Friday, August 1, 2025
HomeStateಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿಯ ರುಂಡ ಕತ್ತರಿಸಿದ್ದ ಆರೋಪಿ ಸೂಸೈಡ್, ನೇಣಿಗೆ ಶರಣಾದ ಕೊಲೆಗಾರ…..!

ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿಯ ರುಂಡ ಕತ್ತರಿಸಿದ್ದ ಆರೋಪಿ ಸೂಸೈಡ್, ನೇಣಿಗೆ ಶರಣಾದ ಕೊಲೆಗಾರ…..!

ಕರ್ನಾಟಕ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಕೊಡಗಿನ ಸೋಮವಾರಪೇಟೆಯ 10ನೇ ತರಗತಿ ವಿದ್ಯಾರ್ಥಿನಿ ಹತ್ಯೆ ಪ್ರಕರಣ ಭಾರಿ ಸದ್ದು ಮಾಡಿದೆ. ಮುಟ್ಟು ಗ್ರಾಮದಲ್ಲಿ 15 ವರ್ಷದ ವಿದ್ಯಾರ್ಥಿನಿಯ ರುಂಡ ಕತ್ತರಿಸಿ, ಬರ್ಬರವಾಗಿ ಕೊಲೆ ಮಾಡಿ ಬಳಿಕ ರುಂಡದ ಜೊತೆ ಆರೋಪಿ ಎಸ್ಕೇಪ್ ಆಗಿದ್ದ. ಆರೋಪಿಯನ್ನು 32 ವರ್ಷದ ಓಂಕಾರಪ್ಪ ಅಲಿಯಾಸ್ ಪ್ರಕಾಶ್ ಎಂದು ಗುರ್ತಿಸಲಾಗಿತ್ತು. ಇದೀಗ ಆರೋಪಿ ಓಂಕಾರಪ್ಪ ಸಹ ತಮ್ಮ ಗ್ರಾಮ ಹಮ್ಮಿಯಾಲದಲ್ಲಿ ಆತ್ನಹತ್ಯೆಗೆ ಶರಣಾಗಿದ್ದಾನೆ. ಆತನ ಮನೆಯ ಬಳಿ ನೇಣಿಗೆ ಶರಣಾಗಿದ್ದಾನೆ.

sslc student murderd man committed suicide 1

ಕೊಡುಗು ಜಿಲ್ಲೆಯ ಸೋಮವಾರಪೇಟೆಯ ಮುಟ್ಲು ಎಂಬ ಗ್ರಾಮದಲ್ಲಿ 15 ವರ್ಷದ ಬಾಲಕಿಯೊಬ್ಬಳ ರುಂಡ ಕಡಿದ ಆರೋಪಿ ಪ್ರಕಾಶ್ ಕಳೆದ ರಾತ್ರಿ ಬಾಲಕಿಯ ರುಂಡದೊಂದಿಗೆ ಪರಾರರಿಯಾಗಿದ್ದ. ಮೃತ ದುರ್ದೈವಿ ಬಾಲಕಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ  ಉತ್ತೀರ್ಣಳಾಗಿದ್ದಳು. ಬಾಲಕಿಗೂ ಆರೋಪಿಗೂ ನಿನ್ನೆ ನಿಶ್ಚಿತಾರ್ಥ ನಡೆಯುತ್ತಿದ್ದ ಸಮಯದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಅಧಿಕಾರಿಗಳು ತಡೆದು ಪೋಷಕರ ಮನವೊಲಿಸಿದ್ದರು. ಬಳಿಕ ಸಂಜೆ ಸಮಯದಲ್ಲಿ ಮನೆಗೆ ನುಗ್ಗಿದ ಆರೋಪಿ ಬಾಲಕಿಯ ಮನೆಯವರೊಂದಿಗೆ ಜಗಳ ಮಾಡಿ ಬಾಲಕಿಯ ಪೋಷಕರ ಮೇಲೆ ಹಲ್ಲೆ ಮಾಡಿ ಅವರ ಮುಂದೆಯೇ ಬಾಲಕಿಯನ್ನು ಅಪಹರಣ ಮಾಡಿದ್ದನಂತೆ.  ಅಪಹರಿಸಿದ ಬಾಲಕಿಯನ್ನು ಕಾಂಡಂಚಿನ ಪ್ರದೇಶದಲ್ಲಿ ಎಳೆದುಕೊಂಡು ಹೋಗಿ ಕತ್ತಿನಿಂದ ಹಲ್ಲೆ ನಡೆಸಿ ರುಂಡ ಕತ್ತರಿಸಿದ್ದಾನೆ. ಬಳಿಕ ರುಂಡದೊಂದಿಗೆ ಆರೋಪಿ ಪರಾರಿಯಾಗಿದ್ದಾನೆ. ಬಾಲಕಿಯ ಮುಂಡ ಮಾತ್ರ ಸಿಕ್ಕಿದ್ದು, ಆರೋಪಿಗಾಗಿ ಹಾಗೂ ದೇಹದ ಉಳಿದ ಭಾಗಗಳಿಗಾಗಿ ಇಂದು ಬೆಳಿಗಿನಿಂದಲೂ ಪೊಲೀಸರು ಗ್ರಾಮದ ಬೆಟ್ಟ ಗುಡ್ಡ ಪ್ರದೇಶದಲ್ಲಿ ಹುಡುಕಾಟ ನಡೆಸುತ್ತಿದ್ದರು.

ಇನ್ನೂ ಕಳೆದ ವಾರದ ಹಿಂದೆ ಮೃತ ಬಾಲಕಿ ತನ್ನ ಸಹೋದರಿಯ ಮನೆಗೆ ತೆರಳಿ ತನ್ನ ಪೋಷಕರೊಂದಿಗೆ ದೂರವಾಣಿ ಮೂಲಕ ಮಾತನಾಡಿ ನಾನು ಪ್ರಕಾಶ್ ನನ್ನು ಮದುವೆಯಾಗಲ್ಲ ಎಂದು ಹೇಳಿದ್ದಳಂತೆ. ಆದರೆ ಮನೆಯವರು ಸುಮಾರು ವರ್ಷಗಳಿಂದ ಓಡಾಡಿದ್ದೀರಾ, ಪ್ರೀತಿ ಮಾಡಿದ್ದೀರಾ ಎಂದು ತಾವೇ ಹೇಳಿದ್ದೀರಾ, ಇದೀಗ ಮದುವೆ ಬೇಡ ಅನ್ನೋದು ಸರಿಯಲ್ಲ ಎಂದಿದ್ದರು ಎನ್ನಲಾಗಿದೆ. ಸದ್ಯ ಸರಳವಾಗಿ ನಿಶ್ಚಿತಾರ್ಥ ಮಾಡಿ ಪ್ರಕಾಶ್ ಉದ್ಯೋಗಕ್ಕಾಗಿ ಬೆಂಗಳೂರಿಗೆ ಹೋಗುತ್ತೇನೆ. ಬಳಿಕ ಮದುವೆ ಮಾಡೋಣ ಎಂದು ಪೋಷಕರು ತಿಳಿಸಿದ್ದರಂತೆ. ಈ ಮಾತು ಕೇಳಿ ಬಾಲಕಿ ನಿಶ್ವಿತಾರ್ಥ ಮಾಡಿಕೊಳ್ಳಲು ಒಪ್ಪಿದ್ದಳಂತೆ. ನಿನ್ನೆ 10ನೇ ತರಗತಿ ಪಾಸ್ ಆಘೊದು ಅಲ್ಲದೇ ನಿಶ್ಚಿತಾರ್ಥ ಹಿನ್ನೆಲೆಯಲ್ಲಿ ಮನೆಯಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು. ಸಂಜೆ ವೇಳೆ ಸಂಭ್ರಮದ ಮನೆಯಲ್ಲಿ ಸ್ಮಶಾನ ಮೌನ ಆವರಿಸಿದೆ.

sslc student murderd man committed suicide 2

ಇನ್ನೂ ಬಾಲಕಿಯನ್ನು ಕೊಲೆ ಮಾಡಿದ ಪ್ರಕಾಶ್ ಊರಿನಲ್ಲಿ ಯಾರೋಂದಿಗೆ ಒಳ್ಳೆಯತನದಿಂದ ನಡೆದುಕೊಳ್ಳುತ್ತಿರಲಿಲ್ಲವಂತೆ. ಒರಟನಂತೆ ವರ್ತನೆ ಮಾಡುತ್ತಿದ್ದ ಎನ್ನಲಾಗಿದೆ. ಮೃತ ಬಾಲಕಿ ಶಾಲೆಗೆ ಹೋದರೂ ಆಕೆಯ ಹಿಂದೆಯೇ ಹೋಗುತ್ತಿದ್ದನಂತೆ. ಸಣ್ಣ ಹುಡುಗಿಯ ಜೋತೆ ಈ ರೀತಿ ಹೋಗಬಾರದು ಎಂದರೇ ಆಕೆಗೆ ಎಲ್ಲಾ ನಾನೆ ಎಂದು ಹೇಳುತ್ತಿದ್ದನಂತೆ. ಇದೀಗ ಕೊಲೆ ಮಾಡಿದ ಆರೋಪಿ ಪ್ರಕಾಶ್ ತಮ್ಮ ಮನೆಯ ಬಳಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇನ್ನೂ ಸಹ ಬಾಲಕಿಯ ರುಂಡ ಸಿಗದ ಹಿನ್ನೆಲೆ ಪೊಲೀಸರು ಹಾಗೂ ಶ್ವಾನದಳ ಹುಡುಕಾಟ ನಡೆಸುತ್ತಿದ್ದಾರೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular