ರೈಲು ಪ್ರಯಾಣ ಅಂದ್ರೆ ಸಾಕು, ಕಿಟಕಿ ಸೀಟು, ಹೊರಗಿನ ಪ್ರಕೃತಿ ಸೌಂದರ್ಯ ನೆನಪಾಗುತ್ತೆ. ಆದರೆ ಇತ್ತೀಚೆಗೆ ರೈಲು ಪ್ರಯಾಣ ಅಂದ್ರೆ ಕೇವಲ ಜಗಳ, ಸೀಟಿಗಾಗಿ ಕಿತ್ತಾಟ ಎನ್ನುವಂತಾಗಿದೆ. ಇದೀಗ ರಿಸರ್ವ್ ಆದ ಸೀಟಿನಲ್ಲಿ ಕುಳಿತಿದ್ದ ಮಹಿಳೆಯೊಬ್ಬರು, ಸೀಟ್ ಕೇಳಿದ ವ್ಯಕ್ತಿಗೆ ಆವಾಜ್ ಹಾಕಿರೋ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ (Viral Video) ಆಗ್ತಿದೆ.

Viral Video – ಘಟನೆ ನಡೆದಿದ್ದು ಏನು?
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ವಿಡಿಯೋದಲ್ಲಿ, ಮಹಿಳೆಯೊಬ್ಬರು ರಿಸರ್ವ್ ಆದ ಸೀಟಿನಲ್ಲಿ ಕುಳಿತಿದ್ದಾರೆ. ಆ ಸೀಟು ಬುಕ್ ಮಾಡಿದ ಪ್ರಯಾಣಿಕ ಬಂದು “ಇದು ನನ್ನ ಸೀಟು, ದಯವಿಟ್ಟು ಎದ್ದೇಳಿ” ಎಂದು ಕೇಳಿದ್ದಾರೆ. ಅಷ್ಟಕ್ಕೇ ಕೋಪಗೊಂಡ ಆ ಮಹಿಳೆ, ಸೀಟ್ ಬಿಟ್ಟುಕೊಡೋದು ಹಾಗಿರಲಿ, ಆ ವ್ಯಕ್ತಿಯ ಮೇಲೆ ಕೆಟ್ಟದಾಗಿ ರೇಗಾಡಿದ್ದಾರೆ.
Viral Video – “ಈ ಸೀಟು ನಿಮ್ಮಪ್ಪಂದಾ?”
ಸುಮಾರು 1 ನಿಮಿಷ 17 ಸೆಕೆಂಡ್ ಇರುವ ಈ ವಿಡಿಯೋದಲ್ಲಿ ಮಹಿಳೆಯ ವರ್ತನೆ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ. ಸೀಟ್ ಬಿಡಿ ಎಂದಿದ್ದಕ್ಕೆ ಆಕೆ, “ನೀನ್ಯಾರು ನನ್ನನ್ನು ಕೇಳೋಕೆ? ಈ ಸೀಟು ಏನು ನಿಮ್ಮಪ್ಪಂದಾ? (Seat tumhare baap ka hain kya?)” ಎಂದು ಏರು ಧ್ವನಿಯಲ್ಲಿ ಕಿರುಚಾಡಿದ್ದಾರೆ. ಅಷ್ಟೇ ಅಲ್ಲ, ಆ ವ್ಯಕ್ತಿ “ನಿಮ್ಮ ಟಿಕೆಟ್ ತೋರಿಸಿ” ಎಂದು ಕೇಳಿದ್ದಕ್ಕೆ, ವಿಷಯ ಬದಲಿಸಿದ ಆಕೆ, “ನೀನೇನು ಟಿಟಿಇನಾ (TTE)? ನಿನಗೆ ಯಾಕೆ ಟಿಕೆಟ್ ತೋರಿಸಬೇಕು?” ಎಂದು ದಬಾಯಿಸಿದ್ದಾರೆ. Read this also : ದೆಹಲಿ ಮೆಟ್ರೋದಲ್ಲಿ ಸೀಟ್ ಜಗಳ: ಜುಟ್ಟು ಹಿಡಿದುಕೊಂಡು ಕಿತ್ತಾಡಿದ ಮಹಿಳೆಯರು, ವೈರಲ್ ಆದ ವಿಡಿಯೋ….!
Viral Video – ಬೆದರಿಕೆ ಹಾಕಿದ ಮಹಿಳೆ
ಮಾತು ಮುಂದುವರಿಸಿದ ಮಹಿಳೆ, “ನನ್ನ ಹತ್ರ ಟಿಕೆಟ್ ಕೇಳೋಕೆ ನಿನಗೆ ಎಷ್ಟು ಧೈರ್ಯ? ಇರು ಈಗಲೇ ಹುಡುಗರನ್ನ ಕರೆಸ್ತೀನಿ. ಪಟ್ನಾ (Patna) ಸ್ಟೇಷನ್ ಬರಲಿ, ನಿನ್ನನ್ನು ಪೀಸ್ ಪೀಸ್ (Piece) ಮಾಡ್ತೀನಿ ನೋಡು” ಎಂದು ಪ್ರಾಣ ಬೆದರಿಕೆ ಹಾಕಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (RPF), ಟ್ವಿಟರ್ನಲ್ಲಿ (X) ಪ್ರತಿಕ್ರಿಯೆ ನೀಡಿದೆ. “ಸರ್, ನಿಮ್ಮ ದೂರು ದಾಖಲಾಗಿದೆ. ದಯವಿಟ್ಟು ನಿಮ್ಮ ಪ್ರಯಾಣದ ವಿವರಗಳು ಮತ್ತು ಮೊಬೈಲ್ ಸಂಖ್ಯೆಯನ್ನು ಹಂಚಿಕೊಳ್ಳಿ, ನಾವು ಕ್ರಮ ಕೈಗೊಳ್ಳುತ್ತೇವೆ” ಎಂದು ತಿಳಿಸಿದೆ.

Viral Video – ನೆಟ್ಟಿಗರ ಆಕ್ರೋಶ
ಈ ವಿಡಿಯೋ ಇಂಟರ್ನೆಟ್ನಲ್ಲಿ ಹಲ್ಚಲ್ ಎಬ್ಬಿಸಿದೆ. ಮಹಿಳೆಯ ವರ್ತನೆಗೆ ನೆಟ್ಟಿಗರು ಫುಲ್ ಗರಂ ಆಗಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here
- “ಇಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲೇಬೇಕು.”
- “ರಿಸರ್ವ್ ಸೀಟ್ ಇದ್ದವರಿಗೆ ರೈಲಿನಲ್ಲಿ ಸುರಕ್ಷತೆ ಇಲ್ಲದಂತಾಗಿದೆ.”
- “ಮಹಿಳೆ ಎಂಬ ಕಾರಣಕ್ಕೆ ಇಷ್ಟೊಂದು ದರ್ಪ ತೋರುವುದು ಸರಿಯಲ್ಲ, ರೈಲ್ವೆ ಪೊಲೀಸರು ಕೂಡಲೇ ಇವಳನ್ನು ಅರೆಸ್ಟ್ ಮಾಡಬೇಕು,” ಎಂದು ಕಮೆಂಟ್ ಬಾಕ್ಸ್ನಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
