ಕೋಟ್ಯಂತರ ಭಕ್ತರ ಆರಾಧ್ಯದೈವ ತಿರುಮಲ ತಿಮ್ಮಪ್ಪನನ್ನು ದರ್ಶನ ಮಾಡಿಕೊಳ್ಳಲು ಪ್ರತಿನಿತ್ಯ ಸಾವಿರಾರು ಸಂಖ್ಯೆಯ ಭಕ್ತರು ಭೇಟಿ ನೀಡಿರುತ್ತಾರೆ. ದೇವರ ದರ್ಶನ ಪಡೆದು ತಿಮ್ಮಪ್ಪನ ಹುಂಡಿಯಲ್ಲಿ ಕಾಣಿಕೆಗಳನ್ನು ಹಾಕುತ್ತಾರೆ. ಕೆಲ ಭಕ್ತರು ತಲೆ ಕೂದಲನ್ನು ಅರ್ಪಿಸಿದರೇ ಮತ್ತೆ ಕೆಲ ಭಕ್ತರು ನಗದು, ಚಿನ್ನ ಸೇರಿದಂತೆ ಅನೇಕ ವಸ್ತುಗಳನ್ನು ಕಾಣಿಕೆಯಾಗಿ ಅರ್ಪಿಸುತ್ತಾರೆ. ಹುಂಡಿಯಲ್ಲಿ ಬಿದ್ದಂತಹ ಕಾಣಿಕೆಗಳ ಹರಾಜು ಪ್ರಕ್ರಿಯೆನ್ನು ಟಿಟಿಡಿ ಮಾಡುತ್ತಿರುತ್ತಾರೆ. ನೀವು ಈ ವಸ್ತುಗಳನ್ನು ಖರೀದಿಸಬೇಕಾದರೇ ಇ ಹರಾಜಿನಲ್ಲಿ ಭಾಗಿಯಾಗಬೇಕಿದೆ. ಯಾವ ರೀತಿ ಎಂಬುದನ್ನು ತಿಳಿಯಲು ಮುಂದೆ ಓದಿ…!
ಕಲಿಯುಗದ ಆರಾಧ್ಯ ದೈವ ತಿರುಮಲದಲ್ಲಿ ನೆಲೆಸಿರುವ ವೆಂಕಟೇಶ್ವರ ಸ್ವಾಮಿಗೆ ದೇಶ ವಿದೇಶದಲ್ಲೂ ಅಪಾರ ಸಂಖ್ಯೆಯ ಭಕ್ತ ಸಮೂಹವೇ ಇದೆ. ಅತ್ಯಂತ ಶ್ರೀಮಂತ ದೇಗುಲ ಎಂದು ಸಹ ಹೇಳಲಾಗುತ್ತದೆ. ಪ್ರತಿನಿತ್ಯ ಸಾವಿರಾರು ಸಂಖ್ಯೆಯ ಭಕ್ತರು ತಿಮ್ಮಪ್ಪನ ದರ್ಶನ ಪಡೆಯಲು ಬರುತ್ತಿರುತ್ತಾರೆ. ದೇವರ ದರ್ಶನ ಪಡೆದು ಶ್ರೀವಾರಿ ಹುಂಡಿಯಲ್ಲಿ ನಗದು ಸೇರಿದಂತೆ ಬೆಲೆಬಾಳುವಂತಹ ವಸ್ತುಗಳನ್ನು ಕಾಣಿಕೆಯಾಗಿ ಸಲ್ಲಿಸುತ್ತಿರುತ್ತಾರೆ. ಅಂತಹ ಉಡುಗೊರೆಗಳಲ್ಲಿ ಬೆಲೆಬಾಳುವಂತಹ ಕೈಗಡಿಯಾರಗಳು, ಮೊಬೈಲ್ ಗಳು ಸೇರಿದಂತೆ ಹಲವು ವಸ್ತುಗಳನ್ನು ಹಾಕಿರುತ್ತಾರೆ. ಅಂತಹ ಬೆಲೆ ಬಾಳುವ ವಸ್ತುಗಳನ್ನು ಟಿಟಿಡಿ ಹರಾಜು ಮಾಡುವುದಾಗಿ ತಿಳಿಸಿದೆ. ಭಕ್ತರು ಈ ವಸ್ತುಗಳನ್ನು ಖರೀದಿ ಮಾಡಲು ಜೂ.24 ರಂದು ಟಿಟಿಡಿ ಮಾಡುವ ಇ ಹರಾಜಿನಲ್ಲಿ ಭಾಗಿಯಾಗಬಹುದಾಗಿದೆ.
AUCTION OF WATCHES, MOBILE PHONES ON JUNE 24 _ జూన్ 24న వాచీలు, మొబైల్ ఫోన్లు ఈ-వేలం
ಟಿಟಿಡಿ ಘೋಷಣೆ ಮಾಡಿರುವ ಇ ಹರಾಜಿನ ಮೂಲಕ ತಿಮ್ಮಪ್ಪನ ಹುಂಡಿಯಲ್ಲಿ ಬಿದ್ದಂತಹ ಬೆಲೆಬಾಳುವ ಕಾಣಿಕೆಗಳನ್ನು ಭಕ್ತರು ಖರೀದಿ ಮಾಡಬಹುದಾಗಿದೆ. ಈ ಹರಾಜಿನಲ್ಲಿ ಟೈಟಾನ್, ಕ್ಯಾಸಿಯೋ, ಟೈಮೆಕ್ಸ್, ಆಲ್ವಿನ್, ಟೈಮ್ ವೆಲ್, ಫಾಸ್ಟ್ ಟ್ರಾಕ್, ಆಲ್ವಿನ್ ಮೊದಲಾದ ದುಬಾರಿ ಬೆಲೆಯ ಕೈ ಗಡಿಯಾರಗಳು, ಸ್ಯಾಮ್ ಸಂಗ್, ನೋಕಿಯಾ, ಮೊಟೋರೋಲಾ, ಒಪ್ಪೊ, ಕಾರ್ಬನ್ ಕಂಪನಿಗಳ ಮೊಬೈಲ್ ಪೋನ್ ಗಳಿವೆ ಎಂದು ಟಿಟಿಡಿ ಬಹಿರಂಗಗೊಳಿಸಿದೆ. ಇನ್ನೂ ಈ ವಸ್ತುಗಳನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ. ಹಾಳಾದ ಪೋನ್, ವಾಚ್, ಬಳಸಿದ ವಸ್ತುಗಳು ಹಾಗೂ ಹೊಸ ವಸ್ತುಗಳು ಎಂದು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ.
ಈ ಹರಾಜಿನಲ್ಲಿ ಭಾಗಿಯಾಗಲು ಬಯಸುವವರು www.tirumala.org ಮತ್ತು www.konugolu.ap.gov.in ವೆಬ್‌ಸೈಟ್‌ಗಳಿಗೆ ಭೇಟಿ ನೀಡುವಂತೆ ಸೂಚಿಸಲಾಗಿದೆ. ಇದಲ್ಲದೆ, ಈ ಹರಾಜಿನ ಕುರಿತು ಹೆಚ್ಚಿನ ವಿವರಗಳಿಗಾಗಿ ನೀವು 0877-2264429 ಗೆ ಕರೆ ಮಾಡಬಹುದು ಎಂದು ಟಿಟಿಡಿ ತಿಳಿಸಿದೆ.