“ಇಂದಿನ ಯುವಜನತೆ ಮೊಬೈಲ್ ಮತ್ತು ಇಂಟರ್ನೆಟ್ ಜಾಲದಲ್ಲಿ ಸಿಲುಕಿ ಕ್ರೀಡೆಗಳಿಂದ (Sports) ದೂರ ಸರಿಯುತ್ತಿದ್ದಾರೆ. ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕಾಗಿ ಯುವಕರು ಮೈದಾನಕ್ಕಿಳಿಯಲೇಬೇಕು,” ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಯುವ ಸಮುದಾಯಕ್ಕೆ ಕಿವಿಮಾತು ಹೇಳಿದ್ದಾರೆ. ತಾಲೂಕಿನ ಬೀಚಗಾನಹಳ್ಳಿ ಗ್ರಾಮದಲ್ಲಿ ‘ಭಗತ್ ಸಿಂಗ್ ಯುವಕರ ಸಂಘ’ದ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾವಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

Sports – ಆರೋಗ್ಯ ಮತ್ತು ಐಕ್ಯತೆಗಾಗಿ ಕ್ರೀಡೆ
ಇತ್ತೀಚಿಗೆ ಯುವಜನತೆ ಕ್ರೀಡೆಗಳತ್ತ ಹೆಚ್ಚು ಒಲವು ತೋರುತ್ತಿಲ್ಲ. ಮೊಬೈಲ್, ಇಂಟರ್ ನೆಟ್ ಗಳಿಗೆ ದಾಸರಾಗಿ ಕ್ರೀಡೆಗಳನ್ನು ಮರೆಯುತ್ತಿದ್ದಾರೆ. ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ಕ್ರೀಡಾಮನೋಭಾವ ಬೆಳೆಸಿಕೊಳ್ಳಬೇಕು. ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ಉತ್ತಮ ಆರೋಗ್ಯ ಸಹ ಲಭಿಸುತ್ತದೆ. ಇದರ ಜೊತೆಗೆ ಗ್ರಾಮಗಳಲ್ಲಿ ಒಗ್ಗಟ್ಟು ಸಹ ಬೆಳೆಯುತ್ತದೆ ಎಂದರು.
ಇದೇ ಸಮಯದಲ್ಲಿ ಸಿಎಂ ಪವರ್ ಶೇರಿಂಗ್ ಕುರಿತು ಮಾತನಾಡಿದ ಶಾಸಕರು, ಪವರ್ ಶೇರಿಂಗ್ ಕುರಿತ ಎಲ್ಲವೂ ಇದೀಗ ಸರಿಹೋಗಿದೆ. ಸಿಎಂ ಹಾಗೂ ಡಿಸಿಎಂ ಇಬ್ಬರೂ ಒಂದಾಗಿ ಹೇಳಿಕೆ ನೀಡಿದ್ದಾರೆ. ರಾಜ್ಯ ಸರ್ಕಾರದಲ್ಲಿ ಯಾವುದೇ ಗೊಂದಲವಿಲ್ಲ. ಗೊಂದಲ ಸೃಷ್ಟಿ ಕೇವಲ ಮಾದ್ಯಮಗಳದ್ದು ಅಷ್ಟೆ ಎಂದರು. Read this also : ರೈಲ್ವೆ ಇಲಾಖೆಯ RITES ಸಂಸ್ಥೆಯಲ್ಲಿ 400 ಹುದ್ದೆಗಳಿಗೆ ಬೃಹತ್ ನೇಮಕಾತಿ: ತಿಂಗಳಿಗೆ ₹42,000+ ವೇತನ!

Sports – ಸೋಲು-ಗೆಲುವು ಸಹಜ: ನರೇಂದ್ರ
ಇದೇ ಸಮಯದಲ್ಲಿ ಬೀಚಗಾನಹಳ್ಳಿ ಗ್ರಾಮದ ಮುಖಂಡ ನರೇಂದ್ರ ಮಾತನಾಡಿ, ನಮ್ಮ ಗ್ರಾಮದಲ್ಲಿ ಭಗತ್ ಸಿಂಗ್ ಯುವಕರ ಸಂಘದ ವತಿಯಿಂದ ವಾಲಿಬಾಲ್ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ. ಈ ಕ್ರೀಡಾಕೂಟದಲ್ಲಿ ರಾಜ್ಯದ ವಿವಿಧ ಕಡೆಯಿಂದ ತಂಡಗಳು ಆಗಮಿಸಿದೆ. ಎಲ್ಲಾ ತಂಡಗಳು ಶಿಸ್ತು ಸಂಯಮದಿಂದ ನಡೆದುಕೊಳ್ಳಬೇಕು. ಯಾವುದೇ ಒಂದು ಕ್ರೀಡೆಯಲ್ಲಿ ಒಂದು ತಂಡ ಸೋತರೇ, ಮತ್ತೊಂದು ತಂಡ ಸೋಲಬೇಕು. ಇದು ಸಾಮಾನ್ಯ ಪ್ರಕ್ರಿಯೆ. ಆದ್ದರಿಂದ ಎಲ್ಲರೂ ಸೋಲು-ಗೆಲುವು ಎರಡನ್ನೂ ಸಮನಾಗಿ ತೆಗೆದುಕೊಳ್ಳಬೇಕು. ಮುಂದಿನ ದಿನಗಳಲ್ಲಿ ಈ ರೀತಿಯ (Sports) ಕ್ರೀಡಾಕೂಟಗಳನ್ನು ಮತ್ತಷ್ಟು ಹಮ್ಮಿಕೊಳ್ಳುವುದಾಗಿ ತಿಳಿಸಿದರು.
ಈ ವೇಳೆ ಬಿಇಒ ಕೃಷ್ಣಕುಮಾರಿ, ಮುಖಂಡರಾದ ರಘುನಾಥರೆಡ್ಡಿ, ಮಹದೇವಪ್ಪ, ತಿರುಮಣಿ ಮಂಜುನಾಥ್, ವೆಂಕಟನರಸಪ್ಪ, ಭಗತ್ ಸಿಂಗ್ ಯುವಕರ ಸಂಘದ ಕಿರಣ್ ಸೇರಿದಂತೆ ಹಲವರು ಇದ್ದರು.
