Saturday, August 30, 2025
HomeNationalViral : ಕಳ್ಳತನ ಮಾಡಲು ಮನೆಯೊಳಗೆ ನುಗ್ಗಿದ ಕಳ್ಳರು, ಏನು ಸಿಗದೇ ಇದ್ದ ಕಾರಣ ಅವರು...

Viral : ಕಳ್ಳತನ ಮಾಡಲು ಮನೆಯೊಳಗೆ ನುಗ್ಗಿದ ಕಳ್ಳರು, ಏನು ಸಿಗದೇ ಇದ್ದ ಕಾರಣ ಅವರು ಮಾಡಿದ್ದಾದ್ರೂ ಏನು ಗೊತ್ತಾ?

Viral – ತಮಿಳುನಾಡಿನ ತಿರುಪತ್ತೂರು ಜಿಲ್ಲೆಯ ವಾಣಿಯಂಬಾಡಿಯಲ್ಲಿ ನಡೆದ ಒಂದು ವಿಚಿತ್ರ ಕಳ್ಳತನ ಇತ್ತೀಚೆಗೆ ದೊಡ್ಡ ಚರ್ಚೆಗೆ ಕಾರಣವಾಗಿದೆ. ವಾಣಿಯಂಬಾಡಿ ನೆತಾಜಿ ನಗರದಲ್ಲಿ ವಾಸವಿರುವ ಬಾಸಿಲ್ ಮತ್ತು ಅವರ ಕುಟುಂಬ ಬುಧವಾರ ರಾತ್ರಿ ಸಂಬಂಧಿಕರ ಮನೆಗೆ ಹೋಗಿದ್ದರು. ಈ ಸಮಯದಲ್ಲಿ ಮಮನೆಯಲ್ಲಿ ಯಾರೂ ಇಲ್ಲದೇ ಇರುವುದನ್ನು ಗಮನಿಸಿದ ಕಳ್ಳರು ಅರ್ಥರಾತ್ರಿ ಮನೆಗೆ ನುಗ್ಗಿದ್ದಾರೆ. ಮನೆಯೊಳಗೆ ಕಳ್ಳತನ ಮಾಡಲು ನುಗ್ಗಿದ ಕಳ್ಳರಿಗೆ ಏನು ಸಿಗದ ಕಾರಣ ಅವರು ಮಾಡಿದ ಕೆಲಸ ಇದೀಗ ಭಾರಿ ಚರ್ಚೆಯಾಗಿದೆ.

Thieves break into a house in Tamil Nadu and drink rose milk before leaving

ತಮಿಳುನಾಡಿನ ತಿರುಪತ್ತೂರು ಜಿಲ್ಲೆಯ ವಾಣಿಯಂಬಾಡಿಯ ನೆತಾಜಿ ನಗರದಲ್ಲಿ ಬಾಸಿಲ್ ಎಂಬುವವರು ತಮ್ಮ ಸಂಬಂಧಿಕರ ಮನೆಗೆ ಹೋಗಿದ್ದರು. ಇದನ್ನು ಗಮನಿಸಿದ ಕಳ್ಳರು ಮನೆಯೊಳಗೆ ನುಗ್ಗಿದ್ದಾರೆ. ಯಾರು ಇಲ್ಲದೇ ಇರುವುದನ್ನು ಗಮನಿಸಿದ ಕಳ್ಳರು ಅರ್ಧರಾತ್ರಿ ಮನೆಯೊಳಗೆ ನುಗ್ಗಿದ್ದಾರೆ. ಇನ್ನೂ ಕಳ್ಳರು ಮನೆಯ ಬೀಗ ಮುರಿದಿದ್ದರು. ಮರು ದಿನ ಬಂದಂತಹ ಮನೆಯ ಮಾಲೀಕ ಬೀಗ ಮುರಿದಿರುವುದನ್ನು ಕಂಡು ಶಾಕ್ ಆಗಿದ್ದಾನೆ.  ಕೂಡಲೇ ಅಕ್ಕಪಕ್ಕದವರನ್ನು ಸಹಾಯಕ್ಕೆ ಕರೆದಿದ್ದಾನೆ. ನಂತರ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.

Thieves break into a house in Tamil Nadu and drink rose milk before leaving

ಇನ್ನೂ ಸ್ಥಳಕ್ಕೆ ಬಂದಂತಹ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಮನೆಯಲ್ಲಿದ್ದ ಬೀರು ಬಾಗಿಲನ್ನು ಒಡೆಯಲಾಗಿತ್ತು. ಬೀರುವಿನಲ್ಲಿದ್ದ ಎಲ್ಲಾ ವಸ್ತುಗಳು ಚೆಲ್ಲಾಪಿಲ್ಲಿಯಾಗಿತ್ತು. ನಂತರ ಅಡುಗೆ ಕೋಣೆಯೊಳಗೆ ಹೋದ ಪೊಲೀಸರು ಶಾಕ್ ಆಗಿದ್ದಾರೆ. ಕಳ್ಳತನಕ್ಕೆ ಹೋದವರಿಗೆ ಮನೆಯೊಳಗೆ ಎಷ್ಟೇ ಹುಡುಕಿದರೂ, ಅವರಿಗೆ ಹಣ ಅಥವಾ ಆಭರಣಗಳು ಎಲ್ಲಿ ಸಿಗಲೇ ಇಲ್ಲ. ನಿರಾಶರಾದ ಕಳ್ಳರು ಏನು ಮಾಡಬೇಕು ಎಂಬ ವಿಚಾರದಲ್ಲಿ ತೋಚದೆ, ಅವರ ಗಮನ ಕಿಚನ್ ಕಡೆಗೆ ಹೋಗಿತು. ಕಿಚನ್ ನಲ್ಲಿ ಹೋಗಿ ರೋಜ್ ಮಿಲ್ಕ್ ತಯಾರಿಸಿಕೊಂಡು ಕುಡಿದು ಹೋಗಿದ್ದಾರೆ ಎಂದು ತಿಳಿದುಬಂದಿದೆ. ಇನ್ನೂ ಈ ವಿಚಾರ ತಿಳಿದ ಸ್ಥಳೀಯರು ನಗಾಡಿದ್ದಾರೆ. ಇನ್ನೂ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಈ ಭಾಗದಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular