Video – ಇತ್ತೀಚಿನ ದಿನಗಳಲ್ಲಿ ಅನಿರೀಕ್ಷಿತ ಸಾವುಗಳು ಹೆಚ್ಚಾಗುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ. ಯುವಕರಿಂದ ಹಿಡಿದು ವಯಸ್ಸಾದವರವರೆಗೆ ಎಲ್ಲರೂ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸಾವಿಗೀಡಾಗುತ್ತಿದ್ದಾರೆ. ಕ್ರಿಕೆಟ್ ಆಡುತ್ತಿದ್ದ ಯುವಕ, ಡ್ಯಾನ್ಸ್ ಮಾಡುತ್ತಿದ್ದ ಇನ್ನೊಬ್ಬರು ಹೀಗೆ ಈಗಾಗಲೇ ಸಾಕಷ್ಟು ಜನರು ಅಕಾಲಿಕ ಮರಣ ಹೊಂದಿದ್ದಾರೆ. ಈಗ ಮದುವೆ ಸಮಾರಂಭವೊಂದರಲ್ಲಿ ಡ್ಯಾನ್ಸ್ ಮಾಡುತ್ತಿದ್ದ ಮಹಿಳೆಯೊಬ್ಬರು ಇದ್ದಕ್ಕಿದ್ದಂತೆಯೇ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ.
Video – ಸಂತೋಷದ ಕ್ಷಣ ದುರಂತಕ್ಕೆ ತಿರುಗಿದ ಪರಿ
ಇತ್ತೀಚಿಗೆ ಚೆನ್ನೈ ನಲ್ಲಿ ನಡೆದ ಮದುವೆ ಆರತಕ್ಷತೆ ಸಮಾರಂಭದಲ್ಲಿ ಈ ದುರದೃಷ್ಟಕರ ಘಟನೆ ನಡೆದಿದೆ. ದಂಪತಿಗಳಾದ ಜೀವಾ ಮತ್ತು ಅವರ ಪತಿ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಪ್ರಖ್ಯಾತ ಗಾಯಕ ವೆಲ್ಮುರುಗನ್ ವೇದಿಕೆಯಲ್ಲಿ ಹಾಡುಗಳನ್ನು ಹಾಡುತ್ತಾ, ಅತಿಥಿಗಳನ್ನು ಡ್ಯಾನ್ಸ್ ಮಾಡಲು ಆಹ್ವಾನಿಸಿದ್ದರು. ಈ ವೇಳೆ, ಜೀವಾ ವೇದಿಕೆ ಮೇಲೆ ಹೋಗಿ ನೃತ್ಯ ಮಾಡುತ್ತಾ ಸಂಭ್ರಮಿಸಿದರು. ಇತರ ಸಂಬಂಧಿಕರೂ ಡ್ಯಾನ್ಸ್ ಮಾಡಲು ಸೇರಿಕೊಂಡರು. ಆದರೆ, ಇದ್ದಕ್ಕಿದ್ದಂತೆ ಜೀವಾ ವೇದಿಕೆಯ ಮೇಲೆ ಕುಸಿದು ಬಿದ್ದರು. ತಕ್ಷಣ ಸಂಬಂಧಿಕರು ಆಕೆಯನ್ನು ಮೇಲೆತ್ತಲು ಪ್ರಯತ್ನಿಸಿದರು. ಆದರೆ, ಆಕೆ ಏಳಲೇ ಇಲ್ಲ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.
Viral Video : Click Here
Video – ಆಸ್ಪತ್ರೆಗೆ ತಲುಪಿದರೂ, ಉಳಿಯಲಿಲ್ಲ ಪ್ರಾಣ
ಆಸ್ಪತ್ರೆಯಲ್ಲಿ ವೈದ್ಯರು ಜೀವಾ ಅವರನ್ನು ಪರಿಶೀಲಿಸಿ, ಅವರು ಆಗಲೇ ಮೃತಪಟ್ಟಿರುವುದಾಗಿ ದೃಢಪಡಿಸಿದರು. ಸಂತೋಷ ಮತ್ತು ನಗುವಿನಿಂದ ತುಂಬಿದ್ದ ಆ ವಾತಾವರಣ ಕ್ಷಣಾರ್ಧದಲ್ಲೇ ದುಃಖ ಮತ್ತು ಆಘಾತಕ್ಕೆ ತಿರುಗಿತು. ಅಲ್ಲಿ ನೆರೆದಿದ್ದ ಎಲ್ಲರೂ ಈ ಘಟನೆಯನ್ನು ನೋಡಿ ದಿಗ್ಭ್ರಮೆಗೊಂಡರು. ಅಲ್ಲಿ ನೆರೆದಿದ್ದ ಪ್ರೇಕ್ಷಕರು ಈ ಘಟನೆಯನ್ನು ವಿಡಿಯೋ ಮಾಡಿದ್ದಾರೆ. Read this also : ಅಜ್ಜ-ಅಜ್ಜಿಯರ ಜೊತೆ ಮೊಮ್ಮಗಳ ಹೃದಯಸ್ಪರ್ಶಿ ಡ್ಯಾನ್ಸ್: ಲಕ್ಷಾಂತರ ಜನರ ಮನಗೆದ್ದ ವೈರಲ್ ವಿಡಿಯೋ…!
ವೈರಲ್ ಆದ ವಿಡಿಯೋ
ಜೀವಾ ಅವರ ಪತಿ ಚೆನ್ನೈನಲ್ಲಿ ಪ್ರಸಿದ್ಧ ಮೆಡಿಕಲ್ ಶಾಪ್ ನಡೆಸುತ್ತಿದ್ದಾರೆ. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಒಬ್ಬರು ಎಂ.ಬಿ.ಬಿ.ಎಸ್ ಹಾಗೂ ಇನ್ನೊಬ್ಬರು ಫಾರ್ಮಸಿ ಓದುತ್ತಿದ್ದಾರೆ. ಮದುವೆ ಸಮಾರಂಭದಲ್ಲಿ ಸಂಭ್ರಮಿಸಲು ಹೋಗಿದ್ದ ಜೀವಾ ಅವರ ಅನಿರೀಕ್ಷಿತ ಸಾವು ಅವರ ಕುಟುಂಬಕ್ಕೆ ತೀವ್ರ ದುಃಖವನ್ನುಂಟು ಮಾಡಿದೆ. ಈ ಘಟನೆಗೆ ಸಂಬಂಧಿಸಿದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.