Vadodara – ಮಗುವಿನ ಆಸೆ, ಪ್ರತಿಯೊಂದು ಕುಟುಂಬಕ್ಕೂ ಸಹಜ. ಆದರೆ ಆ ಆಸೆಯನ್ನು ಈಡೇರಿಸಿಕೊಳ್ಳಲು ಕುಟುಂಬದ ಸದಸ್ಯರು ಸೊಸೆಯ ಮೇಲೆ ಅಮಾನವೀಯ ದೌರ್ಜನ್ಯ ಎಸಗಿದ ಘಟನೆ ಎಲ್ಲರನ್ನೂ ಬೆಚ್ಚಿಬೀಳಿಸಿದೆ. ವೈದ್ಯಕೀಯ ಪರೀಕ್ಷೆಯಲ್ಲಿ ಪತಿಗೆ ಇರುವ ವೀರ್ಯಾಣು ಕೊರತೆ ಕಾರಣಕ್ಕೆ ಮಗುವಾಗದಿದ್ದರೂ, ಅದರ ಸಂಪೂರ್ಣ ಹೊಣೆ ಸೊಸೆಯ ಮೇಲೆ ಬಿದ್ದಿದೆ. ಮಗನಿಗೆ ಮಕ್ಕಳಾಗುತ್ತಿಲ್ಲ ಎಂಬ ಕಾರಣಕ್ಕೆ ಅತ್ತೆ-ಮಾವ ಮತ್ತು ಸಂಬಂಧಿಗಳು ಸೊಸೆಗೆ ನಿರಂತರವಾಗಿ ದೌರ್ಜನ್ಯ ಎಸಗಿದ ಪ್ರಕರಣ ಗುಜರಾತ್ ನ ವಡೋದರದಲ್ಲಿ ಬೆಳಕಿಗೆ ಬಂದಿದೆ.

Vadodara – ಮದುವೆಯಾದ ಕೆಲವೇ ದಿನಗಳಲ್ಲಿ ಆರಂಭವಾದ ಹಿಂಸೆ
ಸುಮಾರು ಒಂದುವರೆ ವರ್ಷದ ಹಿಂದೆ ಮದುವೆಯಾಗಿದ್ದ ಮಹಿಳೆಯು ತನ್ನ ಗಂಡನ ಮನೆಯಲ್ಲಿ ನರಕಯಾತನೆ ಅನುಭವಿಸಿದ್ದಾಳೆ. ಮದುವೆಯಾದ ಕೆಲವೇ ತಿಂಗಳುಗಳಲ್ಲಿ ಮಗುವಾಗಿಲ್ಲ ಎಂಬ ಕಾರಣಕ್ಕೆ ಅತ್ತೆ-ಮಾವ ನಿಂದಿಸಲು ಆರಂಭಿಸಿದ್ದಾರೆ. “ನೀನು ಬಂಜೆ, ನಿನಗೆ ಮಕ್ಕಳಾಗಲ್ಲ” ಎಂದು ನಿತ್ಯವೂ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದರು. Read this also : ಮೊದಲು ನನ್ನ ಹೆಂಡತಿಯನ್ನು ಕಾಪಾಡಿ ಎಂದ ಪತಿ, ಚೀನಾದಲ್ಲಿ ವೈರಲ್ ಆದ ಹೃದಯ ಸ್ಪರ್ಶಿ ವಿಡಿಯೋ…!
ಮಹಿಳೆಯನ್ನು ವೈದ್ಯರ ಬಳಿ ಕರೆದೊಯ್ದಾಗ, ಆಕೆಯ ಆರೋಗ್ಯ ಸಂಪೂರ್ಣವಾಗಿ ಸರಿಯಿದೆ ಎಂಬುದು ದೃಢಪಟ್ಟಿದೆ. ಆದರೆ, ವೈದ್ಯಕೀಯ ಪರೀಕ್ಷೆಯ ವರದಿಯಲ್ಲಿ ಆಕೆಯ ಪತಿಗೆ ವೀರ್ಯಾಣು ಕೊರತೆ ಇರುವುದು ಬಯಲಾಗಿದೆ. ಈ ಕಾರಣದಿಂದ ಮಗು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಗೊತ್ತಾಗಿದೆ.
Vadodara – ಪತಿಯಿಂದಲೂ ನಿರ್ಲಕ್ಷ್ಯ, ಮಾವನ ವಿಚಿತ್ರ ಸಲಹೆ
ಪತಿಯ ವೀರ್ಯಾಣು ಕೊರತೆಯ ವಿಷಯ ಗೊತ್ತಾದ ನಂತರ, ಸೊಸೆಯನ್ನು ದತ್ತು ತೆಗೆದುಕೊಳ್ಳಲು ಪ್ರೇರೇಪಿಸಲಾಗಿದೆ. ಆದರೆ, ಇದಕ್ಕೆ ಅತ್ತೆ-ಮಾವ ಒಪ್ಪಿಲ್ಲ. ಇಷ್ಟೇ ಅಲ್ಲ, ಮಾವನು ಒಂದು ವಿಚಿತ್ರ ಮತ್ತು ಅಮಾನವೀಯ ಸಲಹೆಯನ್ನು ನೀಡಿದ್ದಾನೆ. “ನಾನು ಮತ್ತು ನೀನು ದೈಹಿಕ ಸಂಬಂಧ ಇಟ್ಟುಕೊಂಡರೆ ಮಗು ಆಗುತ್ತದೆ” ಎಂದು ಹೇಳಿ ಆಕೆಗೆ ಮಾನಸಿಕವಾಗಿ ಮತ್ತಷ್ಟು ನೋವುಂಟು ಮಾಡಿದ್ದಾನೆ. ಈ ಘಟನೆಯ ಕುರಿತು ಪತಿಗೆ ತಿಳಿಸಿದಾಗ, ಪತಿ “ನನಗೆ ಮಗು ಬೇಕು ಅಷ್ಟೇ, ಬೇರೆ ಏನೂ ಬೇಡ” ಎಂದು ನಿರ್ಲಕ್ಷ್ಯದಿಂದ ಉತ್ತರಿಸಿದ್ದಾನೆ. ಈ ಘಟನೆಯ ನಂತರ ಆ ಮಹಿಳೆಯು ಮಾನಸಿಕವಾಗಿ ಕುಗ್ಗಿ ಹೋಗಿದ್ದಾಳೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ: Click here
Vadodara – ಕೊನೆಗೂ ದೂರು ದಾಖಲು, ತನಿಖೆ ಆರಂಭ
ಗಂಡನ ಮನೆಯಲ್ಲಿ ನಿರಂತರವಾಗಿ ನಡೆಯುತ್ತಿದ್ದ ದೌರ್ಜನ್ಯ ತಾಳಲಾರದೆ, ಮಹಿಳೆಯು ತನ್ನ ತವರಿಗೆ ವಿಷಯ ತಿಳಿಸಿದ್ದಾಳೆ. ಆಕೆಯ ಪರಿಸ್ಥಿತಿ ಅರಿತ ಪೋಷಕರು ಕೂಡಲೇ ಪೊಲೀಸ್ ದೂರು ನೀಡಲು ಸಲಹೆ ನೀಡಿದ್ದಾರೆ. ಅದರಂತೆ, ಮಹಿಳೆಯು ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಘಟನೆಯು ಸಮಾಜದಲ್ಲಿ ಹೆಣ್ಣುಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳನ್ನು ಮತ್ತೊಮ್ಮೆ ಎತ್ತಿ ತೋರಿಸುತ್ತದೆ.
