಾಗಿದೆ. ಆರೋಪ ಮಾಡಿದ ವ್ಯಕ್ತಿಯೇ ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾನೆ. ಅವನು, “ನನ್ನ ಮೇಲೆ ನಡೆದ ಈ ಕೃತ್ಯಕ್ಕೆ ಪಾಠ ಕಲಿಸುತ್ತೇನೆ” ಎಂದು ಹೇಳಿದ್ದಾನೆ. ವಿಡಿಯೋದಲ್ಲಿ, ರೈಲಿನ ಸೀಟುಗಳು ತುಂಬಿ ತುಳುಕುತ್ತಿರುವುದು ಮತ್ತು ಜಾಗದ ಕೊರತೆಯಿಂದಾಗಿ ಪ್ರಯಾಣಿಕರು ತೊಂದರೆ ಅನುಭವಿಸುತ್ತಿರುವುದು ಸ್ಪಷ್ಟವಾಗಿ ಕಾಣುತ್ತದೆ. ರೈಲು ಪ್ರಯಾಣಿಕರಿಂದ ತುಂಬಿ ತುಳುಕುತ್ತಿದೆ. ಸೀಟುಗಳು ಭರ್ತಿಯಾಗಿದೆ. ಎಲ್ಲೆಲ್ಲಿ ಜಾಗ ಇದೆಯೋ ಅಲ್ಲೆಲ್ಲಾ ಕುಳಿತಿದ್ದಾರೆ. ಎಲ್ಲಾ ಖಾಲಿ ಜಾಗಗಳು ತುಂಬಿ ತುಳುಕುತ್ತಿದೆ. ಇದರ ನಡುವೆ ಗಂಭೀರ ಆರೋಪವೂ ಕೇಳಿಬಂದಿದೆ.
ಈ ಘಟನೆಯ ನಂತರ, ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಚರ್ಚೆ ನಡೆದಿದೆ. ಕೆಲವರು, “ಪತ್ನಿ ಜೊತೆಗಿರುವಾಗ ಮತ್ತೊಬ್ಬನಿಗೆ ಮುತ್ತಿಕ್ಕುವ ಅಗತ್ಯವೇನಿತ್ತು?” ಎಂದು ಪ್ರಶ್ನಿಸಿದ್ದಾರೆ. ಇನ್ನು ಕೆಲವರು, “ಮಹಿಳೆಯರಿಗೆ ಆಗಿದ್ದರೆ ಈ ಘಟನೆಗೆ ಹೇಗೆ ಪ್ರತಿಕ್ರಿಯಿಸಲಾಗುತ್ತಿತ್ತು?” ಎಂದು ಪ್ರಶ್ನಿಸಿದ್ದಾರೆ. ಆರೋಪಿತನ ಪತ್ನಿಯ ಪ್ರಯತ್ನಗಳ ಹೊರತಾಗಿಯೂ, ರಂಪಾಟ ಮುಗಿಯಲಿಲ್ಲ. ಕೊನೆಗೆ, ಕಾಲರ್ ಹಿಡಿದು ಎಳೆದುಕೊಂಡು ಹೋಗುವ ದೃಶ್ಯವೂ ವಿಡಿಯೋದಲ್ಲಿ ಕಾಣಿಸಿಕೊಂಡಿದೆ.
Viral – ವೈರಲ್ ವಿಡಿಯೋ ಇಲ್ಲಿದೆ ನೋಡಿ: Click Here
ಮುತ್ತಿಕ್ಕುವ ಅವಶ್ಯಕತೆ ತನ್ನ ಗಂಡನಿಗಿಲ್ಲ. ಗಂಡ ಆ ರೀತಿಯ ವ್ಯಕ್ತಿಯಲ್ಲ. ನಿಮಗೆ ಮೊದಲೆ ಬೇರೆ ಸ್ಥಳದಲ್ಲಿ ಮಲಗುವಂತೆ ಸೂಚಿಸಿದ್ದರೂ ನೀವು ನಿರಾಕರಿಸಿದ್ದೀರಿ ಎಂದು ಮಹಿಳೆ ಪ್ರತಿಕ್ರಿಯಿಸಿದ್ದಾರೆ. ಸುಖಾಸುಮ್ಮನೆ ಆರೋಪ ಮಾಡಬೇಡಿ. ಜಗಳ ಹೊಡೆದಾಟ ಬೇಡ, ಇಲ್ಲಿಗೆ ಬಿಟ್ಟುಬಿಡಿ ಎಂದು ಮಹಿಳೆ ಮನವಿ ಮಾಡಿಕೊಂಡಿದ್ದಾಳೆ. ಆದರೆ ಕಾಲರ್ ಹಿಡಿದು ಎಳೆದು ತಂದ ವ್ಯಕ್ತಿ ಹಲ್ಲೆಗೆ ಮುಂದಾದ ಘಟನೆ ರೈಲು ಪ್ರಯಾಣದಲ್ಲಿ ನಡೆದಿದೆ. ಈ ಸುದ್ದಿ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.