Saturday, August 2, 2025
HomeNationalನನ್ನ ಪತಿಯನ್ನು ನಾನು ಇಷ್ಟಪಟ್ಟಿಲ್ಲ ಎಂದು ಮದುವೆಯಾದ ತಿಂಗಳಿಗೆ ಶಾಕಿಂಗ್ ಕಾಮೆಂಟ್ ಮಾಡಿದ ಬರೆಲಕ್ಕ ಶಿರೀಷಾ….!

ನನ್ನ ಪತಿಯನ್ನು ನಾನು ಇಷ್ಟಪಟ್ಟಿಲ್ಲ ಎಂದು ಮದುವೆಯಾದ ತಿಂಗಳಿಗೆ ಶಾಕಿಂಗ್ ಕಾಮೆಂಟ್ ಮಾಡಿದ ಬರೆಲಕ್ಕ ಶಿರೀಷಾ….!

ಸೋಷಿಯಲ್ ಮಿಡಿಯಾದಲ್ಲಿ ಸ್ಟಾರ್‍ ಆದ ಶಿರಿಷಾ ಬರೆಲೆಕ್ಕಾ ಎಂದೇ ಫೇಮಸ್ ಆದರು. ಇತ್ತೀಚಿಗಷ್ಟೆ ಕರ್ನೂಲ್ ಜಿಲ್ಲೆಯ ಪೆದ್ದಕೊತ್ತಪಲ್ಲಿ ಮಂಡಲದ ವ್ಯಾಪ್ತಿಯಲ್ಲಿ ಪಿ.ಎಂ.ಆರ್‍. ಗಾರ್ಡನ್ ನಲ್ಲಿ ಬರೆಲೆಕ್ಕಾ ಶಿರಿಷಾ ಮದುವೆ ಅದ್ದೂರಿಯಾಗಿ ನಡೆದಿತ್ತು. ತಮ್ಮ ಹತ್ತಿರದ ಸಂಬಂಧಿ ವೆಂಕಟೇಶ್ ಎಂಬಾತನೊಂದಿಗೆ ಆಕೆ ಸಪ್ತಪದಿ ತುಳಿದಿದ್ದಾರೆ. ಈ ಪೊಟೋಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗಿತ್ತು. ಮದುವೆಯಾದ ಒಂದು ತಿಂಗಳಲ್ಲೇ ಆಕೆ ಪತಿಯ ಬಗ್ಗೆ ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ್ದು, ಅವರು ಸೋಷಿಯಲ್ ಮಿಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ.

Barrelakka sirisha shocking comments 0

ಸೋಷಿಯಲ್ ಮಿಡಿಯಾ ಮೂಲಕ ಸ್ಟಾರ್‍ ಆದಂತಹ ಬರೆಲೆಕ್ಕಾ ಅಲಿಯಾಸ್ ಶಿರಿಷಾ ಮೊದಲಿಗೆ ಉದ್ಯೋಗ ಸಿಗದೆ ಹಸುಗಳನ್ನು ಸಾಕುತ್ತಿದ್ದಾಗಿ ವಿಡಿಯೋ ಮಾಡಿದರು. ಈ ವಿಡಿಯೋ ಕಡಿಮೆ ಸಮಯದಲ್ಲೇ ಭಾರಿ ವೈರಲ್ ಆಗಿತ್ತು. ಬಳಿಕ ಆಕೆಯ ಎಲ್ಲಾ ವಿಡಿಯೋ ಭಾರಿ ಸದ್ದು ಮಾಡುತ್ತಿವೆ. ಕಳೆದ 2023 ರಲ್ಲಿ ತೆಲಂಗಾಣದ ವಿಧಾನಸಭಾ ಚುನಾವಣೆಯಲ್ಲೂ ಸಹ ಆಕೆ ಸ್ಪರ್ಧೆ ಮಾಡಿ ಭಾರಿ ಸೆನ್ಷೇಷನ್ ಕ್ರಿಯೇಟ್ ಮಾಡಿದ್ದರು. 5700 ಮತಗಳನ್ನು ಪಡೆದು ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಡೆದುಕೊಳ್ಳಬೇಕಾಯಿತು. ಇದೀಗ ಆಕೆ ಲೋಕಸಭಾ ಚುನಾವಣೆಯಲ್ಲೂ ಸಹ ಸ್ಪರ್ಧೆ ಮಾಡುತ್ತಿದ್ದಾರೆ. ಇತ್ತಿಚಿಗಷ್ಟೆ ಆಕೆ ನಾಮಿನೇಷನ್ ಸಹ ಫೈಲ್ ಮಾಡಿದ್ದರು. ಇನ್ನೂ ಕಳೆದ ಮಾರ್ಚ್‌ ಮಾಹೆಯಲ್ಲಿ ಬರೆಲೆಕ್ಕಾ ಮದುವೆಯಾದರು. ಇದೀಗ ಸಂದರ್ಶನವೊಂದರಲ್ಲಿ ಆಕೆ ಕೆಲವೊಂದು ಕಾಮೆಂಟ್ ಗಳನ್ನು ಮಾಡಿದ್ದು, ಅವು ಸಂಚಲನ ಸೃಷ್ಟಿಸಿದೆ.

Barrelakka sirisha shocking comments 1

ಇನ್ನೂ ಸಂದರ್ಶನದಲ್ಲಿ ಮಾತನಾಡಿದ ಶಿರಿಷಾ, ನಾನು ಹಾಗೂ ವೆಂಕಟೇಶ್ ಕರ್ನೂಲ್ ನಲ್ಲಿನ ಒಂದು ಖಾಸಗಿ ಕಾಲೇಜಿನಲ್ಲಿ ಇಂಟರ್‍ ಮಿಡಿಯೇಟ್ ನಲ್ಲಿ ಓದಿದ್ದೇವೆ. ನನಗೆ ಆ ಸಮಯದಲ್ಲಿ ತಿಳಿಯಿತು ವೆಂಕಟೇಶ್ ನಮ್ಮ ಸಂಬಂಧಿ ಎಂದು. ಆಗ ನಾನು ಜೀನ್ಸ್ ಧರಿಸಿ ಸ್ಟೈಲಿಷ್ ಆಗಿ ರೆಡಿಯಾಗುತ್ತಿದ್ದೆ. ಅದು ವೆಂಕಟೇಶ್ ಗೆ ಇಷ್ಟವಾಗುತ್ತಿರಲಿಲ್ಲ. ಹಣೆಗೆ ಕುಂಕುಮ, ಹೂವು, ಬಳೆಗಳನ್ನು ಧರಿಸಿ ಸಂಪ್ರದಾಯಬದ್ದವಾಗಿ ಇರಲು ಹೇಳುತ್ತಿದ್ದ. ಅದು ನನಗೆ ಇಷ್ಟವಾಗುತ್ತಿರಲಿಲ್ಲ. ಈ ಕಾರಣದಿಂದ ವೆಂಕಟೇಶ್ ಮೇಲೆ ನನಗೆ ಇಷ್ಟವಿರಲಿಲ್ಲ. ಐಲವ್ ಯು ಎಂದು ಮೆಸೇಜ್ ಹಾಕಿ ಮತ್ತೆ ಡಿಲೀಟ್ ಮಾಡುತ್ತಿದ್ದು. ಆಗ ಮತಷ್ಟು ಕೋಪ ಬರುತ್ತಿತ್ತು. ಬಳಿಕ ನನಗೆ ಕೆಲವೊಂದು ಸಮಸ್ಯೆಗಳು ಎದುರಾಗಿದ್ದವು. ಆ ಸಮಯದಲ್ಲಿ ನನಗೆ ಬೆಂಬಲವಾಗಿ ನಿಂತ. ಆ ಸಮಯದಲ್ಲೇ ನನಗೆ ವೆಂಕಟೇಶ್ ಮೇಲೆ ಇಷ್ಟವಾಯ್ತು ಎಂದು ಆಕೆ ಹೇಳಿದ್ದಾಳೆ. ಇನ್ನೂ ಬರೆಲೆಕ್ಕಾ ಶಿರಿಷಾ ಹೇಳಿಕೆಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಸದ್ಯ ಆಕೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದು, ಎಷ್ಟು ಮತಗಳನ್ನು ಪಡೆದುಕೊಳ್ಳಲಿದ್ದಾಳೆ ಎಂಬುದನ್ನು ಕಾದು ನೋಡಬೇಕಿದೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular