Viral News – ಮಾಂಸಪ್ರಿಯರಿಗೆ ಬಿರಿಯಾನಿ ಎಂದರೇ ತುಂಬಾನೆ ಪ್ರಾಣ ಎಂದು ಹೇಳಬಹುದು. ಆಗಾಗ ಕೆಲವೊಂದು ಪ್ರದೇಶಗಳಲ್ಲಿ ಬಿರಿಯಾನಿಯಲ್ಲಿ ಇತರೆ ಪ್ರಾಣಿಗಳು ಪತ್ತೆಯಾದ ಸುದ್ದಿಗಳನ್ನು ಕೇಳಿರುತ್ತೇವೆ. ಇದೀಗ ಅಂತಹುದೇ ಸುದ್ದಿಯೊಂದು ಕೇಳಿಬಂದಿದೆ. ಹೈದರಾಬಾದ್ ನ ಐಐಐಟಿ ಮೆಸ್ ನಲ್ಲಿ ವಿದ್ಯಾರ್ಥಿಗಳಿಗೆ ನೀಡಿದ್ದ ಚಿಕನ್ (Viral News) ಬಿರಿಯಾನಿಯಲ್ಲಿ ಸತ್ತ ಕಪ್ಪೆಯೊಂದು ಪತ್ತೆಯಾಗಿದ್ದು, ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿಸಿದೆ. ಜೊತೆಗೆ ಈ ಸಂಬಂಧ ಆಕ್ರೋಷ ಸಹ ವ್ಯಕ್ತವಾಗಿದೆ ಎಂದು ತಿಳಿದುಬಂದಿದೆ.
ಈ ಸಂಬಂಧ ಪೊಟೋಗಳು ಸಹ ಸೋಷಿಯಲ್ ಮಿಡಿಯಾದಲ್ಲಿ (Viral News) ವೈರಲ್ ಆಗಿದೆ. ಬಿರಿಯಾನಿಯಲ್ಲಿ ಸತ್ತ ಕಪ್ಪೆಯ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಇದೇ ಮಾಹೆಯ 16ನೇ ತಾರೀಖಿನಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ವಿಚಾರವನ್ನು ತೆಲಂಗಾಣ ಆಹಾರ ಸುರಕ್ಷತಾ ಆಯುಕ್ತರ ಗಮನಕ್ಕೂ (Viral News) ಸಹ ತರಲಾಗಿದೆ ಎಂದು ತಿಳಿದುಬಂದಿದೆ. ಈ ಸಂಬಂಧ @cfs_telangana ಎಂಬ ಎಕ್ಸ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಳ್ಳಲಾಗಿದೆ. ಇಂದು ಕದಂಬ ಮೆಸ್ (ಐಐಐಟಿ ಹೈದರಾಬಾದ್)ನಲ್ಲಿ (Viral News) ನನ್ನ ಸ್ನೇಹಿತನ ಊಟದಲ್ಲಿ ಕಪ್ಪೆ ಕಾಣಿಸಿಕೊಂಡಿದೆ. ಇದು ಗಂಭೀರವಾದ ಆರೋಗ್ಯ ಅಪಾಯ ಉಂಟುಮಾಡಬಹುದು, ದಯವಿಟ್ಟು ಕೂಡಲೇ ಕ್ರಮ ತೆಗೆದುಕೊಳ್ಳಿ ಎಂದು ಪೋಸ್ಟ್ ಹಂಚಿಕೊಳ್ಳಲಾಗಿದೆ.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ: Click Here https://x.com/manoharrocksss/status/1846920038814830638
ಇನ್ನೂ ಈ ಕುರಿತು ವಿದ್ಯಾರ್ಥಿಗಳು ಹೇಳುವಂತೆ (Viral News) ಗಚ್ಚಿಬೌಲಿ ಐಐಐಟಿ ಯಲ್ಲಿರುವ ಕದಂಬ ಮೆಸ್ ನಲ್ಲಿ ಈ ಘಟನೆ ನಡೆದಿದ್ದು, ಇತ್ತೀಚಿಗೆ ವಿದ್ಯಾರ್ಥಿಗಳಿಗೆ ಚಿಕನ್ ಬಿರಿಯಾನಿ ನೀಡಲಾಗಿತ್ತು. ಈ ವೇಳೆ ತಟ್ಟೆಯಲ್ಲಿ ಬಿರಿಯಾನಿ ಬಡಿಸುವಾಗ ಸತ್ತ ಕಪ್ಪೆ ಪತ್ತೆಯಾಗಿದೆ. ಸತ್ತ ಕಪ್ಪೆ ನೋಡುತ್ತಿದ್ದಂತೆ ವಿದ್ಯಾರ್ಥಿಗಳು (Viral News) ಆತಂಕಕ್ಕೊಳಗಾಗಿದ್ದಾರೆ. ಈ ಕುರಿತು ಮೆಸ್ ವ್ಯವಸ್ಥಾಪಕರ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ವಿದ್ಯಾರ್ಥಿಗಳು ಆಕ್ರೋಷ ವ್ಯಕ್ತಪಡಿಸಿದ್ದಾರೆ ಜೊತೆಗೆ ತಪ್ಪಿತಸ್ಥರ (Viral News) ವಿರುದ್ದ ಕ್ರಮ ತೆಗೆದುಕೊಳ್ಳಬೇಕು ಆಗ್ರಹಿಸಿದ್ದಾರೆ ಎಂದು ತಿಳಿದುಬಂದಿದೆ.