...
Tuesday, February 10, 2026
HomeStateVijayapura Love Marriage Case : ಮಗಳೇ ಮನೆಗೆ ಬಾ ಎಂದು ಗೋಳಾಡಿದ ತಾಯಿ; ತಿರುಗಿ...

Vijayapura Love Marriage Case : ಮಗಳೇ ಮನೆಗೆ ಬಾ ಎಂದು ಗೋಳಾಡಿದ ತಾಯಿ; ತಿರುಗಿ ನೋಡದೆ ಪ್ರಿಯಕರನ ಕೈ ಹಿಡಿದ ಮಗಳು…!

“ಮಗಳೇ ಮನೆಗೆ ಬಾರಮ್ಮಾ” ಎಂದು ಪೋಷಕರು ಪೊಲೀಸರ ಮುಂದೆಯೇ ಗೋಳಾಡಿದರೂ, ಹೆತ್ತವರನ್ನು ಬಿಟ್ಟು ಪ್ರಿಯಕರನ ಜೊತೆ ಯುವತಿಯೊಬ್ಬಳು ತೆರಳಿದ ಘಟನೆ ವಿಜಯಪುರದಲ್ಲಿ ನಡೆದಿದೆ. ನಾಪತ್ತೆಯಾಗಿದ್ದ ಯುವತಿ ದಿಢೀರ್ ಠಾಣೆಗೆ ಪ್ರತ್ಯಕ್ಷವಾಗಿ, ತಾನು ಮೊಹಮ್ಮದ್ ಸಲೀಂ ಎಂಬಾತನನ್ನು (Vijayapura Love Marriage Case) ಮದುವೆಯಾಗಿರುವುದಾಗಿ ಹೇಳಿಕೆ ನೀಡುವ ಮೂಲಕ ಪೋಷಕರಿಗೆ ಆಘಾತ ನೀಡಿದ್ದಾಳೆ.

Vijayapura love marriage case where parents emotionally plead with their daughter at police station as she leaves with her husband

Vijayapura Love Marriage Case – ಪ್ರಕರಣದ ಹಿನ್ನೆಲೆ

ನಗರದ ಶಾನುಭಾಯಿ‌ ಚೌಹಾಣ್ ಮತ್ತು ಪಂಡಿತ ಚೌಹಾಣ್ ದಂಪತಿಯ ಪುತ್ರಿ ನಿಶಾ, ಫೆಬ್ರವರಿ 4 ರಿಂದ ನಾಪತ್ತೆಯಾಗಿದ್ದಳು. ಈ ಕುರಿತು ಪೋಷಕರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ತನಿಖೆ ನಡೆಯುತ್ತಿರುವಾಗಲೇ, ನಿಶಾ ನಗರದ ಮಹಿಳಾ ಪೊಲೀಸ್ ಠಾಣೆಗೆ ಹಾಜರಾಗಿದ್ದಾಳೆ. Read this also : ಇಬ್ಬರು ಮಕ್ಕಳ ತಂದೆಯೊಂದಿಗೆ ಯುವತಿಯ ಲವ್‌.. ಮರ್ಯಾದೆಗೆ ಹೆದರಿ ಪ್ರಾಣ ಕಳೆದುಕೊಂಡ ತಾಯಿ-ಮಗಳು..!

ಠಾಣೆಯಲ್ಲಿ ನಡೆದಿದ್ದೇನು?

ತನ್ನ ಪ್ರಿಯಕರ ಎನ್ನಲಾದ ಮೊಹಮ್ಮದ್ ಸಲೀಂ ಸುತಾರ್ ಜೊತೆ ಠಾಣೆಗೆ ಬಂದ ನಿಶಾ, ತಾವು ಈಗಾಗಲೇ ಮದುವೆಯಾಗಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾಳೆ. “ನಾನು ಮೇಜರ್ ಆಗಿದ್ದು, ಸ್ವಇಚ್ಛೆಯಿಂದ ಸಲೀಂನನ್ನು ಮದುವೆಯಾಗಿದ್ದೇನೆ. ನಾನು ಪೋಷಕರೊಂದಿಗೆ ಹೋಗುವುದಿಲ್ಲ, ಪತಿಯ ಜೊತೆಗೇ ಇರುತ್ತೇನೆ” ಎಂದು ಆಕೆ ಪಟ್ಟು ಹಿಡಿದಿದ್ದಾಳೆ. (Vijayapura Love Marriage Case) ಈ ವಿಷಯ ತಿಳಿದು ಕೂಡಲೇ ಠಾಣೆಗೆ ಧಾವಿಸಿದ ಪೋಷಕರು, ಮಗಳನ್ನು ಮನೆಗೆ ಬರುವಂತೆ ಸಾಕಷ್ಟು ವಿನಂತಿಸಿಕೊಂಡಿದ್ದಾರೆ. ತಾಯಿ ಶಾನುಬಾಯಿ ಮಗಳಿಗಾಗಿ ಗೋಳಾಡಿದರೂ, ನಿಶಾ ಮಾತ್ರ ಪೊಲೀಸರ ವಾಹನದಲ್ಲೇ ಸಲೀಂ ಜೊತೆ ತೆರಳಿದ್ದಾಳೆ.

Vijayapura love marriage case where parents emotionally plead with their daughter at police station as she leaves with her husband

ಅಸಹಾಯಕರಾದ ಪೋಷಕರು

ಮಗಳು ತನ್ನ ಮಾತನ್ನು ಕೇಳದೆ ಪ್ರಿಯಕರನೊಂದಿಗೆ ಹೋದ ಹಿನ್ನೆಲೆಯಲ್ಲಿ, ಪೋಷಕರು ತಡರಾತ್ರಿಯವರೆಗೂ ಗಾಂಧಿಚೌಕ್ ಪೊಲೀಸ್ ಠಾಣೆಯ ಹೊರಭಾಗದಲ್ಲಿ ಕುಳಿತು ಕಣ್ಣೀರು (Vijayapura Love Marriage Case) ಹಾಕಿದ್ದಾರೆ. ಕೊನೆಗೆ ಪೊಲೀಸರ ಸಂಧಾನದ ನಡುವೆಯೂ ಮಗಳು ಬಾರದಿದ್ದಾಗ, ದಂಪತಿ ಭಾರವಾದ ಮನಸ್ಸಿನಿಂದ ಮನೆಗೆ ಮರಳಿದ್ದಾರೆ. ಕಾನೂನಿನ ಚೌಕಟ್ಟಿನಲ್ಲಿ ಯುವತಿ ಮೇಜರ್ ಆಗಿರುವುದರಿಂದ ಪೊಲೀಸರು ಆಕೆಯನ್ನು ಆಕೆಯ ಇಚ್ಛೆಯಂತೆ ಕಳುಹಿಸಿಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.

by ISM Kannada News Deskhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Seraphinite AcceleratorOptimized by Seraphinite Accelerator
Turns on site high speed to be attractive for people and search engines.