Viral News – ನಾಗ್ಪುರದಲ್ಲಿ 3 ಮಕ್ಕಳ ತಾಯಿಯೊಂದಿಗೆ ಫಸ್ಟ್ ಪಿಯುಸಿ ವಿದ್ಯಾರ್ಥಿಯೊಬ್ಬ ಓಡಿಹೋದ ಘಟನೆ ಚರ್ಚೆಯ ವಿಷಯವಾಗಿದೆ. ಈ ಘಟನೆಯ ನಂತರ ಪೊಲೀಸರು ಇಬ್ಬರನ್ನೂ ಹಿಡಿದು ವಶಪಡಿಸಿಕೊಂಡಿದ್ದಾರೆ. ಮಹಿಳೆಗೆ ನ್ಯಾಯಾಲಯದಿಂದ ಜಾಮೀನು ನೀಡಲಾಗಿದೆ ಎಂದು ತಿಳಿದುಬಂದಿದೆ.

Viral News – ಘಟನೆಯ ಹಿನ್ನೆಲೆ
ಓಡಿಹೋದ ಮಹಿಳೆ ಮತ್ತು ವಿದ್ಯಾರ್ಥಿ ಇಬ್ಬರೂ ನಾಗ್ಪುರದ ಅಕ್ಕಪಕ್ಕದ ಮನೆಗಳಲ್ಲಿ ವಾಸಿಸುತ್ತಿದ್ದರು. ವಿದ್ಯಾರ್ಥಿಯ ತಂದೆ ಆ ಮಹಿಳೆ ಜೊತೆ ಮಗಳ ಆರೋಗ್ಯದ ವಿಚಾರವಾಗಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಮಹಿಳೆ ಜೊತೆ ವಿದ್ಯಾರ್ಥಿಯ ಪರಿಚಯ ಆಗಿದೆ. ಕಾಲಕ್ರಮೇಣ ಇಬ್ಬರ ನಡುವಿನ ಸಂಬಂಧ ಬೆಳೆಯಿತು. ಮಹಿಳೆ ಜೊತೆ ವಿದ್ಯಾರ್ಥಿ ಸಲುಗೆಯಿಂದ ಇರುವುದನ್ನು ನೋಡಿದ್ದ ತಂದೆ, ಮಹಿಳೆ 3 ಮಕ್ಕಳ ತಾಯಿ ಮತ್ತು ವಯಸ್ಸಿನಲ್ಲಿ ದೊಡ್ಡವಳು ಇದು ಸರಿಯಲ್ಲ ಎಂದು ಮಗನಿಗೆ ಬುದ್ಧಿವಾದ ಹೇಳಿದ್ದರು. ಆದರೆ ಅವರಿಬ್ಬರ ಸಂಬಂಧ ಮತ್ತಷ್ಟು ಗಟ್ಟಿಯಾಗುತ್ತಿದ್ದರಿಂದ, ವಿದ್ಯಾರ್ಥಿಯನ್ನು ಹಳೆ ಮಂಗಳವಾಡಿಯಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಕಳುಹಿಸಿದ್ದರು.
Viral News -ಮಹಿಳೆಯೊಂದಿಗೆ ಪರಾರಿಯಾದ ಯುವಕ

ಇನ್ನೂ ತಂದೆಯ ಎಚ್ಚರಿಕೆಯನ್ನೂ ಸಹ ಲೆಕ್ಕಿಸದ ಬಾಲಕ ಮಹಿಳೆಯೊಂದಿಗೆ ಪರಾರಿಯಾಗಲು ಪ್ಲಾನ್ ಮಾಡಿದ್ದ. ಇಬ್ಬರೂ ಪ್ಲಾನ್ ಮಾಡಿಕೊಂಡು ಪರಾರಿಯಾಗಿದ್ದರು. ಈ ಸಂಬಂಧ ವಿದ್ಯಾರ್ಥಿಯ ತಂದೆ ಲಕಡಗಂಜ್ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣವನ್ನು ದಾಖಲು ಮಾಡಿದ್ದರು. ಅದಕ್ಕೆ ಪ್ರತಿಯಾಗಿ ಮಹಿಳೆಯ ಕಡಯವರೂ ನಾಪತ್ತೆ ಪ್ರಕರಣ ದಾಖಲು ಮಾಡಿದ್ದಾರೆ ಎಂದು ಹೇಳಲಾಗಿದೆ. ಈ ಪ್ರಕರಣವನ್ನು ಮಾನವ ಕಳ್ಳಸಾಗಾಣೆ ವಿರೋಧಿ ಘಟಕಕ್ಕೆ ವರ್ಗಾಯಿಸಲಾಗಿತ್ತು.
LG 139 cm (55 inches) 4K Ultra HD Smart LED TV 55UR7500PSC (upto 42% Off, Buy Now)
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಪರಾರಿಯಾದವರನ್ನು ಪತ್ತೆ ಮಾಡಲು ಶೋಧಕಾರ್ಯ ಕೈಗೊಂಡಿದ್ದರು. ಇಬ್ಬರನ್ನೂ ಪತ್ತೆ ಮಾಡಿದ ಪೊಲೀಸರು, ಇಬ್ಬರಿಗೂ ಬುದ್ದಿ ಮಾತು ಹೇಳಿದ್ದರು. ಮಹಿಳೆಯನ್ನು ವಶಕ್ಕೆ ಪಡೆದ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ವಿಚಾರಣೆಯ ಬಳಿಕ ಮಹಿಳೆಗೆ ನ್ಯಾಯಾಲಯ ಜಾಮೀನು ನೀಡಿದೆ ಎಂದು ತಿಳಿದುಬಂದಿದೆ.