Students Protest ಸಹಶಿಕ್ಷಕಿಯೊಂದಿಗೆ ಶಾಲೆಯ ಮುಖ್ಯ ಶಿಕ್ಷಕ ಅಸಭ್ಯವರ್ತನೆ ಮಾಡಿರುವ ಕ್ರಮವನ್ನು ಖಂಡಿಸಿ, ಅಸಭ್ಯವಾಗಿ ವರ್ತನೆ ಮಾಡಿರುವ ಮುಖ್ಯ ಶಿಕ್ಷಕನನ್ನು ತಕ್ಷಣ ಅಮಾನತ್ತು ಮಾಡಿ, ತನಿಖೆ ನಡೆಸಿ ಕಾನೂನು ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಎಸ್.ಎಫ್.ಐ ಕಾರ್ಯಕರ್ತರು (Students Protest) ಸೋಮವಾರ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಪ್ರತಿಭಟನಕಾರರನ್ನು (Students Protest) ಉದ್ದೇಶಿಸಿ ಮಾತನಾಡಿದ ಎಸ್.ಎಫ್.ಐ ಜಿಲ್ಲಾ ಘಟಕದ ಅಧ್ಯಕ್ಷ ಸೋಮಶೇಖರ್ ಜೂ.27ರಂದು ಕನ್ನಡ ಜ್ಯೋತಿ ರಥಯಾತ್ರೆ ಪಟ್ಟಣಕ್ಕೆ ಬಂದಿದ್ದ ಸಂದರ್ಭದಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ರಥಯಾತ್ರೆಯಲ್ಲಿ ಭಾಗವಹಿಸಿದ್ದು ಶಾಲೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಪಟ್ಟಣದ ಪಿ.ಎಂ.ಶ್ರೀ ಶಾಲೆಯ ಮುಖ್ಯ ಶಿಕ್ಷಕ ವಿಕಲಚೇತನ ಸಹಶಿಕ್ಷಕಿಯೊಂದಿಗೆ ಅಸಭ್ಯವಾಗಿ ವರ್ತಿಸಿರುವುದನ್ನು ತೀವ್ರವಾಗಿ (Students Protest) ಖಂಡಿಸಿದರು.
ವಿದ್ಯಾರ್ಥಿಗಳನ್ನು ಸಮಾಜದಲ್ಲಿ ಒಳ್ಳೆಯ ಪ್ರಜೆಗಳನ್ನಾಗಿ ರೂಪಿಸುವಂತಹ ಶಿಕ್ಷಕರು ತನ್ನ ಸಹೋದ್ಯೋಗಿ, ಸಹಶಿಕ್ಷಕಿ ಅದರಲ್ಲಿಯೂ ವಿಕಲಚೇತನರಾಗಿರುವ ಶಿಕ್ಷಕಿಯೊಂದಿಗೆ (Students Protest) ಅಸಭ್ಯವಾಗಿ ವರ್ತಿಸುವ ಮಾಡಿರುವ ಮೂಲಕ ಇಡೀ ನಾಗರೀಕ ಸಮಾಜವೇ ತಲೆತಗ್ಗಿಸುವಂತಾಗಿದೆ ಎಂದ ಅವರು ಇಂತಹ ಪ್ರಕರಣಗಳಿಂದ ಇಡೀ ಶಿಕ್ಷಣ ಕ್ಷೇತ್ರಕ್ಕೆ ಕಪ್ಪು ಚುಕ್ಕೆ ಬಂದಂತಾಗಿದೆ. ಈ ಸಂಬಂಧ ಶಿಕ್ಷಕಿಯ ತಂದೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಲಿಖಿತ ದೂರು ನೀಡಿದ್ದರೂ (Students Protest) ಇದುವರೆವಿಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮುಖ್ಯಶಿಕ್ಷಕನ ವಿರುದ್ದ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರ್ರತಿ ತಾಲೂಕಿನ ಶಾಲಾ ಕಾಲೇಜುಗಳಲ್ಲಿ ಲೈಂಗಿಕ ಕಿರುಕುಳ ವಿರೋಧಿ ಸಮಿತಿ (Students Protest) ರಚನೆ ಮಾಡುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ ಆದರೆ ಈ ತಾಲೂಕಿನ ಯಾವುದೇ ಶಾಲೆ ಕಾಲೇಜುಗಳಲ್ಲಿ ಸಮಿತಿ ರಚನೆ ಮಾಡಿಲ್ಲ ಏಕೆ ಎಂದು ಬಿಇಒ ರವರನ್ನು ಪ್ರಶ್ನಿಸಿದ ಅವರು ಇಂತಹ ಪ್ರಕರಣಗಳು ನಡೆಯದಂತೆ ಕ್ರಮವಹಿಸಬೇಕು ಹಾಗೂ ಸಮಿತಿ ರಚನೆಗೆ ಮುಂದಾಗಬೇಕೆಂದು ಒತ್ತಾಯಿಸಿದರು. (Students Protest) ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಓದುವುದು ಬಹುತೇಕ ಬಡವರ, ದಲಿತರ, ಹಿಂದುಳಿದ ಅಲ್ಪಸಂಖ್ಯಾತರ, ಕೂಲಿ ಕಾರ್ಮಿಕರ ಮಕ್ಕಳು. ಇಂತಹ ಪ್ರಕರಣಗಳಿಂದ ಸರ್ಕಾರಿ ಶಾಲಾ ಕಾಳೇಜುಗಳಲ್ಲಿ ತಮ್ಮ ಮಕ್ಕಳನ್ನು ಸೇರಿಸಲು ಪೋಷಕರು ಹಿಂಜರಿಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ತಾಲೂಕಿನಲ್ಲಿ ಶಾಲಾ ಕಾಲೇಜುಗಳಿಂದ ಹೊರಗೆ ಉಳಿದಿರುವ ಹೆಣ್ಣು ಮಕ್ಕಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಳಳವಾಗುತ್ತಿರುವುದಕ್ಕೆ ಬೇಸರ (Students Protest) ವ್ಯಕ್ತಪಡಿಸಿದರು.
ಪಿ.ಎಂ.ಶ್ರೀ ಶಾಲೆಯ ಸಹಶಿಕ್ಷಕಿಯೊಂದಿಗೆ ಅಸಭ್ಯವಾಗಿ ನಡೆದುಕೊಂಡಿರುವ ಮುಖ್ಯ ಶಿಕ್ಷಕನನ್ನು ತಕ್ಷಣ ಅಮಾನತ್ತು ಪಡಿಸಿ ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಎಸ್.ಎಫ್.ಐ ಸೇರಿದಂತೆ ಪ್ರಗತಿಪರ ಸಂಘಟನೆಗಳ ವತಿಯಿಂದ ಉಗ್ರ ಹೋರಾಟ (Students Protest) ನಡೆಸುವುದಲ್ಲದೆ ಬಾಗೇಪಲ್ಲಿ ತಾಲೂಕು ಬಂದ್‍ಗೆ ಕರೆ ನೀಡುವುದಾಗಿ ಎಚ್ಚರಿಕೆ ನೀಡಿದರು. ನಂತರ ಪ್ರತಿಭಟನಕಾರರು ಬಿಇಒ ವೆಂಕಟೇಶಪ್ಪ ರವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಮನವಿ ಪತ್ರವನ್ನು ಸ್ವೀಕರಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು (Students Protest) ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತ್ರಿಸದಸ್ಯ ಮಹಿಳಾ ಸಮಿತಿ ರಚನೆ ಮಾಡಲಾಗಿದೆ. ಸೋಮವಾರದಿಂದಲ್ಲೇ ಈ ಸಮಿತಿ ತನಿಖೆ ನಡೆಸಿ ವರಧಿ ನೀಡಲಿದೆ. ಅಸಭ್ಯ ವರ್ತನೆ ಹಿನ್ನಲೆಯಲ್ಲಿ ಈ ಸಮಿತಿ ತನಿಖೆಗೂ ಮೊದಲೇ ಮುಖ್ಯಶಿಕ್ಷಕನನ್ನು ಈ ಶಾಲೆಯಿಂದ ವರ್ಗಾವಣೆ ಮಾಡಿ ಆದೇಶಿಸಿದೆ. ನಂತರ ತನಿಖೆ ವರಧಿ ಆಧಾರದ ಮೇಲೆ ಅವರ ವಿರುದ್ದ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು. ಈ (Students Protest) ಸಂದರ್ಭದಲ್ಲಿ ಎಸ್.ಎಫ್.ಐ ತಾಲೂಕು ಸಮಿತಿ ಮುಖಂಡರಾದ ವಿನಯ್ ಕುಮಾರ್, ಅಭಿ, ಸುರೇಶ್, ರಾಮಾಂಜಿ, ಬಾಲಾಜಿ, ಭರತ್, ಮನು ಮತ್ತಿತರರು ಇದ್ದರು.