ಪ್ರತಿಯೊಬ್ಬರೂ ತಾವು ಸುಂದರವಾಗಿ ಕಾಣಿಸಿಕೊಳ್ಳಬೇಕೆಂಬ ಉದ್ದೇಶ ತುಂಬಾನೆ ಇರುತ್ತದೆ. ತಮ್ಮ (Skin Care) ಸೌಂದರ್ಯವನ್ನು ವೃದ್ದಿಸಿಕೊಳ್ಳಲು ಹಾಗೂ ಕಾಪಾಡಿಕೊಳ್ಳಲು ಬ್ಯೂಟಿ ಪಾರ್ಲರ್ ಗಳಿಗಂತಾ ಸಾವಿರಗಟ್ಟಲೇ ಹಣ ಖರ್ಚು ಮಾಡುತ್ತಾರೆ. ಆದರೆ ನಮ್ಮ ಅಂಗೈಯಲ್ಲೆ ಸಿಗುವಂತಹ ಅನೇಕ ವಸ್ತುಗಳಿಂದ ಸೌಂದರ್ಯವನ್ನು ವೃದ್ದಿಸಿಕೊಳ್ಳಬಹುದಾಗಿದೆ. ಇದೀಗ ಆಲೂಗಡ್ಡೆಯ (Skin Care) ಮೂಲಕ ತಮ್ಮ ಚರ್ಮ ಸೌಂದರ್ಯವನ್ನು ವೃದ್ದಿಸಿಕೊಳ್ಳಬಹುದು. ಈ ಸಂಬಂಧ ಸಂಗ್ರಹಿಸಿದ ಮಾಹಿತಿಯನ್ನು ತಮ್ಮೊಂದಿಗೆ ಹಂಚಿಕೊಳ್ಳಲಾಗಿದೆ.
ಆಲೂಗಡ್ಡೆಯಲ್ಲಿ ಮುಖದ ಸೌಂದರ್ಯವನ್ನು ಸುಧಾರಿಸುವಂತಹ ಹಲವು ಪೋಷಕಾಂಶಗಳಿರುತ್ತವೆ. ಅದರಲ್ಲಿರುವ ಪೋಷಕಾಂಶಗಳು ಚಂðದ ರಂಧ್ರಗಳನ್ನು ಬಿಗಿಗೊಳಿಸುವಂತಹ ಅಂಶಗಳಿರುತ್ತವೆ. ಆಲೂಗಡ್ಡೆಯ ರಸವು ನೈಸರ್ಗಿಕ ಬ್ಲೀಚಿಂಗ್ ಏಜೆಂಟ್ ಆಗಿ ಕೆಲಸ ಮಾಡುತ್ತದೆ. ಇದರಿಂದ ಮುಖದ ಕಾಂತಿ ಸಹ ಹೆಚ್ಚಾಗುತ್ತದೆ. ಆಲೂಗಡ್ಡೆಯ ರಸವನ್ನು ಮುಖದ ಮೇಲೆ ನಿರಂತರವಾಗಿ ಕೆಲವು ದಿನಗಳ ಕಾಲ ಹಚ್ಚುವುದರಿಂದ ತಮ್ಮ ಚರ್ಮದ ಸೌಂದರ್ಯ ಸುಧಾರಿಸುತ್ತದೆ. ಇನ್ನೂ ಆಲೂಗಡ್ಡೆಯ ರಸವನ್ನು ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಏನೆಲ್ಲಾ ಪ್ರಯೋಜನಗಳು ಆಗುತ್ತವೆ ಎಂಬುದನ್ನು ಮುಂದೆ ತಿಳಿಸಲಾಗಿದೆ.
- Vitamin C: ಆಲೂಗಡ್ಡೆಯಲ್ಲಿ ವಿಟಮಿನ್ ಸಿ ಯಲ್ಲಿ ಸಮೃದ್ದವಾಗಿದ್ದು, ಅದು ಚರ್ಮವನ್ನು ಒಳಗಿನಿಂದ ಶುದ್ದೀಕರಿಸಲು ಸಹಾಯ ಮಾಡುತ್ತದೆ. ಇದು ನಿಮ್ಮ ಮುಖದಲ್ಲಿರುವ ರಂಧ್ರಗಳನ್ನು ಮುಚ್ಚುತ್ತದೆ ಜೊತೆಗೆ ಮೊಡವೆಗಳಂತಹ ಸಮಸ್ಯೆಗಳನ್ನು ಸಹ ತಡೆಯಲು ಸಹಾಯ ಮಾಡುತ್ತದೆ.
- ಸೂರ್ಯನಿಂದ ರಕ್ಷಣೆ : ಆಲೂಗಡ್ಡೆಯ ರಸದಲ್ಲಿರುವಂತಹ ಪೋಷಕಾಂಶಗಳು ಬಿಸಲು ಹಾಗೂ ಸೂರ್ಯನಿಂದ ಚರ್ಮಕ್ಕೆ ಆಗುವಂತಹ ಹಾನಿಯನ್ನು ತಡೆಯುತ್ತದೆ. ಸೂರ್ಯನ ಬೆಳಕಿನಿಂದ ಉಂಟಾಗುವಂತಹ ಚರ್ಮದ ಉರಿಯೂತ, ಕೆಂಪು ಬಣ್ಣ ಕಡಿಮೆ ಮಾಡಲು ಶಕ್ತಿಯನ್ನು ನೀಡುತ್ತದೆ.
- ಆಲೂಗಡ್ಡೆಯಲ್ಲಿ ಪೊಟ್ಯಾಸಿಯಂ ಸಮೃದ್ಧವಾಗಿದೆ. ಇದು ಮುಖದ ಸೌಂದರ್ಯವನ್ನು ಸುಧಾರಿಸಲು ಹೆಚ್ಚು ಸಹಾಯ ಮಾಡುತ್ತದೆ. ಜೊತೆಗೆ ಮುಖದ ಮೇಲಿನ ಕಲೆಗಳನ್ನು ಕಡಿಮೆ ಮಾಡುತ್ತದೆ. ಚರ್ಮದ ಪದರಗಳಲ್ಲಿ ಅಡಗಿರುವಂತಹ ಸತ್ತ ಜೀವಕೋಶಗಳನ್ನು ಸ್ವಚ್ಛಗೊಳಿಸುತ್ತದೆ ಹಾಗೂ ಚರ್ಮ ಒಳಗಿನಿಂದ ಹೊಳೆಯುವಂತೆ ಮಾಡುತ್ತದೆ.
- ಆಲೂಗಡ್ಡೆಯಲ್ಲಿ ವಿಟಮಿನ್ B6 ಇದ್ದು, ಅದು ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ. ಅದು ಮುಖದ ಮೇಲಿನ ಸುಕ್ಕುಗಳು ಹಾಗೂ ಅನಗತ್ಯ ಗೆರೆಗಳನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಇದು ತ್ವಚೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
- ಆಲೂಗೆಡ್ಡೆಯ ರಸವನ್ನು ನಿಮ್ಮ ಚರ್ಮದ ಮೇಲೆ ಹಚ್ಚುವುದರಿಂದ ಚರ್ಮವು ತೇವಾಂಶವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಚರ್ಮವನ್ನು ಮೃದುವಾಗಿರಿಸುತ್ತದೆ. ಆದ್ದರಿಂದ, ನೀವು ಆಲೂಗೆಡ್ಡೆ ಮಾಸ್ಕ್ ಅನ್ನು ತಯಾರಿಸಿ ಅಳವಡಿಸಿಕೊಂಡು ತಮ್ಮ ಚರ್ಮದ ತೇವಾಂಶ ಕಾಪಾಡಿಕೊಳ್ಳಬಹುದಾಗಿದೆ.