HomeEntertainmentSonu Sood : ದಾನದ ವಿಚಾರದಲ್ಲಿ ಸೋನುಗೆ ಸಾಟಿಯೇ ಇಲ್ಲ; 22 ಲಕ್ಷ ನೀಡಿ ಗೋಮಾತೆಯ...

Sonu Sood : ದಾನದ ವಿಚಾರದಲ್ಲಿ ಸೋನುಗೆ ಸಾಟಿಯೇ ಇಲ್ಲ; 22 ಲಕ್ಷ ನೀಡಿ ಗೋಮಾತೆಯ ಸೇವೆಗೆ ಸೈ ಎಂದ ನಟ..!

ಸಿನಿಮಾದಲ್ಲಿ ವಿಲನ್ ಆಗಿ ಅಬ್ಬರಿಸುವ ನಟ ಸೋನು ಸೂದ್, ನಿಜ ಜೀವನದಲ್ಲಿ ಮಾತ್ರ ಅಪ್ಪಟ ಚಿನ್ನದ ಮನುಷ್ಯ ಅನ್ನೋದನ್ನ ಪದೇ ಪದೇ ಸಾಬೀತು ಮಾಡುತ್ತಿದ್ದಾರೆ. ಈಗ ಅವರು ಮಾಡಿರುವ ಒಂದು ಹೊಸ ಕೆಲಸ ಪ್ರಾಣಿ ಪ್ರೇಮಿಗಳ ಮತ್ತು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಗುಜರಾತ್‌ನ ವರಾಹಿ ಗೋಶಾಲೆಗೆ (Sonu Sood) ಸೋನು ಸೂದ್ ಬರೋಬ್ಬರಿ 22 ಲಕ್ಷ ರೂಪಾಯಿ ದೇಣಿಗೆ ನೀಡುವ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

Actor Sonu Sood supporting cow welfare by donating ₹22 lakh to Varahi Goshala in Gujarat

Sonu Sood – ಪ್ರಚಾರ ಬಯಸದ ‘ಗುಪ್ತದಾನಿ’

ವಿಶೇಷ ಅಂದ್ರೆ, ಸೋನು ಸೂದ್ ತಾವು ಕೊಟ್ಟ ಹಣದ ಬಗ್ಗೆ ಎಲ್ಲಿಯೂ ಅಹಂಕಾರದಿಂದ ಹೇಳಿಕೊಂಡಿಲ್ಲ. ಅವರು ಗೋಶಾಲೆಯ ಕೆಲವು ಫೋಟೋಗಳನ್ನು ಹಂಚಿಕೊಂಡು, “ಅವು ಏನನ್ನೂ ಕೇಳುವುದಿಲ್ಲ, ಕೇವಲ ಪ್ರೀತಿಯನ್ನು ಬಯಸುತ್ತವೆ. ನಮ್ಮ ಗೋವುಗಳು ಮತ್ತು ಗೋಶಾಲೆಗಳ ಪರವಾಗಿ ನಾವು ನಿಲ್ಲೋಣ” ಎಂದು ಅರ್ಥಪೂರ್ಣವಾಗಿ ಬರೆದುಕೊಂಡಿದ್ದಾರೆ. ಆದರೆ ಅವರು ನೀಡಿದ 22 ಲಕ್ಷ ರೂಪಾಯಿಗಳ ನೆರವಿನ ವಿಷಯ ಮಾತ್ರ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, “ಇದು ರೀಲ್ ವಿಲನ್‌ನ ರಿಯಲ್ ಹೀರೋಯಿಸಂ” ಎಂದು ಅಭಿಮಾನಿಗಳು ಕೊಂಡಾಡುತ್ತಿದ್ದಾರೆ.

ಗೋವುಗಳ ಸಂರಕ್ಷಣೆಗೆ ಆಸರೆ

ಗುಜರಾತ್‌ನ ವರಾಹಿ ಗೋಶಾಲೆಯಲ್ಲಿ ನೂರಾರು ಗೋವುಗಳಿದ್ದು, ಅವುಗಳ ಆರೈಕೆ ಮತ್ತು ಆಹಾರಕ್ಕಾಗಿ ಈ ದೊಡ್ಡ ಮೊತ್ತವನ್ನು ಸೋನು ಸೂದ್ ನೀಡಿದ್ದಾರೆ. ಲಾಕ್‌ಡೌನ್ ಸಮಯದಲ್ಲಿ ಸಾವಿರಾರು ಜನರಿಗೆ ನೆರವಾಗಿದ್ದ (Sonu Sood) ಸೋನು, ಈಗ ಮೂಕ ಪ್ರಾಣಿಗಳ ಸೇವೆಗೆ ಮುಂದಾಗಿರುವುದು ಅವರ ವಿಶಾಲ ಮನೋಭಾವವನ್ನು ತೋರಿಸುತ್ತದೆ. Read this also : ಮೊದಲ ಬಾರಿಗೆ ಸಮುದ್ರ ನೋಡಿದ ಅಜ್ಜ-ಅಜ್ಜಿ! ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆದ ವಿಡಿಯೋ…!

ಸೋನು ಸೂದ್ ಹಂಚಿಕೊಂಡ ಭಾವನಾತ್ಮಕ ಸಾಲುಗಳು:

“They ask for nothing, only care. Standing with our cows and cow shelter homes.” (ಅವು ಯಾವುದನ್ನೂ ಕೇಳುವುದಿಲ್ಲ, ಕೇವಲ ಕಾಳಜಿಯನ್ನು ಬಯಸುತ್ತವೆ. ನಮ್ಮ ಗೋವುಗಳು ಮತ್ತು ಗೋಶಾಲೆಗಳ ಬೆಂಬಲಕ್ಕೆ ನಾವು ನಿಲ್ಲೋಣ.)

Actor Sonu Sood supporting cow welfare by donating ₹22 lakh to Varahi Goshala in Gujarat

ಸಂಬಂಧಿಸಿದ ಪೋಸ್ಟ್ ಇಲ್ಲಿದೆ ನೋಡಿ : Click Here

ಸಿನಿಮಾ ತಾರೆಯರು (Sonu Sood) ಕೇವಲ ಐಷಾರಾಮಿ ಜೀವನಕ್ಕೆ ಸೀಮಿತವಾಗದೆ, ಸೋನು ಸೂದ್ ಅವರಂತೆ ಸಮಾಜದ ಮತ್ತು ಪ್ರಕೃತಿಯ ಕಷ್ಟಗಳಿಗೆ ಸ್ಪಂದಿಸಿದರೆ ಅದು ನಿಜಕ್ಕೂ ಸ್ಫೂರ್ತಿದಾಯಕ. ಸೋನು ಸೂದ್ ಅವರ ಈ ಕಾರ್ಯ ಇತರರಿಗೂ ಮಾದರಿಯಾಗಲಿ ಎಂಬುದು ನಮ್ಮ ಆಶಯ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular