ಕಳ್ಳರು ವಿವಿಧ ಶೈಲಿಗಳಲ್ಲಿ ಕಳ್ಳತನ ಮಾಡಿ ಯಾರಿಗೂ ಸಿಗದಂತೆ ಎಸ್ಕೇಪ್ ಆಗುತ್ತಿರುತ್ತಾರೆ. ಆದರೆ ಇಲ್ಲೊಬ್ಬ ಕಳ್ಳ ಮನೆಯೊಂದರಲ್ಲಿ ಕಳ್ಳತನ ಮಾಡಲು ಹೋಗಿ ಮನೆಯಲ್ಲಿದ್ದ ಎಸಿ ಗಾಳಿಗೆ ಗಾಢವಾದ ನಿದ್ರೆಗೆ ಜಾರಿದ್ದಾನೆ. ಅಂದಹಾಗೆ ಈ ಘಟನೆ ನಡೆದಿರೋದು ಲಕ್ನೋದಲ್ಲಿ. ಉತ್ತರಪ್ರದೇಶದ ಲಕ್ನೋದಲ್ಲಿ ಕಳ್ಳತನ ಮಾಡೋಕೆ ಹೋಗಿದ್ದ ಕಳ್ಳ ಎಸಿ ಗಾಳಿಗೆ ನಿದ್ದೆ ಹೋಗಿದ್ದಾನೆ. ಬಳಿಕ ಆತನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.
ಉತ್ತರ ಪ್ರದೇಶದ ಲಕ್ನೋದಲ್ಲಿ ಕಳೆದ ಜೂ.2 ರಂದು ಈ ಘಟನೆ ನಡೆದಿದೆ. ಲಕ್ನೋದ ಇಂದಿರಾನಗರದ ಪ್ರದೇಶದಲ್ಲಿದ್ದ ಖಾಲಿ ಮನೆಯೊಂದಕ್ಕೆ ಕಳ್ಳ ನುಗ್ಗಿ ಮನೆಯಲ್ಲಿ ಎಸಿ ಗಾಳಿ ಗಾಢ ನಿದ್ರೆಗೆ ಜಾರಿದ್ದಾನೆ. ಈ ಮನೆ ಡಾ.ಸುನೀಲ್ ಪಾಂಡೆ ಎಂಬ ವ್ಯಕ್ತಿಗೆ ಸೇರಿದ್ದಾಗಿ. ಮನೆಯಲ್ಲಿ ಯಾರೂ ಇಲ್ಲದ ಸಮಯಕ್ಕಾಗಿ ಕಾದಿದ್ದ ಕಳ್ಳ ಮನೆಯ ಗೇಟ್ ತೆರೆದು ಮನೆಯೊಳಗೆ ಕಳ್ಳತನ ಮಾಡಲು ನುಗ್ಗಿದ್ದಾನೆ. ಈ ಕಳ್ಳ ಮದ್ಯ ಸೇವಿಸಿದ್ದಾನೆ ಎನ್ನಲಾಗಿದೆ. ಮದ್ಯದ ಅಮಲಿನಲ್ಲಿಯೇ ಮನೆಯ ಒಳಗೆ ನುಗ್ಗಿದ್ದಾನೆ. ಮನೆಯಲ್ಲಿ ಎ.ಸಿ ಇರುವುದನ್ನು ಕಂಡಿದ್ದಾನೆ. ಕೆಲ ಸಮಯ ವಿಶ್ರಾಂತಿ ಮಾಡಲು ಸೋಫಾದ ಬಳಿ ಕುಳಿತಿದ್ದಾನೆ. ಎ.ಸಿ ಗಾಳಿಗೆ ಹಾಗೆಯೇ ನಿದ್ದೆಗೆ ಜಾರಿದ್ದಾನೆ.
ಇನ್ನೂ ಮನೆಯ ಅಕ್ಕಪಕ್ಕದವರು ಮನೆಯ ಗೇಟ್ ತೆರೆದಿರುವ ಬಗ್ಗೆ ಮನೆಯ ಮಾಲೀಕರಿಗೆ ತಿಳಿಸಿದ್ದಾರೆ. ಕೂಡಲೇ ಡಾ.ಪಾಂಡೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಬಂದು ನೋಡಿದಾಗ ಎ.ಸಿ. ಆನ್ ಮಾಡಿಕೊಂಡು ಆರಾಮಾಗಿ ಮಲಗಿದ್ದ ವ್ಯಕ್ತಿಯನ್ನು ನೋಡಿದ್ದಾರೆ. ಬಳಿಕ ಆತನನ್ನು ಎಬ್ಬಿಸಿ ಕೇಳಿದಾಗ ಆತನ ಕಳ್ಳತನ ಮಾಡಲು ಮನೆಯೊಳಗೆ ಬಂದಿದ್ದಾಗಿ ಹೇಳಿದ್ದಾನೆ. ಬಳಿಕ ಪೊಲೀಸರು ಆತನನ್ನು ಬಂಧನ ಮಾಡಿದ್ದು, ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.