Sunday, January 18, 2026
HomeStateSpiritual Event : ಯಜ್ಞಯಾಗಾದಿಗಳು ಲೋಕ ಕಲ್ಯಾಣಾರ್ಥವಾಗಿ ನೆರವೇರಲಿ, ಸಮಾಜಕ್ಕೆ ಒಳಿತಾಗಲು ಸಾರ್ವತ್ರಿಕವಾಗಿ ಗಾಯತ್ರಿ ಜಪಯಜ್ಞ ನಡೆಸಲು...

Spiritual Event : ಯಜ್ಞಯಾಗಾದಿಗಳು ಲೋಕ ಕಲ್ಯಾಣಾರ್ಥವಾಗಿ ನೆರವೇರಲಿ, ಸಮಾಜಕ್ಕೆ ಒಳಿತಾಗಲು ಸಾರ್ವತ್ರಿಕವಾಗಿ ಗಾಯತ್ರಿ ಜಪಯಜ್ಞ ನಡೆಸಲು ಮೇರುನಟ ಶ್ರೀನಾಥ್ ಕರೆ

ಪ್ರಕೃತಿಯ ಮಡಿಲು, ಬೆಟ್ಟಗುಡ್ಡಗಳ ಸುಂದರ ತಾಣವಾದ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣ ಈಗ ಆಧ್ಯಾತ್ಮಿಕ ಕೇಂದ್ರವಾಗಿ ಗಮನ ಸೆಳೆಯುತ್ತಿದೆ. ಇಲ್ಲಿನ ಸುರಸದ್ಮಗಿರಿ ತಪ್ಪಲಿನಲ್ಲಿರುವ ಸರ್ವಧರ್ಮ ಸಮನ್ವಯ ಗಾಯತ್ರಿ ವಿಶ್ವಧ್ಯಾನ ಮಂದಿರದಲ್ಲಿ ಇತ್ತೀಚೆಗೆ ನಡೆದ ಧನ್ವಂತರಿ ಮಹಾವಿಷ್ಣು ಹೋಮದ ಪೂರ್ಣಾಹುತಿ (Spiritual Event) ಕಾರ್ಯಕ್ರಮಕ್ಕೆ ಸ್ಯಾಂಡಲ್‌ವುಡ್‌ನ ಮೇರುನಟ, ಪ್ರಣಯರಾಜ ಶ್ರೀನಾಥ್ ಸಾಕ್ಷಿಯಾದರು.

Spiritual event in Gudibande where Sandalwood actor Srinath attends the Dhanvantari Maha Vishnu Homa at Gayatri Vishwa Dhyana Mandir

Spiritual Event – “ಗಾಯತ್ರಿ ಮಂತ್ರ ಜಪಿಸಿ, ಧೀಶಕ್ತಿ ಹೆಚ್ಚಿಸಿಕೊಳ್ಳಿ”: ಶ್ರೀನಾಥ್ ಕರೆ

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ನಟ ಶ್ರೀನಾಥ್ ಅವರು, ಯಜ್ಞಯಾಗಾದಿಗಳು ಕೇವಲ ಆಚರಣೆಗಳಲ್ಲ, ಅವು ಲೋಕದ ಒಳಿತಿಗಾಗಿ ನಡೆಯುವ ಪವಿತ್ರ ಕಾರ್ಯಗಳು. ಗಾಯತ್ರಿ ಮಾತೆ ಕೇವಲ ವೇದಮಾತೆಯಷ್ಟೇ ಅಲ್ಲ, ಅವಳು ನಾದಮಾತೆಯೂ ಹೌದು. 24 ಅಕ್ಷರಗಳ ಗಾಯತ್ರಿ ಮಂತ್ರವನ್ನು ಪ್ರತಿಯೊಬ್ಬರೂ ಜಪಿಸುವುದರಿಂದ ಬುದ್ಧಿಶಕ್ತಿ (ಧೀಶಕ್ತಿ) ಚುರುಕಾಗುತ್ತದೆ ಮತ್ತು ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ಸಾಧ್ಯ. ಯಾವುದೇ ಜಾತಿ-ಮತದ ಭೇದವಿಲ್ಲದೆ ಎಲ್ಲರನ್ನು ಒಗ್ಗೂಡಿಸುತ್ತಿರುವ ಈ ಕ್ಷೇತ್ರದ ಕಾರ್ಯವೈಖರಿಯನ್ನು ಅವರು ಮುಕ್ತಕಂಠದಿಂದ ಶ್ಲಾಘಿಸಿದರು.

ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಮಹತ್ವದ ಯೋಜನೆ

ಹೈಕೋರ್ಟ್ ನಿವೃತ್ತ ನ್ಯಾಯಾಧೀಶರಾದ ಜಸ್ಟೀಸ್ ಚಂದ್ರಶೇಖರ್ ಅವರು ಮಾತನಾಡಿ, ಇಲ್ಲಿನ ಸಂಸ್ಥೆಯು ಕೇವಲ ಆಧ್ಯಾತ್ಮಕ್ಕೆ ಸೀಮಿತವಾಗದೆ ಜನಪರ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ ಎಂದರು. ಬೆಟ್ಟದಿಂದ ಹರಿದು ಬರುವ ಮಳೆನೀರನ್ನು (Spiritual Event) ಪುರಾತನ ಕಲ್ಯಾಣಿಯಲ್ಲಿ ಸಂಗ್ರಹಿಸಿ, ಶುದ್ಧೀಕರಣ ಘಟಕದ ಮೂಲಕ ಫ್ಲೋರೈಡ್ ಮುಕ್ತ ಕುಡಿಯುವ ನೀರನ್ನು ಪಟ್ಟಣದ ಜನರಿಗೆ ಪೂರೈಸುವ ಯೋಜನೆ ಅದ್ಭುತವಾಗಿದೆ. ಈ ಕಾರ್ಯಕ್ಕೆ ನನ್ನ ಸಂಪೂರ್ಣ ಸಹಕಾರವಿದೆ ಎಂದು ಭರವಸೆ ನೀಡಿದರು.

ದೇಶದಲ್ಲೇ ಮಾದರಿಯಾದ 37 ವರ್ಷಗಳ ಸಾಧನೆ

ಆರ್.ವಿ. ಡೆಂಟಲ್ ಕಾಲೇಜಿನ ನಿವೃತ್ತ ಮುಖ್ಯಸ್ಥ ಡಾ. ಕೆ.ಎಸ್. ನಾಗೇಶ್ ಅವರು ಮಾತನಾಡಿ, “ದ್ವೈತ, ಅದ್ವೈತ ಮತ್ತು ವಿಶಿಷ್ಟಾದ್ವೈತ ಎಂಬ ಮೂರೂ ತತ್ವಗಳನ್ನು ಒಂದೇ ಪೀಠದಲ್ಲಿ ಸಮನ್ವಯಗೊಳಿಸಿ ಗಾಯತ್ರಿ (Spiritual Event) ದೇವಿಯನ್ನು ಪ್ರತಿಷ್ಠಾಪಿಸಿರುವುದು ದೇಶದಲ್ಲೇ ಪ್ರಥಮ ಪ್ರಯತ್ನ. 24 ಅಡಿ ಎತ್ತರದ ಗಾಯತ್ರಿ ಶಿಲಾವಿಗ್ರಹವು ಈ ಭಾಗದ ಜ್ಞಾನದ ಹೆಬ್ಬಾಗಿಲಾಗಲಿದೆ” ಎಂದರು.

ವಿಶ್ವದ ಗಮನ ಸೆಳೆಯಲಿರುವ ಗುಡಿಬಂಡೆ

ದೇಗುಲ ಸಮಿತಿಯ ಅಧ್ಯಕ್ಷರಾದ ಡಾ. ಎಸ್. ಗಿರೀಶ್ ರಾವ್ ಅವರು ಮಾತನಾಡಿ, ಈ ಕ್ಷೇತ್ರದಲ್ಲಿ ನಡೆಯುತ್ತಿರುವ ವಿಶ್ವಕಲ್ಯಾಣ ಕಾರ್ಯಗಳು ಹೊಸ ಚೈತನ್ಯ ನೀಡುತ್ತಿವೆ. ದೇಶ-ವಿದೇಶಗಳ ನೂರಾರು ವೈದ್ಯರು ಹಾಗೂ ಗಣ್ಯರು 108 ಬಗೆಯ ಮೂಲಿಕೆಗಳೊಂದಿಗೆ ಧನ್ವಂತರಿ ಯಜ್ಞ ಪೂರೈಸಿರುವುದು ವಿಶೇಷ. (Spiritual Event) ಮುಂದಿನ ದಿನಗಳಲ್ಲಿ ಗುಡಿಬಂಡೆಯು ಪ್ರವಾಸೋದ್ಯಮ ಮತ್ತು ಆಧ್ಯಾತ್ಮಿಕವಾಗಿ ವಿಶ್ವದ ಭೂಪಟದಲ್ಲಿ ಗುರುತಿಸಿಕೊಳ್ಳಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. Read this also : ಬಾಬಾ ವಂಗಾ (Baba Vanga) ಭವಿಷ್ಯ ನಿಜವಾಗುತ್ತಿದೆಯೇ? 2026ರ ಆರಂಭದಲ್ಲೇ ವಿಶ್ವಕ್ಕೆ ನಡುಕ ತಂದ ಯುದ್ಧದ ಕಾರ್ಮೋಡ!

Spiritual event in Gudibande where Sandalwood actor Srinath attends the Dhanvantari Maha Vishnu Homa at Gayatri Vishwa Dhyana Mandir

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಮುಖರು

ಗಾಯತ್ರಿ ಜ್ಞಾನಯಜ್ಞ ಮಂಟಪದಲ್ಲಿ ನೆರವೇರಿದ ಯಾಗ ಕೈಂಕರ್ಯದಲ್ಲಿ ಖ್ಯಾತ ಉದ್ಯಮಿಗಳಾದ ಚಂದ್ರಶೇಖರ್, ಮೆಹ್ತಾ, ತಜ್ಞ ವೈದ್ಯರಾದ ಡಾ.ರಾಮ್, ಡಾ.ರವಿಶಂಕರ್, ಡಾ.ಪೃಥ್ವಿ, ಡಾ.ರಘುನಂದನ್, ಡಾ.ಜೋಷಿ, ಇಂಜಿನೀಯರ್ ವಾಷಿಂಗ್ಟನ್ ಪ್ರತಾಪ್ ಸಿಂಹ, ಪ್ರೋ.ಗಿರಿಧರ್, ಅಮರನಾಥ ಶಾಸ್ತ್ರಿ, ಗಾಯತ್ರಿ ದೇಗುಲ ಸಮಿತಿ  ಪ್ರಧಾನ ಸಂಚಾಲಕ ಸ.ನ.ನಾಗೇಂದ್ರಭಟ್, ತಾಂತ್ರಿಕ ಸಲಹಾ ಸಮಿತಿ ಮುಖ್ಯಸ್ಥರಾದ ಬಿ.ವಿ.ನಾಗೇಶ್, ಎಸ್,ಎನ್,ಶ್ರೀನಾಥ್, ಇ.ಐ.ಟೆಕ್ನಾಲಜೀಸ್ ಮುಖ್ಯಸ್ಥ ಡಾ.ರಂಗನಾಥ್, ಸಂಸ್ಥೆಯ ಪದಾಧಿಕಾರಿಗಳಾದ ವೈ.ಎನ್.ರಾಮನಾಥ್, ಕೃಷ್ಣಪ್ರಸಾದ್, ವಿಜಯ್‍ಕುಮಾರ್,  ಎಂ.ಎನ್.ಮಂಜುನಾಥ್, ಶ್ರೀಶಸಿಂಹಭಟ್, ಪ್ರಧಾನ ಅರ್ಚಕ ಗುರುಪ್ರಸಾದ್ ಶರ್ಮಾ, ಮುರಳಿಕೃಷ್ಣಾ, ಶಂಕರ್‍ದೀಕ್ಷಿತ್, ಕೆ.ರವಿಕುಮಾರ್, ವಾಹಿನಿ ಸುರೇಶ್, ವಿಶ್ವಚಲಪತಿ, ಶಶಿಭೂಷಣ್, ವಿಶ್ವನಾಥರಾವ್ ಭಾಗವಹಿಸಿದ್ದರು.

by ISM Kannada News Deskhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular