ಪ್ರೀತಿಸಿ ಮದುವೆಯಾದ ಗಂಡನೇ ಪಾಲಿಗೆ ಯಮನಾದ ಘಟನೆಯೊಂದು ತೆಲಂಗಾಣದಲ್ಲಿ ನಡೆದಿದೆ. ಕೇವಲ ವರದಕ್ಷಿಣೆಗಾಗಿ (Dowry) ಗಂಡನೇ ತನ್ನ ಹೆಂಡತಿಯನ್ನು ಅಮಾನುಷವಾಗಿ ಥಳಿಸಿ ಕೊಲೆ ಮಾಡಿರುವ ವಿಡಿಯೋ ಈಗ ವೈರಲ್ ಆಗಿದ್ದು, ನೋಡುವವರ ಎದೆಯೊಡೆಯುವಂತಿದೆ. ತೆಲಂಗಾಣದ (Telangana) ವಿಕಾರಾಬಾದ್‌ನಲ್ಲಿ ನಡೆದ ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾದ ನಂತರ ಬೆಳಕಿಗೆ ಬಂದಿದೆ.

Telangana – ಪ್ರೀತಿಸಿ ಮದುವೆಯಾದ ಎಂಟೇ ತಿಂಗಳಿಗೆ ದಾರುಣ ಅಂತ್ಯ
ಹೌದು, ಮೃತ ದುರ್ದೈವಿಯನ್ನು 22 ವರ್ಷದ ಅನುಷಾ ಎಂದು ಗುರುತಿಸಲಾಗಿದೆ. ಈಕೆ ತನ್ನ ಪ್ರಿಯಕರ ಪರಮೇಶ್ ಕುಮಾರ್ (28) ಎಂಬಾತನನ್ನು ಕೇವಲ ಎಂಟು ತಿಂಗಳ ಹಿಂದೆಯಷ್ಟೇ ಪ್ರೀತಿಸಿ ಮದುವೆಯಾಗಿದ್ದಳು. ಆದರೆ, ಮದುವೆಯಾದಾಗಿನಿಂದಲೂ ಈ ದಂಪತಿಗಳ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಇದಕ್ಕೆ ಮುಖ್ಯ ಕಾರಣ ‘ವರದಕ್ಷಿಣೆ’ ಎನ್ನಲಾಗಿದೆ. ಪ್ರೀತಿಗಿಂತ ಹಣವೇ ಹೆಚ್ಚಾಯಿತೇ ಎಂಬ ಪ್ರಶ್ನೆ ಇಲ್ಲಿ ಮೂಡುತ್ತದೆ.
ತವರು ಮನೆಯಿಂದ ಕರೆತಂದು ಕೊಂದೇ ಬಿಟ್ಟ!
ಈ ಘಟನೆ ನಡೆಯುವ (Telangana) ಎರಡು ದಿನಗಳ ಮೊದಲು, ಗಂಡನ ಜೊತೆ ಜಗಳ ಮಾಡಿಕೊಂಡು ಅನುಷಾ ತನ್ನ ತವರು ಮನೆಗೆ (ಪೋಷಕರ ಮನೆಗೆ) ಹೋಗಿದ್ದರು. ಆದರೆ, ಪರಮೇಶ್ ಕುಮಾರ್ ಅಲ್ಲಿಗೆ ಹೋಗಿ, “ಇನ್ನಮೇಲೆ ಜಗಳ ಮಾಡುವುದಿಲ್ಲ, ಚೆನ್ನಾಗಿ ನೋಡಿಕೊಳ್ಳುತ್ತೇನೆ” ಎಂದು ಅನುಷಾಳ ಪೋಷಕರಿಗೆ ಭರವಸೆ ನೀಡಿ ಆಕೆಯನ್ನು ಮನೆಗೆ ಕರೆತಂದಿದ್ದ. ಆದರೆ ಮನೆಗೆ ಬಂದ ತಕ್ಷಣ ಮತ್ತೆ ಇಬ್ಬರ ನಡುವೆ ಜಗಳ ಶುರುವಾಗಿದೆ. ವಿಧಿಯಾಟ ನೋಡಿ, ನಂಬಿ ಬಂದವಳ ಪ್ರಾಣವನ್ನೇ ಆತ ತೆಗೆದಿದ್ದಾನೆ. Read this also : ಮಕ್ಕಳಿಗಾಗಿ ಅಂದು ಕ್ಷಮಿಸಿದ್ದ, ಇಂದು ಹೋಟೆಲ್‌ನಲ್ಲಿ ಸಿಕ್ಕಿಬಿದ್ದ ಪತ್ನಿ : 15 ವರ್ಷದ ಸಂಸಾರ ಧೂಳಿಪಟ…!
ಸಿಸಿಟಿವಿಯಲ್ಲಿ ಸೆರೆಯಾದ ಪತಿಯ ಕ್ರೌರ್ಯ
ಈ ಇಡೀ ಘಟನೆ ಮನೆಯ ಹೊರಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ (CCTV Footage) ಸೆರೆಯಾಗಿದೆ. ವಿಡಿಯೋದಲ್ಲಿ ಕಾಣುವಂತೆ, ದಂಪತಿಗಳು ಬೈಕ್‌ನಲ್ಲಿ ಹಳ್ಳಿಯ ರಸ್ತೆಯಲ್ಲಿ ಬರುತ್ತಾರೆ. ಮನೆಯ ಮುಂದೆ ಬೈಕ್ ನಿಲ್ಲಿಸುತ್ತಿದ್ದಂತೆಯೇ, ಅನುಷಾ ಕೆಳಗಿಳಿದು ಮನೆಯ ಕಡೆಗೆ ಕುಂಟುತ್ತಾ (Limping) ನಡೆಯಲು ಪ್ರಾರಂಭಿಸುತ್ತಾರೆ. ಆಗ ಹಿಂದಿನಿಂದ ಬಂದ ಪಾಪಿ ಪತಿ, ಆಕೆಯ ಜಾಕೆಟ್ ಹಿಡಿದು ಎಳೆದಾಡುತ್ತಾನೆ. ಪಕ್ಕದ ಮನೆಯ ಮಹಿಳೆಯೊಬ್ಬರು ಬೀಗದ ಕೈ ನೀಡಿದಾಗ, ಬಲವಂತವಾಗಿ ಬಾಗಿಲು ತೆಗೆಯುವಂತೆ ಅನುಷಾಳನ್ನು ನೂಕುತ್ತಾನೆ. ಸಿಟ್ಟಿನಿಂದ ಅನುಷಾ ಬೀಗದ ಕೈಯನ್ನು ಎಸೆದಾಗ, (Telangana) ಪರಮೇಶ್ ಕುಮಾರ್ ರಾಕ್ಷಸನಂತೆ ಆಕೆಯ ಮೇಲೆರಗುತ್ತಾನೆ.

ಕಟ್ಟಿಗೆಯಿಂದ ತಲೆಗೆ ಹೊಡೆದು ಹತ್ಯೆ
ವಿಡಿಯೋದಲ್ಲಿರುವ (Telangana) ದೃಶ್ಯ ಅತ್ಯಂತ ಭಯಾನಕವಾಗಿದೆ. ಪರಮೇಶ್ ತನ್ನ ಪತ್ನಿಯ ಕೆನ್ನೆಗೆ ಎರಡು ಬಾರಿ ಬಲವಾಗಿ ಬಾರಿಸುತ್ತಾನೆ, ಹೊಟ್ಟೆಗೆ ಒದೆಯುತ್ತಾನೆ. ಅಲ್ಲಿಗೆ ನಿಲ್ಲದ ಆತ, ಪಕ್ಕದಲ್ಲೇ ಇದ್ದ ದಪ್ಪನೆಯ ಮರದ ತುಂಡನ್ನು (Wooden Log) ತೆಗೆದುಕೊಂಡು ಅನುಷಾಳ ತಲೆಗೆ ಆರು ಬಾರಿ ಬಲವಾಗಿ ಹೊಡೆಯುತ್ತಾನೆ. ಪಕ್ಕದ ಮನೆಯವರು ತಡೆಯಲು ಬಂದರೂ ಆತ ಸುಮ್ಮನಾಗುವುದಿಲ್ಲ.
ಸಂಬಂಧಿಸಿದ ಪೋಸ್ಟ್ ಇಲ್ಲಿದೆ ನೋಡಿ : Click Here
ಆಸ್ಪತ್ರೆಯಲ್ಲಿ ಮೃತಪಟ್ಟ ಅನುಷಾ
ಗಂಭೀರವಾಗಿ ಗಾಯಗೊಂಡಿದ್ದ ಅನುಷಾಳನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ವೈದ್ಯರು ಆಕೆ ಮೃತಪಟ್ಟಿದ್ದಾಗಿ ಘೋಷಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಅನುಷಾ ಅವರ ಸಹೋದರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿ ಪತಿ ಪರಮೇಶ್ ಮತ್ತು ಆತನ ತಾಯಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಸದ್ಯ ವಿಕಾರಾಬಾದ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರೆದಿದೆ.
