Tirumala Updates – ದೇಶದ ಪ್ರಸಿದ್ದ ದೇವಾಲಯಗಳಲ್ಲಿ ಒಂದಾದ ತಿರುಮಲ ತಿರುಪತಿ ದೇವಾಲಯವನ್ನು ವಿಶ್ವದ ಶ್ರೀಮಂತ ದೇವಾಲಯ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ತಿರುಮಲದಲ್ಲಿ ನೆಲೆಸಿರುವ ಕಲಿಯುಗ ದೈವ ತಿಮ್ಮಪ್ಪನ ದರ್ಶನಕ್ಕೆ ದಿನಂಪ್ರತಿ ಸಾವಿರಾರು ಸಂಖ್ಯೆಯ ಭಕ್ತಾದಿಗಳು ಭೇಟಿ ನೀಡುತ್ತಿರುತ್ತಾರೆ. (Tirumala Updates) ತಿರುಮಲದಲ್ಲಿ ತಿಮ್ಮಪ್ಪ ಎಷ್ಟು ಪ್ರಖ್ಯಾತಿ ಪಡೆದುಕೊಂಡಿದ್ದಾರೆಯೋ ಅಷ್ಟೆ ಪ್ರಾಮುಖ್ಯತೆಯನ್ನು ಅಲ್ಲಿನ ಲಡ್ಡು ಪ್ರಸಾದ ಸಹ ಹೊಂದಿದೆ ಎಂದು ಹೇಳಬಹುದು. ಈ ತಿರುಪತಿ ಲಡ್ಡು ಪ್ರಸಾದ ಆರಂಭಿಸಿ 309 ವರ್ಷಗಳಾಗಿದೆ.
ದೇಶದ ಪ್ರಸಿದ್ದ ದೇವಾಲಯಗಳಲ್ಲಿ ಒಂದಾದ (Tirumala Updates) ತಿರುಮಲ ತಿರುಪತಿ ದೇವಾಲಯಕ್ಕೆ ಪ್ರತಿನಿತ್ಯ ಸಾವಿರಾರು ಸಂಖ್ಯೆಯ ಭಕ್ತರು ಭೇಟಿ ನೀಡುತ್ತಿರುತ್ತಾರೆ. ತಿರುಪತಿ ಎಷ್ಟು ಪ್ರಸಿದ್ದಿ ಪಡೆದಿದೆಯೋ ಅಲ್ಲಿನ ಪ್ರಸಾದ ಲಡ್ಡು ಸಹ ಅಷ್ಟೇ ಪ್ರಸಿದ್ದಿ ಪಡೆದಿದೆ. ಕೇವಲ ಭಾರತದಲ್ಲಿ ಮಾತ್ರವಲ್ಲದೇ ವಿದೇಶಗಳಿಂದಲೂ ಸಹ ಭಕ್ತರು ತಿಮ್ಮಪ್ಪನನ್ನು ನೋಡಲು ಬರುತ್ತಾರೆ. ಇನ್ನೂ ತಿರುಮಲದಲ್ಲಿ ಲಡ್ಡು ಪ್ರಸಾದ ತುಂಬಾನೆ ಫೇಮಸ್. (Tirumala Updates) ತಿರುಪತಿ ಲಡ್ಡು ಎಂದ ಕೂಡಲೇ ಭಕ್ತಿಯ ಜೊತೆಗೆ ಬಾಯಲ್ಲಿ ಸಹ ನೀರು ಬರುತ್ತಿದೆ. ಎಲ್ಲರೂ ಇಷ್ಟಪಡುವಂತಹ ಈ ಪ್ರಸಾದ ಆರಂಭಗೊಂಡು 309 ವರ್ಷ ಆಗಿದೆ.
ತಿರುಮಲದಲ್ಲಿ (Tirumala Updates) ಮೊಲದ ಬಾರಿಗೆ 1715 ಆಗಸ್ಟ್ 2 ರಂದು ತಿರುಪತಿ ಲಡ್ಡು ಪ್ರಾರಂಭಿಸಲಾಯಿತು. ಕೆಲವೊಂದು ವರದಿಗಳು ಹಾಗೂ ನಂಬಿಕೆಯ ಪ್ರಕಾರ ತಿರುಮಲ ದೇವಸ್ಥಾನಕ್ಕೆ ತಿರುಮಲದ ಲಡ್ಡು ಸ್ವೀಕರಿಸದೇ ಹೋದರೇ ಈ ಯಾತ್ರೆ ಪೂರ್ಣಗೊಳ್ಳುವುದಿಲ್ಲ ಎಂದೇ ಹೇಳಲಾಗುತ್ತದೆ ಆದ್ದರಿಂದ ಈ ದೇವಾಲಯಕ್ಕೆ ಭೇಟಿ ನೀಡುವ ಪ್ರತಿಯೊಬ್ಬರು ಲಡ್ಡು ಪ್ರಸಾದವನ್ನು ಸ್ವೀಕರಿಸಿಯೇ ಬರುತ್ತಾರೆ. ಇನ್ನೂ (Tirumala Updates) ಅಪಾರ ಬೇಡಿಕೆಯಿರುವ ಈ ಲಡ್ಡು ಪ್ರಸಾದ ತಯಾರಿಸಲು ಪ್ರತಿನಿತ್ಯ 270 ಬಾಣಸಿಗರು ಹಾಗೂ 620 ಮಂದಿ ಲಡ್ಡು ತಯಾರಿಕಾ ಘಟಕದಲ್ಲಿ ಕೆಲಸ ಮಾಡುತ್ತಾರೆ ಎಂದು ಹೇಳಲಾಗಿದೆ.