ತನ್ನ ಹೆಂಡತಿಯನ್ನು ಬೈಕ್ ಮೇಲೆ ಕೂರಿಸಿಕೊಂಡು ಹೋಗುತ್ತಿದ್ದಾಗ ರಸ್ತೆಯಲ್ಲಿದ್ದ ಗುಂಡಿಗೆ ಬಿದ್ದು ತನ್ನ ಹೆಂಡತಿ (Viral News) ಬಿದಿದ್ದಾಳೆ. ಈ ವೇಳೆ ಹೆಂಡತಿಗೆ ಬಲವಾದ ಪೆಟ್ಟು ಬಿದಿದ್ದು, ಆಕೆ ಕೋಮಾಗೆ ಹೋಗಿದ್ದಾಳೆ. ಆದರೆ ಈ ಕುರಿತು ಪೊಲೀಸರು ಪತಿಯ ವಿರುದ್ದವೇ ಪ್ರಕರಣ ದಾಖಲಿಸಿದ್ದಾರೆ. ಅಂದಹಾಗೆ ಈ ಘಟನೆ ನಡೆದಿರೋದು ಮಧ್ಯಪ್ರದೇಶದಲ್ಲಿ. ರಸ್ತೆ ಗುಂಡಿಯಿಂದ ಕೆಳಗೆ ಬಿದ್ದ ಪತ್ನಿ ಕೋಮಾಗೇ ಹೋಗಿದ್ದಾಳೆ. ಈ ಘಟನೆಯ ಸಂಬಂಧ ಪತಿಯ ವಿರುದ್ದ ಪೊಲೀಸರು ಕೇಸು ದಾಖಲು ಮಾಡಿದ್ದಾರೆ. ಬಳಿಕ ಏನಾಯ್ತು ಎಂಬ ವಿಚಾರಕ್ಕೆ ಬಂದರೇ,
ಸಾಮಾನ್ಯವಾಗಿ ವಾಹನ ಸವಾರರಿಗೆ ರಸ್ತೆ ಗುಂಡಿಗಳ ಕಾಟ ತಪ್ಪಿದ್ದಲ್ಲ. ದೇಶದ ದೊಡ್ಡ ದೊಡ್ಡ ನಗರಗಳಲ್ಲೂ ಇದೇ ರೀತಿಯ ಪರಿಸ್ಥಿತಿಯಿದೆ. ಮನೆಯಿಂದ ಹೊರ ಹೋದವರು ಸುರಕ್ಷಿತವಾಗಿ ಮನೆಗೆ ವಾಪಸ್ ಬರುತ್ತಾರೋ ಇಲ್ಲವೋ ಎಂಬ ಅನುಮಾನಗಳು ಕಾಡುತ್ತಿರುತ್ತವೆ. ಅನೇಕ ಘಟನೆಗಳಲ್ಲಿ ರಸ್ತೆ ಗುಂಡಿಗಳ ಅವಾಂತರದಿಂದ ಪ್ರಾಣಗಳೇ ಹೋಗಿದೆ. ಅಂತಹುದೇ ಘಟನೆಯೊಂದು ಮಧ್ಯಪ್ರದೇಶದಲ್ಲಿ ನಡೆದಿದೆ. ರವಿಗೌರ್ ಎಂಬ ವ್ಯಕ್ತಿ ತನ್ನ ಹೆಂಡತಿ ಶಾನು ಗೌರ್ ಜೊತೆಗೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದರು. ಬೈಕ್ ನಲ್ಲಿ ಹೋಗುತ್ತಿದ್ದಾಗ ರಸ್ತೆ ಗುಂಡಿಗೆ ಬಿದ್ದ ರವಿ ಗೌರ್ ಪತ್ನಿಗೆ ಬಲವಾದ ಪೆಟ್ಟ ಬಿದಿದ್ದೆ. ರಸ್ತೆ ಗುಂಡಿಯಿಂದ ಕೆಳಗೆ ಬಿದ್ದ ಶಾನು ಗೌರ್ ಕೋಮಾಗೆ ಹೋಗಿದ್ದಾರೆ. ಆಕೆ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರಂತೆ. ಪೊಲೀಸರು ಮಾತ್ರ ಪತಿಗೆ ಶಾಕ್ ಕೊಟ್ಟಿದ್ದಾರೆ. ಇಂದೋರ್ ಪೊಲೀಸರ ಈ ನಡೆ ಎಲ್ಲರಿಗೂ ಆಶ್ಚರ್ಯ ಆಗುವಂತೆ ಮಾಡಿದೆ.
ರವಿಗೌರ್ ಹಾಗೂ ಶಾನು ಗೌರ್ ಬೈಕ್ ನಲ್ಲಿ ಚಲಿಸುತ್ತಿದ್ದಾಗ ರಸ್ತೆ ಗುಂಡಿಗೆ ಬಿದ್ದು ಶಾನು ಗೌರ್ ಕೋಮಾಗೆ ಹೋಗಿದ್ದಾರೆ. ಈ ನಡುವೆ ಇಂದೋರ್ ಪೊಲೀಸರು ಹೆಂಡತಿ ಗಂಭೀರವಾಗಿ ಗಾಯಗೊಂಡಿದ್ದಕ್ಕೆ ರವಿ ಗೌರ್ ಮೇಲೆ ಕೇಸ್ ದಾಖಲು ಮಾಡಿದ್ದಾರೆ. ಅತಿಯಾದ ವೇಗದಿಂದ ಬೈಕ್ ಚಲಾಯಿಸಿದ್ದಕ್ಕಾಗಿ ಗಂಡನ ಮೇಲೆ ಕೇಸ್ ದಾಖಲಾಗಿದೆ. ಕಳೆದ ಸೆ.14 ರಂದು ಇಂದೋರ್ ನಲ್ಲಿ ಈ ಘಟನೆ ನಡೆದಿದೆ. ರಸ್ತೆ ಗುಂಡಿಯಿಂದ ಪತ್ನಿ ಕೋಮಾಗೆ ಹೋಗಿದ್ದರೇ, ಇತ್ತ ಅತಿಯಾದ ವೇಗಕ್ಕಾಗಿ ಪ್ರಕರಣವನ್ನು ದಾಖಲು ಮಾಡಿ ಪೊಲೀಸರು ನಗೆಪಾಟಲಿಗೀಡಾಗಿದ್ದಾರೆ. ಇನ್ನೂ ಈ ಪ್ರಕರಣ ಭಾರಿ ಚರ್ಚೆಯಾಗುತ್ತಿದೆ. ತಪ್ಪು ಮಾಡದಂತಹ ಗಂಡನ ಮೇಲೆ ಕೇಸ್ ಹಾಕಿದ್ದು, ಇದು ಪೊಲೀಸರ ದಿವ್ಯ ನಿರ್ಲಕ್ಷ್ಯಕ್ಕೆ ಉದಾಹರಣೆಯಾಗಿದೆ, ಪೊಲೀಸರ ವಿರುದ್ದ ಕ್ರಮ ವಹಿಸಬೇಕೆಂದು ಅನೇಕರು ಒತ್ತಾಯಿಸಿದ್ದಾರೆ. ಸದ್ಯ ಪೊಲೀಸರಿಗೆ ತಮ್ಮ ತಪ್ಪಿನ ಅರಿವಾಗಿದ್ದು, ಅಪಘಾತವಾದ ರಸ್ತೆ ಕಾಮಗಾರಿ ಕೈಗೊಂಡ ಗುತ್ತಿಗೆದಾರರ ಮಾಹಿತಿಯನ್ನು ನಗರ ಪಾಲಿಗೆಯ ಅಧಿಕಾರಿಗಳಲ್ಲಿ ಕೇಳಿದ್ದಾರೆ ಎನ್ನಲಾಗಿದೆ. ಜೊತೆಗೆ ಪಾಲಿಕೆ ಹಾಗೂ ಕಳಪೆ ಕಾಮಗಾರಿ ಕೈಗೊಂಡ ಗುತ್ತಿಗೆದಾರರ ವಿರುದ್ದ ಕ್ರಮಕ್ಕೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.