ಪ್ರಕೃತಿಯಲ್ಲಿ ಯಾರು ಯಾರನ್ನು ಯಾವಾಗ ಸೋಲಿಸುತ್ತಾರೆ ಎಂದು ಹೇಳುವುದು ಕಷ್ಟ. ಕಾಡಿನ ರಾಜ ಸಿಂಹ ಅಂದಾಕ್ಷಣ ನಮಗೆ ನೆನಪಾಗುವುದು ಅದರ ಗಾಂಭೀರ್ಯ ಮತ್ತು ಶಕ್ತಿ. ಆದರೆ, ಗುಜರಾತ್‌ನ ವಡೋದರಾದಲ್ಲಿ ನಡೆದ ಒಂದು ಘಟನೆ ಪ್ರಾಣಿ ಪ್ರಿಯರನ್ನು ದೆಹಬೆರಗುಗೊಳಿಸಿದೆ. ಸಾಯಾಜಿಬಾಗ್ ಮೃಗಾಲಯದ ಹೆಮ್ಮೆಯಾಗಿದ್ದ ‘ಸಮೃದ್ಧಿ’ ಎಂಬ ಸಿಂಹವು ನಾಗರಹಾವಿನ ಕಡಿತಕ್ಕೆ ಒಳಗಾಗಿ ಸಾವನ್ನಪ್ಪಿದೆ.

Video – ಬೋನಿನೊಳಗೆ ನಡೆದಿದ್ದೇನು?
ಕಳೆದ ವಾರ ಸಾಯಾಜಿಬಾಗ್ ಮೃಗಾಲಯದಲ್ಲಿದ್ದ ಸಮೃದ್ಧಿ ಸಿಂಹದ ಬೋನಿನೊಳಗೆ ಆಕಸ್ಮಿಕವಾಗಿ ಒಂದು ನಾಗರಹಾವು ನುಗ್ಗಿತ್ತು. ತನ್ನ ಸಾಮ್ರಾಜ್ಯದೊಳಗೆ ಬಂದ ಹಾವನ್ನು ಕಂಡ ಸಿಂಹ ಸುಮ್ಮನೆ ಕೂರಲಿಲ್ಲ. ಇಬ್ಬರ ನಡುವೆ ಭೀಕರ ಕಾಳಗವೇ ನಡೆಯಿತು. ಸಿಂಹ ಹಾವಿನ ಮೇಲೆ ದಾಳಿ ಮಾಡುವ ಭರದಲ್ಲಿ, ಹಾವು ಕೂಡ ಪ್ರತಿರೋಧ ತೋರಿ ಸಿಂಹಕ್ಕೆ ಕಚ್ಚಿದೆ. ಈ ಹೋರಾಟದಲ್ಲಿ ಸಿಂಹದ ದೇಹಕ್ಕೆ ಹಾವಿನ ವಿಷ ತೀವ್ರವಾಗಿ ಹರಡಿತ್ತು.
Video – ಐದು ದಿನಗಳ ಕಾಲ ಸಾವು-ಬದುಕಿನ ಹೋರಾಟ
ದಾಳಿ ನಡೆದ ತಕ್ಷಣ ಮೃಗಾಲಯದ ವೈದ್ಯಕೀಯ ತಂಡ ಅಲರ್ಟ್ ಆಗಿತ್ತು. ಡಾ. ಪ್ರತ್ಯೂಷ್ ಪತಂಕರ್ ನೇತೃತ್ವದ ತಂಡ ಸಮೃದ್ಧಿಯನ್ನು ಉಳಿಸಿಕೊಳ್ಳಲು ಹಗಲಿರುಳು ಶ್ರಮಿಸಿತು. ಸುಮಾರು 24 ಗಂಟೆಗಳ ಕಾಲ ನಿರಂತರ ನಿಗಾ ವಹಿಸಿ ಚಿಕಿತ್ಸೆ ನೀಡಲಾಯಿತು. ಆದರೆ, ನಾಗರಹಾವಿನ ವಿಷ ದೇಹದಾದ್ಯಂತ ಹರಡಿದ್ದರಿಂದ ಸಿಂಹದ ಆರೋಗ್ಯ ಹದಗೆಡುತ್ತಾ ಹೋಯಿತು. ಅಂತಿಮವಾಗಿ ಐದು ದಿನಗಳ ಕಾಲ ಸಾವು ಬದುಕಿನ ನಡುವೆ ಹೋರಾಡಿದ ಸಮೃದ್ಧಿ, ಶುಕ್ರವಾರ ಸಂಜೆ ಕೊನೆಯುಸಿರೆಳೆದಿದೆ. Read this also : ಒಂದು ಹಾವು ಇನ್ನೊಂದು ಹಾವನ್ನೇ ನುಂಗುತ್ತಿರುವ ದೃಶ್ಯ ನೋಡಿ ನೆಟ್ಟಿಗರು ಶಾಕ್…!
Video – ಮೃಗಾಲಯದಲ್ಲಿ ಈಗ ಸಿಂಹಗಳೇ ಇಲ್ಲ!
ಸಮೃದ್ಧಿಯ ಸಾವು ವಡೋದರಾ ಜನತೆಗೆ ತುಂಬಲಾರದ ನಷ್ಟ. ಯಾಕೆಂದರೆ, ಸಾಯಾಜಿಬಾಗ್ ಮೃಗಾಲಯದಲ್ಲಿದ್ದ ಕೊನೆಯ ಸಿಂಹ ಇದಾಗಿತ್ತು. ಈಗ ಸಮೃದ್ಧಿಯ ನಿರ್ಗಮನದೊಂದಿಗೆ ಈ ಐತಿಹಾಸಿಕ ಮೃಗಾಲಯದಲ್ಲಿ ಸಿಂಹಗಳ ಸಂತತಿ ಇಲ್ಲದಂತಾಗಿದೆ. “ಸಮೃದ್ಧಿಯನ್ನು ಕಳೆದುಕೊಂಡಿರುವುದು ನಮಗೆ ಅತೀವ ದುಃಖ ತಂದಿದೆ. ನಾವು ಅವಳನ್ನು ಉಳಿಸಿಕೊಳ್ಳಲು ಎಲ್ಲಾ ಪ್ರಯತ್ನಗಳನ್ನು ಮಾಡಿದೆವು, ಆದರೆ ಸಾಧ್ಯವಾಗಲಿಲ್ಲ,” ಎಂದು ಡಾ. ಪ್ರತ್ಯೂಷ್ ಭಾವುಕರಾಗಿ ನುಡಿದಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here
Video – ಬಿಳಿ ಹುಲಿಗಳ ಆಗಮನದ ನಡುವೆ ಕಹಿ ಸುದ್ದಿ
ವಿಪರ್ಯಾಸವೆಂದರೆ, ಸುಮಾರು 40 ವರ್ಷಗಳ ದೀರ್ಘ ಕಾಲದ ನಂತರ ಈ ಮೃಗಾಲಯಕ್ಕೆ ರಾಜ್‌ಕೋಟ್‌ನಿಂದ ಬಿಳಿ ಹುಲಿಗಳ ಜೋಡಿಯನ್ನು ಕರೆತರಲು ಸಿದ್ಧತೆ ನಡೆಸಲಾಗಿತ್ತು. ಹೊಸ ಅತಿಥಿಗಳ ಬರಮಾಡಿಕೊಳ್ಳುವ ಸಂಭ್ರಮದಲ್ಲಿದ್ದ ಮೃಗಾಲಯದ ಸಿಬ್ಬಂದಿಗೆ ಸಮೃದ್ಧಿಯ ಸಾವು ಬರಸಿಡಿಲಿನಂತೆ ಬಡಿದಿದೆ.
