Viral – ಮಧ್ಯಪ್ರದೇಶದ (Madhya Pradesh) ಸಿಂಗ್ರೌಲಿ ಜಿಲ್ಲೆಯಲ್ಲಿ ಅಪರೂಪದ ಮತ್ತು ಅಚ್ಚರಿಯ ಘಟನೆಯೊಂದು ನಡೆದಿದೆ. ತಾನು ಕೇಳಿದ ಕುರ್ಕುರೆ ಪ್ಯಾಕೆಟ್ (Kurkure Packet) ಕೊಡಿಸಿಲ್ಲ ಎಂಬ ಕಾರಣಕ್ಕೆ, 8 ವರ್ಷದ ಪುಟ್ಟ ಬಾಲಕನೊಬ್ಬ ತನ್ನ ತಾಯಿ ಹಾಗೂ ಅಕ್ಕನ ವಿರುದ್ಧವೇ ನೇರವಾಗಿ ಪೊಲೀಸ್ ತುರ್ತು ಸಹಾಯವಾಣಿ (Police Emergency Call) 112ಗೆ ಕರೆ ಮಾಡಿ ದೂರು ನೀಡಿದ್ದಾನೆ!

Viral – ತಾಯಿಯ ಮೊಬೈಲ್‌ನಿಂದಲೇ ಕರೆ!
ಘಟನೆ ನಡೆದಿರುವುದು ಸಿಂಗ್ರೌಲಿ ಜಿಲ್ಲೆಯ ಚಿತರ್‌ವೈ ಕಲಾಗ್ರಾಮದಲ್ಲಿ. ಆ ಎಂಟು ವರ್ಷದ ಬಾಲಕ ಕುರ್ಕುರೆ ಪ್ಯಾಕೆಟ್ ಖರೀದಿಸಲು ತನ್ನ ತಾಯಿಯ ಬಳಿ ₹20 ರೂಪಾಯಿ ಕೇಳಿದ್ದಾನೆ. ಆದರೆ, ಆಕೆಗೆ ಹಣ ಕೊಡಲು ಮನಸ್ಸಿರಲಿಲ್ಲ. ಬಾಲಕ ಹಠ ಮಾಡಿದಾಗ, ತಾಯಿ ಮತ್ತು ಆತನ ಅಕ್ಕ ಸೇರಿ ಮಗನಿಗೆ ಸ್ವಲ್ಪ ಹೊಡೆದಿದ್ದಾರೆ ಎನ್ನಲಾಗಿದೆ. ಇದರಿಂದ ತೀವ್ರವಾಗಿ ನೊಂದ ಬಾಲಕ, ಕೋಪದಲ್ಲಿ ತಾಯಿಯ ಮೊಬೈಲ್ ತೆಗೆದುಕೊಂಡು 112 ಸಂಖ್ಯೆಗೆ ಫೋನ್ ಮಾಡಿದ್ದಾನೆ.
ದೂರಿನಲ್ಲಿ ಬಾಲಕ ಹೇಳಿದ್ದೇನು?
“ಚಿಪ್ಸ್ ಕೊಡಿಸಿ ಎಂದಿದ್ದಕ್ಕೆ ನನಗೆ ಹೊಡೆದಿದ್ದಾರೆ…”
ಕರೆ ಸ್ವೀಕರಿಸಿದ ಪೊಲೀಸ್ ಅಧಿಕಾರಿಗೆ ಬಾಲಕ ಅಳುತ್ತಾ, “ನನಗೆ ಚಿಪ್ಸ್ ಪ್ಯಾಕೆಟ್ ಕೊಡಿಸಿ ಎಂದು ಕೇಳಿದೆ. ಅದಕ್ಕೆ ಅಮ್ಮ ಮತ್ತು ಅಕ್ಕ ಇಬ್ಬರೂ ಸೇರಿ ನನಗೆ ಹೊಡೆದಿದ್ದಾರೆ” ಎಂದು ದೂರು (Complaint) ನೀಡಿದ್ದಾನೆ.
ಈ ಕರೆಯ ವಿಡಿಯೋ ತುಣುಕು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral Video) ಆಗಿದೆ. ಈ ಸಂದರ್ಭದಲ್ಲಿ, ಶಾಂತವಾಗಿ ಆ ಬಾಲಕನ ಮಾತುಗಳನ್ನು ಆಲಿಸಿ, ಅವನಿಗೆ ಧೈರ್ಯ ತುಂಬಿರುವ ಪೊಲೀಸ್ ಅಧಿಕಾರಿಯ (Police Officer) ವರ್ತನೆಗೆ ನೆಟ್ಟಿಗರು ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. Read this also : ಮನ ಮುಟ್ಟುವ ವಿಡಿಯೋ., ಹುತಾತ್ಮ ಯೋಧನ ಸಹೋದರಿಯ ಮದುವೆಯಲ್ಲಿ ಅವರ ‘ಅಣ್ಣ’ನಾಗಿ ನಿಂತ ವೀರರು..!
Viral – ದೂರು ದಾಖಲಿಸಿದ ನಂತರ ಪೊಲೀಸರ ಮಾನವೀಯ ಕಾರ್ಯ!
ಬಾಲಕನ ದೂರಿನ ಗಂಭೀರತೆಯನ್ನು ತಿಳಿದರೂ, ಇದೊಂದು ಮುಗ್ಧ ಮನಸ್ಸಿನ ನೋವು ಎಂದು ಅರಿತ ಪೊಲೀಸರು, ಅತ್ಯಂತ ಮಾನವೀಯ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here

Viral – ಅಮ್ಮನಿಗೆ ತಾಕೀತು, ಮಗನಿಗೆ ಸರ್ಪ್ರೈಸ್
ಮೊದಲು ಕರೆ ಮಾಡಿದ ಬಾಲಕನಿಗೆ ಸಮಾಧಾನ ಹೇಳಿದ ಪೊಲೀಸ್ ಅಧಿಕಾರಿಗಳು, ಇನ್ಮುಂದೆ ಮಗುವಿಗೆ ಹೊಡೆಯದಂತೆ ಆತನ ತಾಯಿಗೆ ತಾಕೀತು ಮಾಡಿದ್ದಾರೆ. ಇದರ ಜೊತೆಗೆ, ಪೊಲೀಸರು ನೇರವಾಗಿ ಆ ಬಾಲಕನ ಮನೆಗೆ ಭೇಟಿ ನೀಡಿದ್ದಾರೆ. ಹೋಗುವಾಗ ಖಾಲಿಯಾಗಿ ಹೋಗಿಲ್ಲ! ಬದಲಿಗೆ, ತಾವೇ ಸ್ವತಃ ಹಣ ಕೊಟ್ಟು ಐದಾರು ಕುರ್ಕುರೆ ಪ್ಯಾಕೆಟ್‌ಗಳನ್ನು ತೆಗೆದುಕೊಂಡು ಹೋಗಿ ಆತನಿಗೆ ನೀಡುವ ಮೂಲಕ ದೊಡ್ಡ ಸರ್ಪ್ರೈಸ್ ಕೊಟ್ಟಿದ್ದಾರೆ.
ಕುರ್ಕುರೆ ಪ್ಯಾಕೆಟ್‌ಗಳನ್ನು ನೋಡಿದ ಕೂಡಲೇ ಬಾಲಕನ ಮುಖದಲ್ಲಿ ಮೂಡಿದ ನಗು, ಆತನ ಕೋಪ ಮತ್ತು ನೋವು ಎರಡನ್ನೂ ಮಾಯ ಮಾಡಿದೆ. ಪೊಲೀಸರ ಈ ನಡೆ ಪ್ರಶಂಸೆಗೆ ಪಾತ್ರವಾಗಿದೆ. ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಂಡು ಸ್ಪಂದಿಸಿದ ಈ ಘಟನೆ ದೇಶಾದ್ಯಂತ ಸುದ್ದಿಯಾಗಿದೆ.
