ತುಮಕೂರು ಜಿಲ್ಲೆಯ ಸಿಂಗನಹಳ್ಳಿಯಲ್ಲಿ ಇಡೀ ಊರನ್ನೇ ಬೆಚ್ಚಿಬೀಳಿಸುವಂತಹ ಘಟನೆಯೊಂದು ನಡೆದಿದೆ. ಮನೆಯ ಮುಂಭಾಗದ ನೀರಿನ ಸಂಪ್‌ನಲ್ಲಿ ತಾಯಿ ಮತ್ತು ಇಬ್ಬರು ಪುಟ್ಟ ಮಕ್ಕಳ ಶವಗಳು ಪತ್ತೆಯಾಗಿದ್ದು, ಒಂದು ಸುಖೀ ಕುಟುಂಬ ಕಣ್ಣೆದುರೇ ಕಮರಿ ಹೋಗಿದೆ. ವಿಜಯಲಕ್ಷ್ಮೀ (ತಾಯಿ) ಹಾಗೂ ಮಕ್ಕಳಾದ ಚೇತನ ಮತ್ತು ಚೈತನ್ಯ ಮೃತ ದುರ್ದೈವಿಗಳು. (Tumakuru News) ಮೇಲ್ನೋಟಕ್ಕೆ ಇದು ಆತ್ಮಹತ್ಯೆಯಂತೆ ಕಂಡರೂ, ಮಕ್ಕಳ ಸಾವು ಈಗ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

Tumakuru News – ನಡೆದಿದ್ದೇನು?
ವಿಜಯಲಕ್ಷ್ಮೀ ಅವರ ಪತಿ ಸಂಪತ್ ಖಾಸಗಿ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರತಿದಿನದಂತೆ ಕೆಲಸ ಮುಗಿಸಿ ಮಧ್ಯಾಹ್ನ ಮನೆಗೆ ಬಂದಾಗ ಅವರಿಗೆ ಕಾದಿದ್ದು ಭೀಕರ ಆಘಾತ. ಮನೆಗೆ ಬಂದಾಗ ಪತ್ನಿ ಮತ್ತು ಮಕ್ಕಳು ಎಲ್ಲಿಯೂ ಕಾಣಿಸಲಿಲ್ಲ. ಗಾಬರಿಗೊಂಡ ಸಂಪತ್ ಅಕ್ಕಪಕ್ಕದವರನ್ನು ವಿಚಾರಿಸಿ, ಮನೆಯ ಸುತ್ತಮುತ್ತ ಹುಡುಕಾಡಿದ್ದಾರೆ. Read this also : ಪ್ರೀತಿಸಿದವನೇ ಕೈಕೊಟ್ಟನೆಂದು ಪ್ರಾಣಬಿಟ್ಟಳಾ ನಿಖಿತಾ? ಪ್ರಿಯಕರನ ಮನೆಯಲ್ಲೇ ಹಾಸನದ ಯುವತಿ ಸಾವು..!
ಕೊನೆಗೆ ಮನೆಯ ಮುಂದೆ ಇದ್ದ ಸಂಪ್ (ನೀರಿನ ಟ್ಯಾಂಕ್) ತೆರೆದಿರುವುದು ಅವರ ಗಮನಕ್ಕೆ ಬಂದಿದೆ. ಆತಂಕದಿಂದ ಒಳಗೆ ಇಣುಕಿ ನೋಡಿದಾಗ, ಪತ್ನಿ ಮತ್ತು ಇಬ್ಬರು ಮಕ್ಕಳ ಶವಗಳು ತೇಲುತ್ತಿರುವುದು ಕಂಡುಬಂದಿದೆ. ಕೂಡಲೇ ಅವರು ಕ್ಯಾತ್ಸಂದ್ರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಬಾಡಿಗೆ ಮನೆಯಲ್ಲಿ ನಡೆದ ದುರಂತ
ಮೂಲತಃ ಶಿವಗಂಗೆಯವರಾದ ಸಂಪತ್ ಕುಟುಂಬ ಕಳೆದ 30 ವರ್ಷಗಳಿಂದ ಸಿಂಗನಹಳ್ಳಿಯಲ್ಲಿ ವಾಸವಿತ್ತು. ಇತ್ತೀಚೆಗೆ ಈ ಬಾಡಿಗೆ ಮನೆಗೆ ಶಿಫ್ಟ್ ಆಗಿದ್ದರು. ಮನೆಯಲ್ಲಿ ಸಂಪತ್, ಪತ್ನಿ, ಮಕ್ಕಳು ಹಾಗೂ ವಯಸ್ಸಾದ ತಂದೆ-ತಾಯಿ ವಾಸವಿದ್ದರು. ಇನ್ನೂ ಘಟನೆಯ ದಿನ ಸಂಪತ್ ಮತ್ತು ಅವರ ತಾಯಿ ಕೆಲಸಕ್ಕೆ ಹೋಗಿದ್ದರು. ಮಾವ ಕೆಲಸದ ನಿಮಿತ್ತ ನೆಲಮಂಗಲಕ್ಕೆ ತೆರಳಿದ್ದರು. ಮನೆಯಲ್ಲಿ ಮಾವನ ಆರೈಕೆ ಮಾಡುತ್ತಾ ಮಕ್ಕಳ ಜೊತೆಗಿದ್ದ ವಿಜಯಲಕ್ಷ್ಮೀ, (Tumakuru News) ಎಲ್ಲರೂ ಹೋದ ಬಳಿಕ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ಡೆತ್‌ನೋಟ್ ಪತ್ತೆ
ಘಟನಾ ಸ್ಥಳಕ್ಕೆ ಧಾವಿಸಿದ ಕ್ಯಾತ್ಸಂದ್ರ ಪೊಲೀಸರು ಪರಿಶೀಲನೆ ನಡೆಸಿದಾಗ ಮನೆಯಲ್ಲಿ ಒಂದು ಡೆತ್‌ನೋಟ್ ಪತ್ತೆಯಾಗಿದೆ. “ನಮ್ಮ ಸಾವಿಗೆ ಯಾರೂ ಕಾರಣರಲ್ಲ” ಎಂದು ವಿಜಯಲಕ್ಷ್ಮೀ ಅದರಲ್ಲಿ ಬರೆದಿದ್ದಾರೆ ಎಂದು ತಿಳಿದುಬಂದಿದೆ. ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ವಿಜಯಲಕ್ಷ್ಮೀ ಅವರು ಕಳೆದ ಕೆಲವು ದಿನಗಳಿಂದ ಮಾನಸಿಕ ಖಿನ್ನತೆಯಿಂದ (Depression) ಬಳಲುತ್ತಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ಅವರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

ಮಕ್ಕಳ ಸಾವು ಮೂಡಿಸಿದೆ ಗೊಂದಲ!
ತಾಯಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಅಂದಾಜಿಸಿದ್ದರೂ, ಇಬ್ಬರು ಪುಟ್ಟ ಮಕ್ಕಳ ಸಾವು ಮಾತ್ರ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮಕ್ಕಳು ತಾವಾಗಿಯೇ ಬಿದ್ದಿದ್ದಾರಾ ಅಥವಾ ತಾಯಿಯೇ ಈ ಕೃತ್ಯ ಎಸಗಿದ್ದಾರಾ ಎಂಬ ಬಗ್ಗೆ ತನಿಖೆ ನಡೆಯಬೇಕಿದೆ. ಪ್ರಸ್ತುತ ಮೃತಳ (Tumakuru News) ಸಹೋದರ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.
