ವಾಲ್ಮೀಕಿ ಸಮುದಾಯದಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರತೀ ವರ್ಷ ವಾಲ್ಮೀಕಿ ಜಾತ್ರಾ ಮಹೋತ್ಸವವನ್ನು (Valmiki Jatra Mahotsava) ಆಯೋಜನೆ ಮಾಡಲಾಗುತ್ತಿದ್ದು, ಜಾತ್ರಾ ಮಹೋತ್ಸವದ ಪೋಸ್ಟರ್ ಗಳನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುಡಿಬಂಡೆ ತಾಲೂಕು ವಾಲ್ಮೀಕಿ ಸಂಘದ ಪದಾಧಿಕಾರಿಗಳು ಹಾಗೂ ಸಮುದಾಯದ ಮುಖಂಡರು ಬಿಡುಗಡೆ ಮಾಡಿದರು.

Valmiki Jatra Mahotsava – ಸಮುದಾಯದ ಜಾಗೃತಿಯೇ ಜಾತ್ರೆಯ ಮುಖ್ಯ ಗುರಿ
ಈ ಸಮಯದಲ್ಲಿ ಗುಡಿಬಂಡೆ ವಾಲ್ಮೀಕಿ ಸಂಘದ ತಾಲೂಕು ಅಧ್ಯಕ್ಷ ಗಂಗಾಧರ್ ಮಾತನಾಡಿ, ವಾಲ್ಮೀಕಿ ಜಾತ್ರೆ ಮಾಡುವ ಮೊದಲ ಉದ್ದೇಶವೇ ಸಮುದಾಯದಲ್ಲಿ ಜಾಗೃತಿ ಮೂಡಿಸುವುದು. ನಮ್ಮ ಸಮುದಾಯ ಸರ್ವತೋಮುಖ ಅಭಿವೃದ್ದಿಯಾಗಬೇಕು. ಅದಕ್ಕೆ ನಮ್ಮ ಸಮುದಾಯ ಜಾಗೃತವಾಗಬೇಕು. ಸಮುದಾಯವನ್ನು ಎಚ್ಚರಿಸುವ ನಿಟ್ಟಿನಲ್ಲೇ ವಾಲ್ಮೀಕಿ ಜಾತ್ರಾ ಮಹೋತ್ಸವ ಹಮ್ಮಿಕೊಳ್ಳಲಾಗುತ್ತದೆ. ನಮ್ಮ ಸಮುದಾಯದ ಸ್ವಾಮೀಜಿಗಳಾದ ಪ್ರಸನ್ನಾನಂದಪುರಿ ಸ್ವಾಮಿಗಳು ಈ ಹಿಂದೆ ಪ್ರತಿಯೊಂದು ತಾಲೂಕಿನಲ್ಲಿ ಸಮುದಾಯದ ಜೊತೆ ಸಭೆ ನಡೆಸಿ ಜಾತ್ರಾ ಮಹೋತ್ಸವಕ್ಕೆ ಆಹ್ವಾನಿಸುತ್ತಿದ್ದರು. Read this also : ದಾನದ ವಿಚಾರದಲ್ಲಿ ಸೋನುಗೆ ಸಾಟಿಯೇ ಇಲ್ಲ; 22 ಲಕ್ಷ ನೀಡಿ ಗೋಮಾತೆಯ ಸೇವೆಗೆ ಸೈ ಎಂದ ನಟ..!
ಜಾತ್ರಾ ಮಹೋತ್ಸವಕ್ಕೆ ಎಲ್ಲರು ಸಹಕರಿಸಿ
ಆದರೆ ಈ ಬಾರಿ ಅವರ ಆರೋಗ್ಯದ ಕಾರಣದಿಂದ ಜಿಲ್ಲಾ ಕೇಂದ್ರದಲ್ಲಿ ಸಭೆ ನಡೆಸಲಾಯಿತು. ಅವರ ಸೂಚನೆಯಂತೆ ಇದೀಗ ಗುಡಿಬಂಡೆಯಲ್ಲಿ ತಾಲೂಕು ಮುಖಂಡರ ಜೊತೆ ಸಭೆ ನಡೆಸಿ ಜಾತ್ರಾ ಮಹೋತ್ಸವದ ಕುರಿತು ಚರ್ಚೆ ನಡೆಸಲಾಗಿದೆ. ತಾಲೂಕಿನಾದ್ಯಂತ ಇರುವ ಸಮುದಾಯದವರಿಗೆ ಜಾತ್ರಾ ಮಹೋತ್ಸವದ (Valmiki Jatra Mahotsava) ಕುರಿತು ಮಾಹಿತಿ ಹಾಗೂ ಅರಿವು ನೀಡಿ, ಬಳಿಕ ದೇಣಿಗೆ ಸಂಗ್ರಹ ಮಾಡಲಾಗುತ್ತದೆ. ಸಂಗ್ರಹವಾದ ದೇಣಿಗೆಯನ್ನು ದಾವಣಗೆರೆಯ ರಾಚನಹಳ್ಳಿಯಲ್ಲಿರುವ ವಾಲ್ಮೀಕಿ ಮಠದಲ್ಲಿ ನಡೆಯಲಿರುವ ವಾಲ್ಮೀಕಿ ಜಾತ್ರಾ ಮಹೋತ್ಸವದಲ್ಲಿ ಸಲ್ಲಿಸಲಾಗುತ್ತದೆ. ಪ್ರತಿಯೊಬ್ಬರೂ ಜಾತ್ರಾ ಮಹೋತ್ಸವದ ಯಶಸ್ಸಿಗೆ ಸಹಕರಿಸಬೇಕು ಎಂದರು.

ಈ ವೇಳೆ ವಾಲ್ಮೀಕಿ (Valmiki Jatra Mahotsava) ಸಮುದಾಯದ ಮುಖಂಡರಾದ ಹರಿಕೃಷ್ಣ, ರಾಮಾಂಜಿನಪ್ಪ, ಚೆಂಡೂರು ಮೂರ್ತಿ, ನರಸಿಂಹಮೂರ್ತಿ, ಪೋಲಂಪಲ್ಲಿ ಅಂಜಿನಪ್ಪ, ನರೇಂದ್ರ, ಅಶ್ವತ್ಥಪ್ಪ, ಸತೀಶ್, ಶ್ರೀನಿವಾಸ್, ತಿರುಮಳಪ್ಪ ಸೇರಿದಂತೆ ಹಲವರು ಇದ್ದರು.
