ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಗಣೇಶ ಚತುರ್ಥಿ ಅತ್ಯಂತ ಪ್ರಮುಖವಾದುದು ಎಂದೇ ಹೇಳಲಾಗುತ್ತದೆ. ಈ ಹಬ್ಬವನ್ನು ಯುವಕರು ಅತ್ಯಂತ ವಿಜೃಂಭಣೆ ಹಾಗೂ ಸಂಭ್ರಮ ಸಡಗರದಿಂದ ಆಚರಿಸುತ್ತಾರೆ. ಆದರೆ ಇತ್ತೀಚಿಗೆ (Ganesha Ustav) ಗಣೇಶೋತ್ಸವದಲ್ಲಿ ಡಿ.ಜೆ. ಅಳವಡಿಕೆ ಸರ್ಕಾರ ನಿಷೇಧ ಹೇರಿದೆ. ಈ ಸಂಬಂಧ ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಗಣೇಶೋತ್ಸವ ಸಮಯದಲ್ಲಿ ಸರ್ಕಾರ ಹಾಗೂ ಪೊಲೀಸರು ತೊಂದರೆ ಕೊಡುತ್ತಾರೆ. ಇದು ಹಿಂದೂ ವಿರೋಧಿ ಸರ್ಕಾರ, ಡಿ.ಜೆ. ಹಾಕಿಯೇ ಗಣೇಶೋತ್ಸವ (Ganesha Ustav) ಆಚರಿಸಿ ಎಂದು ಕರೆ ನೀಡಿದ್ದಾರೆ.
ಈ ಕುರಿತು ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು. (Ganesha Ustav) ನಾವು ವರ್ಷಕ್ಕೊಮ್ಮೆ ಡಿ.ಜೆ. ಮೂಲಕ ಗಣೇಶ ಉತ್ಸವ ಆಚರಿಸುತ್ತೇವೆ. ಆದರೆ ಹಿಂದೂ ವಿರೋಧಿ ಕಾಂಗ್ರೇಸ್ ಸರ್ಕಾರ ಪೊಲೀಸರ ಮೂಲಕ ತೊಂದರೆ ಕೊಡುತ್ತಿದೆ. ತುಮಕೂರು ಜಿಲ್ಲೆಯ ಹಿಂದೂ ಸಂಘಟನೆಗಳಿಗೆ ಸರ್ಕಾರ ತೊಂದರೆ ನೀಡುತ್ತಿದೆ. (Ganesha Ustav) ಅದು ಏನಾಗುತ್ತೋ ಆಗಲಿ ಡಿಜೆ ಹಾಕುವುದನ್ನು ನಿಲ್ಲಿಸಬೇಡಿ. ಡಿ.ಜೆ ಹಾಕಿಕೊಂಡೆ ಗಣೇಶೋತ್ಸವ ಆಚರಣೆ ಮಾಡಿ ಎಂದು ಪ್ರಮೋದ್ ಮುತಾಲಿಕ್ ಯುವಕ ಮಂಡಳಿಗೆ ಕರೆ ನೀಡಿದ್ದಾರೆ.
ವಿಡಿಯೋ ಇಲ್ಲಿದೆ ನೋಡಿ: https://fb.watch/utl6hoBdEf/
ಇನ್ನೂ ಡಿ.ಜೆ. ಕುರಿತು ಸುಪ್ರೀಂ ಕೋರ್ಟ್ ಆದೇಶವಿದೆ ಎಂದು ಹೇಳುತ್ತಾರೆ. (Ganesha Ustav) ಆದರೆ ಮಸೀದಿಗಳ ಮೈಕ್ ಗಳಿಗೂ ಸುಪ್ರೀಂ ಕೋರ್ಟ್ ಆದೇಶವಿದೆ. ಮಸೀದಿಯ ಮೈಕ್ ಗಳಿಂದ ಪ್ರತಿನಿತ್ಯ ತೊಂದರೆ ಅನುಭವಿಸುತ್ತಿದ್ದೇವೆ. ಈ ಕುರಿತು ಮಾತನಾಡದಂತಹ ಪೊಲೀಸರು ಗಣೇಶ ಉತ್ಸವಕ್ಕೆ ಡಿಜೆ ಹಾಕಿದರೇ ಮಾತನಾಡುತ್ತಾರೆ. ಹಿಂದೂಗಳು ಮೃದು ಸ್ವಭಾವದರು ಆದ್ದರಿಂದ ಹಿಂದೂಗಳ ಆಚರಣೆಗಳಿಗೆ ಮಾತ್ರ ತೊಂದರೆ ಕೊಡುತ್ತಾರೆ.(Ganesha Ustav) ಆದರೆ ನಾನು ಈ ರೀತಿಯ ಭೇದಭಾವವನ್ನು ಸಹಿಸೊಲ್ಲ. ಸರ್ಕಾರ ಹಾಗೂ ಪೊಲೀಸರು ಸುಪ್ರೀಂ ಕೋರ್ಟ್ ಆದೇಶದ ಬಗ್ಗೆ ಮಾತನಾಡುವುದಾದರೇ ಮೊದಲು ಮಸೀದಿಯ ಮೈಕ್ ತೆಗೆಸಿ ಬಳಿಕ ಡಿಜೆ ಬಗ್ಗೆ ಮಾತನಾಡಿ. ಹಿಂದೂ ಸಂಘಟನೆಗಳು ಯಾವುದನ್ನೂ ಲೆಕ್ಕಿಸಿದೇ ಡಿಜೆ ಹಾಕಿ (Ganesha Ustav) ಗಣೇಶ ಉತ್ಸವ ಆಚರಿಸಿ ಎಂದು ಹಿಂದೂ ಸಂಘಟನೆಗಳಿಗೆ ಕರೆ ನೀಡಿದ್ದಾರೆ. ಏನಾದರೂ ಸಮಸ್ಯೆಯಾದರೇ ಶ್ರೀರಾಮಸೇನೆಯನ್ನು ಸಂಪರ್ಕ ಮಾಡಿ ಎಂದು ತಿಳಿಸಿದ್ದಾರೆ.