ವಿಶ್ವದ ಪ್ರಖ್ಯಾತ ದೇವಾಲಯಗಳಲ್ಲಿ ತಿರುಮಲ ತಿರುಪತಿ ದೇವಾಸ್ಥಾನವೂ ಸಹ ಒಂದಾಗಿದೆ. (Tirumala Update) ಪ್ರತಿನಿತ್ಯ ತಿಮ್ಮಪ್ಪನನ್ನು ದರ್ಶನ ಮಾಡಲು ಲಕ್ಷಾಂತರ ಭಕ್ತರು ತಿರುಮಲಕ್ಕೆ ಭೇಟಿ ನೀಡುತ್ತಾರೆ. ಇನ್ನೂ ದೇವರ ದರ್ಶನ ಪಡೆಯಲು ಮುಂಗಡವಾಗಿಯೇ ಟಿಕೆಟ್ ಗಳನ್ನು ಸಹ ಬುಕ್ ಮಾಡಿಕೊಳ್ಳುತ್ತಾರೆ. ಟಿಕೆಟ್ ಸಿಗದವರು ನೇರವಾಗಿ ತಿರುಮಲಕ್ಕೆ ಹೋಗಿ ದೇವರ ದರ್ಶನ ಪಡೆಯಲು ಹರಸಾಹಸ ಪಡುತ್ತಿರುತ್ತಾರೆ. ಇದೀಗ ಟಿಟಿಡಿ ಭಕ್ತರಿಗೆ ಗುಡ್ ನ್ಯೂಸ್ ಒಂದನ್ನು ನೀಡಿದೆ. ತಿರುಮಲ ಶ್ರೀಗಳ ದರ್ಶನ ಪಡೆಯಲು ಕಾಲ್ನಡಿಗೆ ಮಾರ್ಗದಲ್ಲಿ ಹೋದರೇ(Tirumala Update) ಶೀಘ್ರ ದಿವ್ಯ ದರ್ಶನ ಟಿಕೆಟ್ ನೀಡಲು ಟಿಟಿಡಿ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.
ತಿರುಮಲಕ್ಕೆ ಪ್ರತಿನಿತ್ಯ ಲಕ್ಷಾಂತರ ಮಂದಿ ಭೇಟಿ ನೀಡುತ್ತಿರುತ್ತಾರೆ. ಇದೀಗ ತಿಮ್ಮಪ್ಪನ ಭಕ್ತರಿಗೆ ಟಿಟಿಡಿ ಶುಭ ಸುದ್ದಿಯೊಂದನ್ನು ನೀಡಿದೆ. ಪಾದಯಾತ್ರೆಯ ಮೂಲಕ ಆಗಮಿಸುವ ಭಕ್ತರಿಗೆ ಶೀಘ್ರ ದಿವ್ಯ ದರ್ಶನ ಟಿಕೆಟ್ ಹಂಚಿಕೆ ಮಾಡಲು ಟಿಟಿಡಿ ಚಿಂತೆ ನಡೆಸಿದೆ. ಈಗಾಗಲೇ ಶ್ರೀವಾರಿ ಮೆಟ್ಟಿಲು ಮಾರ್ಗದಲ್ಲಿ ಟಿಟಿಡಿ 3 ಸಾವಿರ ದಿವ್ಯ ದರ್ಶನ ಟಿಕೆಟ್ ಹಂಚಿಕೆ ಮಾಡುತ್ತಿರುವುದು ಗೊತ್ತೇ ಇದೆ. ಇದೀಗ ಮೆಟ್ಟಿಲು ಹಾಗೂ ಪಾದಯಾತ್ರೆ ಮೂಲಕ ದೇವಸ್ಥಾನಕ್ಕೆ ಬರುವ ಭಕ್ತರ ಅನುಕೂಲಕ್ಕಾಗಿ ಹೊಸ ಯೋಜನೆ ತರಲು ಚಿಂತನೆ ನಡೆಸಿದೆ ಎನ್ನಲಾಗಿದೆ. ಮೆಟ್ಟಿಲು ಮಾರ್ಗ ಹಾಗೂ ಪಾದಯಾತ್ರೆ ಮೂಲಕ ದೇವಾಸ್ಥಾನಕ್ಕೆ ಬರುವಂತ ಸಾಮಾನ್ಯ ಭಕ್ತರಿಗೆ ಹೆಚ್ಚು ಆದ್ಯೆತೆ ನೀಡಲು ಟಿಟಿಡಿ ಉಚಿತ ದರ್ಶನ ಟಿಕೆಟ್ ನೀಡಲು ಯೋಚನೆ ಮಾಡುತ್ತಿದೆ. ಆದರೆ ಈ ವಿಚಾರವನ್ನು ಟಿಟಿಡಿ ಇನ್ನೂ ಅಧಿಕೃತವಾಗಿ ಘೋಷಣೆ ಮಾಡಬೇಕಿದೆ. ಒಂದು ವೇಳೆ ಈ ಯೋಜನೆ ಘೋಷಣೆಯಾದರೇ ಸಾವಿರಾರು ಭಕ್ತರಿಗೆ ಅನುಕೂಲವಾಗಲಿದೆ ಎಂದು ಹೇಳಲಾಗುತ್ತಿದೆ.
ಇನ್ನೂ ಮಳೆ ಹಾಗೂ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಈ ವಾರದಲ್ಲಿ ತಿರುಮಲಕ್ಕೆ ಆಗಮಿಸಿದ ಭಕ್ತರ ಸಂಖ್ಯೆ ಕಡಿಮೆಯಾಗಿದೆ ಎಂದು ಹೇಳಲಾಗಿದೆ. ಇದರಿಂದಾಗಿ ಕಡಿಮೆ ಸಮಯದಲ್ಲೇ ತಿಮ್ಮಪ್ಪನ ದರ್ಶನ ಲಭ್ಯವಾಗುತ್ತಿದೆ. ಸೆ.3 ಹಾಗೂ 4 ರಂದು ತಿಮ್ಮಪ್ಪನ ದರ್ಶನ ಪಡೆದವರು ಸಂಖ್ಯೆ 60 ಸಾವಿರಕ್ಕಿಂತ ಕಡಿಮೆ ಎಂದು ಹೇಳಲಾಗಿದೆ. ಮೂಲಗಳ ಪ್ರಕಾರ ಸೆ. 3ರಂದು 57,817 ಮಂದಿ, ಸೆ. 4ರಂದು 57,390 ಮಂದಿ, ಸೆ. 5ರಂದು 61,142 ಮಂದಿ, ಸೆ. 6ರಂದು 58,000 ಮಂದಿ ತಿರುಮಲಕ್ಕೆ ಭೇಟಿ ನೀಡಿದ್ದರು ಎಂದು ಹೇಳಲಾಗಿದೆ. ಇನ್ನೂ ತಿರುಮಕ್ಕೆ ಆಗಮಿಸುವ ಭಕ್ತರಿಗೆ ಟಿಟಿಡಿ ಮೂಲಭೂತ ಸೌಕರ್ಯಗಳನ್ನು ನಿರಂತರವಾಗಿ ಒದಗಿಸುತ್ತಿದೆ. ದರ್ಶನ, ವಸತಿ, ಲಡ್ಡು ಪ್ರಸಾದ ವಿಚಾರದಲ್ಲಿ ವಂಚನೆಯಾಗದಂತೆ ಎಚ್ಚರಿಕೆ ವಹಿಸಲಾಗುತ್ತಿದೆ.