Viral – ಇತ್ತೀಚಿಗೆ ವಿವಾಹೇತರ ಸಂಬಂಧಗಳಿಗೆ ಸಂಬಂಧಪಟ್ಟಂತಹ ಸುದ್ದಿಗಳು ಹೆಚ್ಚಾಗಿಯೇ ಕೇಳಿಬರುತ್ತಿವೆ. ಮತ್ತೊಂದು ಉದಾಹರಣೆ ಎಂಬಂತೆ, ಪಶ್ಚಿಮ ಬಂಗಾಳದಲ್ಲಿ ಒಂದು ವಿಚಿತ್ರ ಘಟನೆ ವರದಿಯಾಗಿದೆ. ಒಂದೇ ಮನೆಯಲ್ಲಿ ವಾಸವಾಗಿದ್ದ ಇಬ್ಬರು ಸೊಸೆಯಂದಿರು, ನೆರೆಮನೆಯ ಯುವಕನೊಬ್ಬನ ಪ್ರೀತಿಗಾಗಿ, ತಮ್ಮ ಕುಟುಂಬ ಸದಸ್ಯರಿಗೆ ಚಹಾದಲ್ಲಿ ನಿದ್ರೆ ಮಾತ್ರೆ ಬೆರೆಸಿ ಕೊಟ್ಟು ನಾಪತ್ತೆಯಾಗಿದ್ದಾರೆ. ಈ ಘಟನೆ ಸ್ಥಳೀಯ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದು, ಕುಟುಂಬಸ್ಥರು ನ್ಯಾಯಕ್ಕಾಗಿ ಮೊರೆ ಹೋಗಿದ್ದಾರೆ.
Viral – ಒಂದೇ ಪ್ರಿಯಕರನೊಂದಿಗೆ ಓಡಿ ಹೋದ ಗೃಹಿಣಿಯರು
ಸೆಪ್ಟೆಂಬರ್ 1ರಂದು ಪಶ್ಚಿಮ ಬಂಗಾಳದ ಉತ್ತರ 24 ಪರಗಣದ ಮಾಲಿಡಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಯಾಸಿನ್ ಶೇಖ್ ಮತ್ತು ಅನಿಸೂರ್ ಶೇಖ್ ಎಂಬ ಇಬ್ಬರು ಸಹೋದರರ ಪತ್ನಿಯರಾದ ಕುಲ್ಚನ್ ಮಲ್ಲಿಕ್ ಮತ್ತು ನಜ್ಮಾ ಮಂಡಲ್, ತಮ್ಮ ನೆರೆಮನೆಯ ಯುವಕ ಆರಿಫ್ ಮೊಲ್ಲಾ ಜೊತೆ ಪ್ರೀತಿಯಲ್ಲಿ ಬಿದ್ದಿದ್ದರು. ಕುಲ್ಚನ್ ಮತ್ತು ನಜ್ಮಾ ಇಬ್ಬರೂ ಒಂದೇ ಯುವಕನನ್ನು ಪ್ರೀತಿಸುತ್ತಿದ್ದು, ತಮ್ಮ ಪ್ರೀತಿಗಾಗಿ ಯಾವುದಕ್ಕೂ ಹೇಸದ ಇವರು, ಸೋಮವಾರ ಮನೆಯಲ್ಲಿದ್ದ ಅತ್ತೆ, ಮಾವ ಮತ್ತು ಮೂವರು ಮಕ್ಕಳಿಗೆ ಚಹಾ ಜೊತೆ ನಿದ್ರೆ ಮಾತ್ರೆಗಳನ್ನು ಬೆರೆಸಿ ಕುಡಿಸಿದ್ದಾರೆ. ಎಲ್ಲರೂ ಪ್ರಜ್ಞಾಹೀನರಾದ ನಂತರ, ಇಬ್ಬರೂ ತಮ್ಮ ಪ್ರಿಯಕರನ ಜೊತೆ ಮನೆ ಬಿಟ್ಟು ಓಡಿ ಹೋಗಿದ್ದಾರೆ.
Viral – ಪತಿ ವಿದೇಶದಲ್ಲಿದ್ದರೆ, ಇನ್ನೊಬ್ಬ ಪತಿ ಗ್ಯಾರೇಜ್ ನಲ್ಲಿ
ಈ ಇಬ್ಬರು ಸಹೋದರರ ಪೈಕಿ ಯಾಸಿನ್ ಶೇಖ್ ವಿದೇಶದಲ್ಲಿ ಕೆಲಸ ಮಾಡುತ್ತಿದ್ದರು, ಇನ್ನು ಅನಿಸೂರ್ ಶೇಖ್ ಸ್ಥಳೀಯ ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಿದ್ದರು. ಪತಿಗಳು ತಮ್ಮ ತಮ್ಮ ಕೆಲಸಗಳಲ್ಲಿ ನಿರತರಾಗಿದ್ದಾಗ, ಇಬ್ಬರು ಮಹಿಳೆಯರು ಪಕ್ಕದ ಮನೆಯ ಆರಿಫ್ ಮೊಲ್ಲಾ ಜೊತೆ ಸಂಪರ್ಕ ಬೆಳೆಸಿದ್ದಾರೆ. ಈ ಸಂಬಂಧ ಎಷ್ಟು ಆಳವಾಗಿ ಬೇರೂರಿತ್ತೆಂದರೆ, ಇಬ್ಬರೂ ಮಹಿಳೆಯರು ತಮ್ಮ ಪ್ರಿಯಕರನೊಂದಿಗೆ ಸೇರಿ ಈ ವಿಚಿತ್ರ ಪ್ಲಾನ್ ಮಾಡಿದ್ದಾರೆ. Read this also : ಹೈಸ್ಕೂಲ್ ಪ್ರಿಯಕರಿನಿಗಾಗಿ ಪತಿಗೆ ಡಿವೋರ್ಸ್ ಕೊಟ್ಟ ಮಹಿಳೆಯ ದುರಂತ ಅಂತ್ಯ….!
Viral – ಪೊಲೀಸರಿಗೆ ದೂರು, ಕಠಿಣ ಶಿಕ್ಷೆಗೆ ಆಗ್ರಹ
ದಿನದ ಕೆಲಸ ಮುಗಿಸಿ ಮನೆಗೆ ಬಂದ ಅನಿಸೂರ್, ತಮ್ಮ ಪೋಷಕರು ಮತ್ತು ಮಕ್ಕಳು ಪ್ರಜ್ಞಾಹೀನರಾಗಿರುವುದನ್ನು ನೋಡಿ ದಿಗ್ಭ್ರಮೆಗೊಂಡರು. ತಕ್ಷಣವೇ ಅವರನ್ನು ಬಾಗ್ಡಾ ಆಸ್ಪತ್ರೆಗೆ ದಾಖಲಿಸಿದರು. ಪ್ರಜ್ಞೆ ಬಂದ ನಂತರ, ಮನೆಯಲ್ಲಿ ನಡೆದ ಘಟನೆ ತಿಳಿದ ಅನಿಸೂರ್ ಅವರು ಮಂಗಳವಾರ ಬಾಗ್ಡಾ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ದಾಖಲಿಸಿದ್ದಾರೆ. ಈ ಮೂವರು ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
ಆರಿಫ್‌ಗೂ ಪತ್ನಿ ಮತ್ತು ಮಕ್ಕಳಿದ್ದಾರೆ!
ಈ ಪ್ರಕರಣದ ಮತ್ತೊಂದು ಆಶ್ಚರ್ಯಕರ ವಿಷಯವೇನೆಂದರೆ, ಪ್ರಿಯಕರ ಆರಿಫ್ ಮೊಲ್ಲಾ ಕೂಡ ಈಗಾಗಲೇ ವಿವಾಹಿತ. ಆತನಿಗೆ ಪತ್ನಿ ಮತ್ತು ಇಬ್ಬರು ಮಕ್ಕಳಿದ್ದಾರೆ. ಈ ಎಲ್ಲದರ ನಡುವೆಯೂ, ಒಂದೇ ಮನೆಯ ಇಬ್ಬರು ಸಹೋದರರ ಪತ್ನಿಯರೊಂದಿಗೆ ಪ್ರೀತಿಯಲ್ಲಿ ಬಿದ್ದು, ಆತನೂ ಮನೆ ಬಿಟ್ಟು ಓಡಿ ಹೋಗಿದ್ದಾನೆ. ಈ ವಿಚಿತ್ರ ಪ್ರಕರಣ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಒಳಗಾಗಿದೆ.