ಸೋಶಿಯಲ್ ಮೀಡಿಯಾದಲ್ಲಿ ‘ಲೈಕ್ಸ್’ ಮತ್ತು ‘ವ್ಯೂಸ್’ಗಾಗಿ ಜನರು ಎಂತಹ ಕೆಳಮಟ್ಟಕ್ಕಿಳಿಯುತ್ತಾರೆ ಎಂಬುದಕ್ಕೆ ಮುಂಬೈನ ಬಾಂದ್ರಾ ರೈಲ್ವೆ ನಿಲ್ದಾಣದಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ವಿಡಿಯೋವೊಂದರಲ್ಲಿ (Viral Reel Controversy) ಸಂತ್ರಸ್ತೆಯಂತೆ ನಟಿಸಿ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ಮಾಡಿದ ಯುವತಿ, ಈಗ ಮತ್ತೊಂದು ವಿಡಿಯೋ ಮೂಲಕ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾಳೆ. ಮೊದಲು ‘ನನ್ನನ್ನು ಮುಟ್ಟಬೇಡಿ’ ಎಂದು ಗಲಾಟೆ ಮಾಡಿದವಳೇ, ನಂತರ ರೈಲಿನಲ್ಲಿ ಅಪರಿಚಿತ ಪುರುಷರನ್ನ ಅಸಭ್ಯವಾಗಿ ಮುಟ್ಟುತ್ತಾ ರೀಲ್ಸ್ ಮಾಡಿರುವುದು ಈಗ ದೊಡ್ಡ ವಿವಾದಕ್ಕೆ ನಾಂದಿ ಹಾಡಿದೆ.

Viral Reel Controversy – ಏನಿದು ಘಟನೆ?
ಮುಂಬೈಯ ಬಾಂದ್ರಾ ರೈಲ್ವೆ ನಿಲ್ದಾಣದಲ್ಲಿ ಯುವತಿಯೊಬ್ಬಳು ವಿಡಿಯೋ ರೀಲ್ಸ್ ಮಾಡುತ್ತಿದ್ದಳು. ಈ ಸಂದರ್ಭದಲ್ಲಿ ತನ್ನ ಪಕ್ಕದಲ್ಲೇ ಫೋನ್ನಲ್ಲಿ ಮಾತನಾಡುತ್ತಾ ನಿಂತಿದ್ದ ವ್ಯಕ್ತಿಯೊಬ್ಬ ತನಗೆ ಅಸಭ್ಯವಾಗಿ ಸ್ಪರ್ಶ ಮಾಡಿದ್ದಾನೆ ಎಂದು ಆರೋಪಿಸಿ ಆಕೆ ಆತನ ಮೇಲೆ ಹಲ್ಲೆ ಮಾಡಿದ್ದಾಳೆ. ಕಪ್ಪು ಟಾಪ್ ಮತ್ತು ಗ್ರೇ ಜೀನ್ಸ್ ಧರಿಸಿದ್ದ ಈ ಯುವತಿ, ಸಾರ್ವಜನಿಕರ (Viral Reel Controversy) ಮುಂದೆಯೇ ಆ ವ್ಯಕ್ತಿಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿರುವ ವಿಡಿಯೋ ವೈರಲ್ ಆಗಿದೆ.
ಟ್ವಿಸ್ಟ್ ಕೊಟ್ಟ ಎರಡನೇ ವಿಡಿಯೋ!
ಆದರೆ ಕಥೆ ಇಲ್ಲಿಗೇ ಮುಗಿಯುವುದಿಲ್ಲ. ಈ ಘಟನೆಯ ಬೆನ್ನಲ್ಲೇ ಅದೇ ಯುವತಿಯ ಇನ್ನೊಂದು ವಿಡಿಯೋ ಮುನ್ನೆಲೆಗೆ ಬಂದಿದೆ. ಇದರಲ್ಲಿ ಅದೇ ಯುವತಿ ಮುಂಬೈ ಲೋಕಲ್ ಟ್ರೈನ್ನಲ್ಲಿ ಪ್ರಯಾಣಿಸುತ್ತಿರುವಾಗ, ತನ್ನ ರೀಲ್ಸ್ಗಾಗಿ ಅಪರಿಚಿತ ವ್ಯಕ್ತಿಯೊಬ್ಬರನ್ನು ಅವರ ಅನುಮತಿಯಿಲ್ಲದೆ ಅಸಭ್ಯವಾಗಿ ಸ್ಪರ್ಶಿಸುತ್ತಿರುವುದು ಕಂಡುಬಂದಿದೆ. Read this also : Reels : ರೀಲ್ಸ್ ಮಾಡೋಕೆ ಹೋಗಿ ಎಡವಟ್ಟು ಮಾಡ್ಕೊಂಡ ಯುವತಿ, ರೀಲ್ಸ್ ಮಾಡುತ್ತಾ ಮುಗ್ಗರಿಸಿ ಬಿದ್ದ ಯುವತಿ….!
ಒಂದು ಕಡೆ ತನಗೆ ಸ್ಪರ್ಶವಾಯಿತೆಂದು ಗಲಾಟೆ ಮಾಡಿದ ಯುವತಿ, ಇನ್ನೊಂದು ಕಡೆ ತಾನೇ ಬೇರೊಬ್ಬ ವ್ಯಕ್ತಿಗೆ ಕಿರಿಕಿರಿ ಉಂಟುಮಾಡುತ್ತಿರುವುದು ಕಂಡುಬಂದಾಗ ನೆಟ್ಟಿಗರು ಕೆಂಡಾಮಂಡಲವಾಗಿದ್ದಾರೆ. “ಇದು ಇತ್ತೀಚಿನ ಡಬಲ್ ಸ್ಟ್ಯಾಂಡರ್ಡ್ (ದ್ವಂದ್ವ ನೀತಿ)” ಎಂದು ಹಲವರು ಕಿಡಿಕಾರುತ್ತಿದ್ದಾರೆ.

ಪೊಲೀಸರ ಪ್ರತಿಕ್ರಿಯೆಗೆ ನೆಟ್ಟಿಗರ ಆಕ್ರೋಶ
ಪುರುಷರ ಹಕ್ಕುಗಳಿಗಾಗಿ ಹೋರಾಡುವ ‘NCMIndia Council For Men Affairs’ ಈ ವಿಡಿಯೋವನ್ನು (Video Here) ಹಂಚಿಕೊಂಡು ಮುಂಬೈ ಪೊಲೀಸರಿಗೆ ಟ್ಯಾಗ್ ಮಾಡಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ. ಇದಕ್ಕೆ ಪ್ರತಿಕ್ರಿಯಿಸಿದ ಮುಂಬೈ ಪೊಲೀಸರು, ಘಟನೆ ರೈಲ್ವೆ ವ್ಯಾಪ್ತಿಯಲ್ಲಿ ನಡೆದಿದ್ದರಿಂದ ಪ್ರಕರಣವನ್ನು ‘GRP ಮುಂಬೈ’ಗೆ ವರ್ಗಾಯಿಸಿದ್ದಾರೆ. (Viral Reel Controversy) ಪೊಲೀಸರ ಈ ಹಾರಿಕೆ ಉತ್ತರದ ವಿರುದ್ಧವೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, “ಜವಾಬ್ದಾರಿಯಿಂದ ನುಣುಚಿಕೊಳ್ಳುವ ಬದಲು, ಸಾರ್ವಜನಿಕವಾಗಿ ಇಂತಹ ವರ್ತನೆ ತೋರುವವರ ವಿರುದ್ಧ ಕಠಿಣ ಕ್ರಮ ಜರುಗಿಸಿ” ಎಂದು ಒತ್ತಾಯಿಸುತ್ತಿದ್ದಾರೆ.
ಇನ್ನೂ ದಾಖಲಾಗಿಲ್ಲ ದೂರು
ಸದ್ಯದ ಮಾಹಿತಿಯ ಪ್ರಕಾರ, ಈ ವಿಡಿಯೋಗಳು (Viral Reel Controversy) ಯಾವಾಗ ಚಿತ್ರೀಕರಿಸಲ್ಪಟ್ಟಿವೆ ಎಂಬ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಈವರೆಗೆ ಯಾವುದೇ ಎಫ್ಐಆರ್ ಅಥವಾ ದೂರು ದಾಖಲಾಗಿಲ್ಲ. ಆದರೆ, ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ಈ ‘ರೀಲ್ಸ್ ಹುಚ್ಚಾಟ’ ಮತ್ತು ‘ಪಬ್ಲಿಸಿಟಿ ಗಿಮಿಕ್’ ಬಗ್ಗೆ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ.
