Sunday, October 26, 2025
HomeStateValmiki Jayanti 2025 : ರಾಮಾಯಣ ಒಂದು ಜಾತಿ, ಒಂದು ಕುಲಕ್ಕೆ ಸೀಮಿತವಲ್ಲ, ಸರ್ವರಿಗೂ ಸಲ್ಲುವಂತದು...

Valmiki Jayanti 2025 : ರಾಮಾಯಣ ಒಂದು ಜಾತಿ, ಒಂದು ಕುಲಕ್ಕೆ ಸೀಮಿತವಲ್ಲ, ಸರ್ವರಿಗೂ ಸಲ್ಲುವಂತದು : ಶಾಸಕ ಸುಬ್ಬಾರೆಡ್ಡಿ

Valmiki Jayanti 2025 – ಆದಿಕವಿ ಮಹರ್ಷಿ ವಾಲ್ಮೀಕಿಯವರು ರಚಿಸಿದಂತಹ ರಾಮಾಯಣ ಕೇವಲ ಒಂದು ಜಾತಿಗಾಗಲೀ ಅಥವಾ ಒಂದು ಕುಲಕ್ಕಾಗಲಿ ಅಥವಾ ಒಂದು ಸಮುದಾಯಕ್ಕಾಗಲೀ ಸೀಮಿತವಲ್ಲ, ಅದು ಸರ್ವರಿಗೂ ಸಲ್ಲುವಂತಹುದು, ಮಹರ್ಷಿ ವಾಲ್ಮೀಕಿಯವರ  ಆದರ್ಶಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು.

MLA S.N. Subbareddy addressing the audience during Maharshi Valmiki Jayanti celebrations at Gudibande, Chikkaballapur

ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಹೊರವಲಯದ ಆರ್.ಕೆ.ಎನ್. ಕನ್ವೆಷನ್ ಹಾಲ್ ನಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಶ್ರೀ ಶ್ರೀ ಶ್ರೀ ಮಹರ್ಷಿ ವಾಲ್ಮೀಕಿ ನಾಯಕರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

Valmiki Jayanti 2025 – ವಾಲ್ಮೀಕಿ ಆದರ್ಶಗಳ ಅಳವಡಿಕೆ

ಇಡೀ ವಿಶ್ವಕ್ಕೆ ಮಾದರಿಯಾದ ರಾಮಾಯಣವನ್ನು ಬರೆದುಕೊಟ್ಟ ಮಹರ್ಷಿ ವಾಲ್ಮೀಕಿ ರವರ ಜಯಂತಿಯನ್ನು ಕೇವಲ ಒಂದು ದಿನದ ಮಟ್ಟಿಗೆ ಆಚರಿಸದೇ ಸಾಲದು, ಅವರ ಆದರ್ಶಗಳನ್ನು, ಗುಣಗಳನ್ನು ಅಳವಡಿಸಿಕೊಂಡಾಗ ಮಾತ್ರ ಅವರಿಗೆ ನಿಜವಾದ ಗೌರವ ಕೊಟ್ಟಂತಾಗುತ್ತದೆ. ಅವರು ರಚಿಸಿದಂತಹ ರಾಮಾಯಣ ಇಂದು ವಿಶ್ವಕ್ಕೆ ಮಾದರಿಯಾಗಿದೆ ಎಂದರೇ ತಪ್ಪಾಗಲಾರದು. ವಾಲ್ಮೀಕಿ ಮೊದಲು ಹೇಗಿದ್ದರು, ಬಳಿಕ ಅವರು ಹೇಗಾದರು ಎಂಬುದು ಎಲ್ಲರಿಗೂ ತಿಳಿದೇ ಇದೆ. ಅವರಂತೆ ಪ್ರತಿಯೊಬ್ಬರ ಸನ್ಮಾರ್ಗದಲ್ಲಿ ನಡೆಯಬೇಕು ಎಂದರು.

Valmiki Jayanti 2025 – ವಾಲ್ಮೀಕಿ ಭವನ ನಿರ್ಮಾಣಕ್ಕೆ ಶಾಸಕರ ಭರವಸೆ ಮತ್ತು ಪ್ರಯತ್ನ

ಇನ್ನೂ ಈಗಾಗಲೇ ಮಹರ್ಷಿ ವಾಲ್ಮೀಕಿ ಭವನ  ನಿರ್ಮಾಣಕ್ಕೆ ಸರ್ಕಾರದಿಂದ ಒಟ್ಟು 1.10 ಗುಂಟೆ ಜಮೀನನ್ನು ನೀಡಲಾಗಿದೆ. 2 ಕೋಟಿ ಅನುದಾನದಲ್ಲಿ ಭವನ ನಿರ್ಮಾಣಕ್ಕೆ ಪ್ರಸ್ತಾವನೆ ಸಹ ಸಲ್ಲಿಸಲಾಗಿದೆ. ಅನುದಾನದ ಕೊರತೆಯಿಂದ ತಡವಾಗುತ್ತಿದೆ. ಮುಖ್ಯಮಂತ್ರಿಗಳೂ ಸಹ ಆದಷ್ಟು ಶೀಘ್ರವಾಗಿ ಭವನ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದಾರೆ. 2 ಕೋಟಿಯ ಜೊತೆಗೆ ಅಗತ್ಯ ಬಿದ್ದರೇ 5 ಕೋಟಿ ವೆಚ್ಚದಲ್ಲಿ ಭವನ ನಿರ್ಮಾಣ ಕ್ಕಾಗಿ ಅನುದಾನ ಬಿಡುಗಡೆ ಮಾಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಸದ್ಯ ವಾಲ್ಮೀಕಿ ಸಂಘದ ಮುಖಂಡರ ಮನವಿಯಂತೆ ಸುಮಾರು 20 ಕ್ಕೂ ಅಧಿಕ ವೆಚ್ಚದಲ್ಲಿ ವಾಲ್ಮೀಕಿ ಭವನ ನಿರ್ಮಾಣಕ್ಕೆ ನೀಡಿದ ಜಾಗದ ಸುತ್ತಲೂ ಕಾಪೌಂಡ್ ನಿರ್ಮಾಣ ಮಾಡಲು ಗುದ್ದಲಿ ಪೂಜೆಯನ್ನು ನೆರವೇರಿಸಿದ್ದೇನೆ. ಮುಂದಿನ ವರ್ಷದೊಳಗೆ ಭವನ ನಿರ್ಮಾಣ ಮಾಡಿಕೊಡಲು ಕಠಿಣ ಪ್ರಯತ್ನ ಮಾಡುತ್ತೇನೆ ಎಂದರು.

MLA S.N. Subbareddy addressing the audience during Maharshi Valmiki Jayanti celebrations at Gudibande, Chikkaballapur

Valmiki Jayanti 2025 – ಅಧ್ಯಕ್ಷರ ಪ್ರಾಸ್ತಾವಿಕ ನುಡಿಗಳು

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಭಾಷಣ ನೆರವೇರಿಸಿದ ವಾಲ್ಮೀಕಿ ಸಂಘದ ಅಧ್ಯಕ್ಷ ಎನ್.ವಿ.ಗಂಗಾಧರ್‍, ತಾಲೂಕಿನಲ್ಲಿ ವಾಲ್ಮೀಕಿ ಭವನ ನಿರ್ಮಾಣ ಮಾಡಲು ಸುಮಾರು ವರ್ಷಗಳಿಂದ ನಾವು ಬೇಡಿಕೆ ಇಡುತ್ತಿದ್ದೇವೆ. ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ ಕೆಲವೊಂದು ಸಮಸ್ಯೆಗಳಿಂದ ತಡವಾಗುತ್ತಿದೆ. ಸದ್ಯ ವಾಲ್ಮೀಕಿ ಭವನ ನಿರ್ಮಾಣದ ಜಾಗದ ಸುತ್ತಲೂ ಕಾಪೌಂಡ್ ನಿರ್ಮಾಣಕ್ಕೆ ಶಾಸಕರು ಅನುದಾನ ನೀಡಿ, ಇಂದು ಗುದ್ದಲಿ ಪೂಜೆ ನೆರವೇರಿಸಿದ್ದಾರೆ. ಜೊತೆಗೆ ಆದಷ್ಟ ಶೀಘ್ರವಾಗಿ ವಾಲ್ಮೀಕಿ ಭವನ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಳಿಸುವ ಭರವಸೆ ಸಹ ನೀಡಿದ್ದಾರೆ ಎಂದರು. Read this also : ಸಮುದಾಯದ ಜನ ಸಂಘಟಿತರಾದಾಗ ಮಾತ್ರ ಅಭಿವೃದ್ದಿ ಸಾಧ್ಯ: ಪ್ರಸನ್ನಾನಂದ ಸ್ವಾಮೀಜಿ

Valmiki Jayanti 2025 – ಅದ್ದೂರಿ ಮೆರವಣಿಗೆ, ವಿದ್ಯಾರ್ಥಿಗಳಿಗೆ ಸನ್ಮಾನ

ವೇದಿಕೆ ಕಾರ್ಯಕ್ರಮಕ್ಕೂ ಮುನ್ನಾ ಗುಡಿಬಂಡೆ ತಾಲೂಕಿನ 8 ಗ್ರಾಮ ಪಂಚಾಯತಿಗಳಿಂದ ಮಹರ್ಷಿ ವಾಲ್ಮೀಕಿ ರವರ ಭಾವಚಿತ್ರಗಳನ್ನೊಳಗೊಂಡ ಬೆಳ್ಳಿ ರಥಗಳನ್ನು ಪಟ್ಟಣದ ಅಂಬೇಡ್ಕರ್‍ ವೃತ್ತದಿಂದ ಮುಖ್ಯರಸ್ತೆಯಲ್ಲಿ ಅದ್ದೂರಿಯಾಗಿ ಕಲಾತಂಡಗಳೊಂದಿಗೆ ಮೆರವಣಿಗೆ ನಡೆಸಲಾಯಿತು. ಎಸ್.ಎಸ್.ಎಲ್.ಸಿ, ಪಿಯುಸಿ, ಪದವಿ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಪಡೆದ ಸಮುದಾಯದ ವಿದ್ಯಾರ್ಥಿಗಳಿಗೆ, ಸಮುದಾಯದ ಮುಖಂಡರನ್ನು ಸನ್ಮಾನಿಸಲಾಯಿತು.

MLA S.N. Subbareddy addressing the audience during Maharshi Valmiki Jayanti celebrations at Gudibande, Chikkaballapur

Valmiki Jayanti 2025 – ಕಾರ್ಯಕ್ರಮದಲ್ಲಿ ಹಾಜರಿದ್ದವರು

ಈ ಸಮಯದಲ್ಲಿ ತಹಸೀಲ್ದಾರ್‍ ಸಿಗ್ಬತ್ತುಲ್ಲಾ, ತಾಪಂ ಇಒ ನಾಗಮಣಿ, ಬಿಇಒ ಕೃಷ್ಣಕುಮಾರಿ, ಪಪಂ ಅಧ್ಯಕ್ಷ ವಿಕಾಸ್, ಉಪಾಧ್ಯಕ್ಷ ಗಂಗರಾಜು, ಸಹಾಯಕ ಕೃಷಿ ನಿರ್ದೇಶಕ ಕೇಶವರೆಡ್ಡಿ, ಆರಕ್ಷಕ ವೃತ್ತ ನಿರೀಕ್ಷಕ ನಯಾಜ್ ಬೇಗ್, ನೌಕರರ ಸಂಘದ ಅಧ್ಯಕ್ಷ ಮುನಿಕೃಷ್ಣಪ್ಪ, ಜಿಲ್ಲಾ ಜಾಗೃತಿ ಸಮಿತಿಯ ಸದಸ್ಯ ನರೇಂದ್ರ, ಕಸಾಪ ಮಂಜುನಾಥ್, ವಾಲ್ಮೀಕಿ ಸಮುದಾಯದ ಹರಿಕೃಷ್ಣ, ಕೋರೆನಹಳ್ಳಿ ಶ್ರೀನಿವಾಸ್, ದಪ್ಪರ್ತಿ ನಂಜುಂಡಪ್ಪ, ವಿವಿಧ ಗ್ರಾಮ ಪಂಚಾಯತಿಗಳ ಅಧ್ಯಕ್ಷರುಗಳು, ಸದಸ್ಯರುಗಳು, ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿ ಸೇರಿದಂತೆ ಹಲವರು ಇದ್ದರು.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular