Snake Bite – ಹಾವಿನ ದ್ಚೇಷ ಹನ್ನೆರಡು ವರ್ಷ ಎಂದು ಹೇಳಲಾಗುತ್ತದೆ. ಇದಕ್ಕೆ ಉದಾಹರಣೆ ಎಂಬಂತೆ ಅನೇಕ ಘಟನೆಗಳೂ ಸಹ ನಡೆದಿರುತ್ತದೆ. ಇದೀಗ ಮತ್ತೊಂದು ಘಟನೆ ನಡೆದಿದೆ. 19 ವರ್ಷದ ಯುವತಿಯೊಬ್ಬಳಿಗೆ ಕಳೆದ ಐದು ವರ್ಷಗಳಿಂದ ಪದೇ ಪದೇ ಕಚ್ಚುತ್ತಿದೆಯಂತೆ. 5 ವರ್ಷಗಳಲ್ಲಿ 11 ಬಾರಿ ಕಪ್ಪು ಹಾವು ಯುವತಿಗೆ ಕಚ್ಚಿದೆ. ಇತ್ತೀಚಿಗೆ ಅದೇ ಹಾವು ಮತ್ತೊಮ್ಮೆ ಕಚ್ಚಿದೆ ಎನ್ನಲಾಗಿದ್ದು, ಸದ್ಯ ಆ ಯುವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
ಅಂದಹಾಗೆ ಈ ಘಟನೆ ಉತ್ತರ ಪ್ರದೇಶದ ಮಹೋಬಾದಲ್ಲಿ ನಡೆದಿದೆ ಎನ್ನಲಾಗಿದೆ. ಮಹೋಬಾದ ಚರಖಾರಿ ತೆಹಸಿಲ್ ವ್ಯಾಪ್ತಿಯ ಪಂಚಪುರ ಗ್ರಾಮದ 19 ವರ್ಷದ ಯುವತಿಯೊಬ್ಬಳಿಗೆ ಕಳೆದ 2019 ರಿಂದ ಕಪ್ಪು ಹಾವೋಂದು ಕಚ್ಚುತ್ತಿದೆಯಂತೆ. ಯುವತಿಯ ತಂದೆ ದಳಪತ್ ಹೇಳುವಂತೆ ತನ್ನ ಮಗಳಾದ ರೋಷಣಿಗೆ ಕಪ್ಪು ಹಾವು ಪದೇ ಪದೇ ಕಚ್ಚುತ್ತಿದೆ. ಗದ್ದೆಯಲ್ಲಿ ಕೆಲಸ ಮಾಡುವಾಗ ರೋಷಣಿ ಆಕಸ್ಮಿಕವಾಗಿ ಹಾವಿನ ಮೇಲೆ ಕಾಲಿಟ್ಟಿದ್ದಳು. ಆಗ ಮೊದಲ ಬಾರಿಗೆ ಹಾವು ರೋಷಿಣಿಗೆ ಕಚ್ಚಿತ್ತು. ವೈದ್ಯಕೀಯ ಚಿಕಿತ್ಸೆಯ ಸಮಯದಲ್ಲೂ ಅದೇ ಹಾವು ಆಕೆಯನ್ನು ಹಿಂಬಾಲಿಸಿತ್ತು. ಆಗಿನಿಂದ ರೋಷಿಣಿಗೆ 11 ಬಾರಿ ಹಾವು ಕಚ್ಚಿದೆ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಇನ್ನೂ ರೋಷಿಣಿ ಸಂಬಂಧಿಕರ ಮನೆಗೆ ಹೋದಾಗಲೂ ಸಹ ಹಾವು ಕಚ್ಚಿದೆಯಂತೆ. ಅದೇ ಹಾವು ತನ್ನ ಮಗಳನ್ನು ಹಿಂಬಾಲಿಸುತ್ತಲೇ ಇದೆಯಂತೆ. ಸಂಬಧಿಕರ ಮನೆಗೆ ಹೋದಾಗಲೂ ರೋಷಿಣಿಯನ್ನು ಹಾವು ಕಚ್ಚುತ್ತಿತ್ತು. ಪ್ರತಿ ಬಾರಿ ಹಾವು ಕಚ್ಚಿದಾಗ ಆಕೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಆಕೆಯ ಪ್ರಾಣವನ್ನು ಉಳಿಸಿಕೊಳ್ಳಲಾಗುತ್ತಿತ್ತು. ಬಳಿಕ ಮಗಳಿಗೆ ಸರ್ಪ ದೋಷ ಏನಾದರೂ ಇರಬಹುದು ಎಂದು ಪುರೋಹಿತರನ್ನು ಕೂಡ ಸಂಪರ್ಕ ಮಾಡಿದ್ದರು. ಪುರೋಹಿತರ ಸಲಹೆಯಂತೆ ಶಿವನಿಗೆ ವಿಶೇಷ ಪೂಜೆಗಳನ್ನು, ಆಚರಣೆಗಳನ್ನು ಸಹ ಮಾಡಿದ್ದರಂತೆ. ಆದರೂ ಸಹ ಆ ಹಾವು ರೋಷಿಣಿಯನ್ನು ಕಚ್ಚೋದು ಮಾತ್ರ ಬಿಟ್ಟಿರಲಿಲ್ಲ. ಇದರಿಂದ ರೋಷಿಣಿ ಕುಟುಂಬ ಆತಂಕಕ್ಕೆ ಈಡಾಗಿತ್ತು. ಇನ್ನೂ ರೋಷಿಣಿಗೆ 5 ವರ್ಷಗಳಲ್ಲಿ 11 ಬಾರಿ ಸರ್ಪ ಕಚ್ಚಿದ್ದು, ಇತ್ತೀಚೆಗೆ ಮತ್ತೊಮ್ಮೆ ಕಚ್ಚಿದೆ. ಇದರಿಂದ ಆಕೆಯ ಸ್ಥಿತಿ ಗಂಭೀರವಾಗಿದೆ. ಆಕೆ ಪ್ರಸ್ತುತ ಝಾನ್ಸಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.