Telangana Tragedy – ತೆಲಂಗಾಣದ ಮಂಚಿರಿಯಾಲ್ ಜಿಲ್ಲೆಯಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ಗಂಡು ಮಗುವಿಲ್ಲ ಎಂಬ ಕಾರಣಕ್ಕೆ ಮನನೊಂದ ತಾಯಿಯೊಬ್ಬಳು ತನ್ನ 11 ತಿಂಗಳ ಕಂದಮ್ಮನೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನಾಲ್ಕು ವರ್ಷಗಳ ಹಿಂದೆ ಮದುವೆಯಾದ, ಸುಂದರವಾದ ಇಬ್ಬರು ಹೆಣ್ಣುಮಕ್ಕಳು, ಮತ್ತು ಸರ್ಕಾರಿ ನೌಕರನಾದ ಪತಿಯಿದ್ದರೂ ಆ ತಾಯಿ ಈ ಕಠಿಣ ನಿರ್ಧಾರ ಏಕೆ ತೆಗೆದುಕೊಂಡಳು? ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆ ಇದು.

Telangana Tragedy – ಪುತ್ರ ಸಂತಾನವಿಲ್ಲ ಎಂದು ಕುಗ್ಗಿದ ಸ್ಪಂದನಾ
ಮಂಚಿರಿಯಾಲ್ ಜಿಲ್ಲೆಯ ಜನ್ನಾರಂ ಮಂಡಲದ ರೇಂಡ್ಲಗೂಡ ಗ್ರಾಮದ ನಿವಾಸಿ ಶಟ್ಪಲ್ಲಿ ಶ್ರವಣ್ ಕುಮಾರ್ ಅವರು ಜಗಿತ್ಯಾಲ ಜಿಲ್ಲೆಯ ಸಾರಂಗಪುರ ಮಂಡಲದ ಸ್ಪಂದನಾ (24) ಅವರನ್ನು 2020 ರಲ್ಲಿ ವಿವಾಹವಾಗಿದ್ದರು. ಅವರಿಗೆ ಮೋಕ್ಷಶ್ರೀ (3 ವರ್ಷ) ಮತ್ತು ವೇದಶ್ರೀ (11 ತಿಂಗಳು) ಎಂಬ ಇಬ್ಬರು ಮುದ್ದಾದ ಹೆಣ್ಣುಮಕ್ಕಳಿದ್ದರು.
ಸ್ಪಂದನಾ ಅವರು ಎರಡನೆಯ ಮಗಳು ವೇದಶ್ರೀ ಹುಟ್ಟಿದಾಗಿನಿಂದಲೂ ತೀವ್ರ ಮಾನಸಿಕ ವೇದನೆಗೆ ಒಳಗಾಗಿದ್ದರು. ಗಂಡು ಮಗುವಿನ ಕೊರತೆಯಿಂದ ಜೀವನದ ಮೇಲೆ ವಿರಕ್ತಿ ಹೊಂದಿದ್ದ ಅವರು, ಈ ಬಗ್ಗೆ ಪತಿಯ ಬಳಿ ಪದೇ ಪದೇ ಹೇಳುತ್ತಾ ‘ಬದುಕು ವ್ಯರ್ಥ’ ಎಂದು ನೊಂದುಕೊಂಡಿದ್ದರು. ಗಂಡು ಮಗನಿಲ್ಲದ ಈ ಜನ್ಮವೇ ವ್ಯರ್ಥ, ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಕುಟುಂಬ ಸದಸ್ಯರ ಮುಂದೆ ತನ್ನ ನೋವನ್ನು ತೋಡಿಕೊಂಡಿದ್ದರು.
Telangana Tragedy – ಪತಿಯ ಮನವೊಲಿಕೆ ವಿಫಲ: ಕಠಿಣ ನಿರ್ಧಾರಕ್ಕೆ ಸ್ಪಂದನಾ
ಪತಿ ಶ್ರವಣ್, ಗುಡಿಪೇಟೆಯಲ್ಲಿ 13ನೇ ಬೆಟಾಲಿಯನ್‌ನಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು ಕರ್ತವ್ಯದ ನಿಮಿತ್ತ ಹೆಚ್ಚು ಬಿಜಿಯಾಗಿದ್ದು, ಆಗಾಗ ಪತ್ನಿಗೆ ಧೈರ್ಯ ಹೇಳುತ್ತಾ ಬಂದಿದ್ದರು. ಆದರೆ, ಸ್ಪಂದನಾ ಅವರ ಮನಸ್ಸಿನ ಆಳದಲ್ಲಿ ಹುದುಗಿದ್ದ ನೋವು ಕಡಿಮೆಯಾಗಲಿಲ್ಲ. ಶುಕ್ರವಾರ ಬೆಳಗ್ಗೆ ಸುಮಾರು 11 ಗಂಟೆಯ ಸುಮಾರಿಗೆ ಸ್ಪಂದನಾ ಅವರು ಚಿಕ್ಕ ಮಗಳು ವೇದಶ್ರೀಗೆ ಊಟ ತಿನ್ನಿಸುವುದಾಗಿ ಹೇಳಿ ಮನೆಯಿಂದ ಹೊರಗೆ ಹೋಗಿದ್ದಾರೆ.
Telangana Tragedy – ಕುಟುಂಬ ಸದಸ್ಯರಿಗೆ ಆಘಾತ: ಘಟನೆ ವಿವರಗಳು
ಕೋಡಲು ಮತ್ತು ಮೊಮ್ಮಗಳು ಎಷ್ಟು ಹೊತ್ತಾದರೂ ಹಿಂತಿರುಗಿ ಬಾರದೇ ಇದ್ದುದನ್ನು ಗಮನಿಸಿದ ಅತ್ತೆ-ಮಾವಂದಿರು ಮನೆಯ ಹಿಂಭಾಗಕ್ಕೆ ಹೋಗಿ ನೋಡಿದ್ದಾರೆ. ಆಗ ಬಾವಿಯಲ್ಲಿ ಸ್ಪಂದನಾ ತೇಲುತ್ತಿರುವುದು ಕಂಡುಬಂದಿದೆ. ಅವರ ರೋದನ ಕೇಳಿ ಅಕ್ಕಪಕ್ಕದವರು ಸ್ಥಳಕ್ಕೆ ಧಾವಿಸಿ ಸ್ಪಂದನಾ ಅವರನ್ನು ಬಾವಿಯಿಂದ ಹೊರತೆಗೆದರು. Read this also : ಕರ್ನೂಲ್ ಬಸ್ ದುರಂತ: ಬೈಕ್ ಕಿಡಿಯೇ 20 ಜನರ ಸಜೀವ ದಹನಕ್ಕೆ ಕಾರಣ! ಹೃದಯ ಕಲಕಿದ ಅಗ್ನಿ ಅವಘಡ …!
Telangana Tragedy – ಬಾವಿಯಲ್ಲಿ ಚಿಕ್ಕ ಮಗಳ ಶವ: ಕುಟುಂಬಸ್ಥರ ಕಣ್ಣೀರು
ಆದರೆ, 11 ತಿಂಗಳ ಪುಟ್ಟ ಕಂದಮ್ಮ ವೇದಶ್ರೀ ಎಲ್ಲಿದ್ದಾಳೆ ಎಂದು ಸುತ್ತಮುತ್ತ ಹುಡುಕಿದಾಗ, ಆ ಕಂದಮ್ಮ ಕೂಡ ಬಾವಿಯಲ್ಲಿ ಶವವಾಗಿ ತೇಲುತ್ತಾ ಸಿಕ್ಕಳು. ಈ ದುರಂತ ನೋಡಿ ಕುಟುಂಬ ಸದಸ್ಯರ ಆಕ್ರಂದನ ಮುಗಿಲುಮುಟ್ಟಿತ್ತು. ಘಟನಾ ಸ್ಥಳಕ್ಕೆ ಆಗಮಿಸಿದ ಜನ್ನಾರಂ ಪೊಲೀಸರು ಇಬ್ಬರ ಮೃತದೇಹಗಳನ್ನು ಲಕ್ಷೆಟ್ಟಿಪೇಟೆ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದರು. ಸುದ್ದಿ ತಿಳಿದು ಧಾವಿಸಿದ ಪತಿ ಶ್ರವಣ್, ಪತ್ನಿ ಮತ್ತು ಮಗಳ ಮೃತದೇಹಗಳನ್ನು ಕಂಡು ಮೂರ್ಛೆ ಹೋಗಿದ್ದಾರೆ.

ಇನ್ನು, ಈ ವಿಷಯವೇ ತಿಳಿಯದ ಮೂರು ವರ್ಷದ ಹಿರಿಯ ಮಗಳು ಮೋಕ್ಷಶ್ರೀ, “ಅಮ್ಮ ಮತ್ತು ತಂಗಿ ಎಲ್ಲಿ?” ಎಂದು ಮನೆಯವರನ್ನು ಕೇಳುತ್ತಿರುವುದು ಅಲ್ಲಿದ್ದವರ ಮನ ಕಲಕಿತು. ಸ್ಪಂದನಾ ತಾಯಿ ಬೂದಾರಪು ಈಶ್ವರಮ್ಮ ಅವರ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ. ಗಂಡು ಮಗನಿಲ್ಲ ಎಂಬ ಕಾರಣಕ್ಕೆ ಮಗುವಿನೊಂದಿಗೆ ತಾಯಿ ಪ್ರಾಣ ಕಳೆದುಕೊಂಡಿರುವುದು ಅತ್ತೆಮನೆಯವರಿಗೆ ಅಪಾರ ದುಃಖ ತಂದಿದೆ.
