Sericulture – ದಿನೇ ದಿನೇ ರೇಷ್ಮೆ ಬೆಳೆಯುವಂತಹ ಬೆಳೆಗಾರರ ಸಂಖ್ಯೆ ಕುಸಿಯುತ್ತಿದೆ. ಆದರೆ ರೇಷ್ಮೆ ಕೃಷಿ ಕೈಗೊಳ್ಳುವಾಗ ರೈತರು ಆಧುನಿಕ, ವೈಜ್ಞಾನಿಕ ತಂತ್ರಜ್ಞಾನ ಅಳವಡಿಸಿಕೊಂಡಾಗ ಲಾಭದಾಯಕ ಬೆಳೆಯನ್ನು ಪಡೆಯಬಹುದು ಎಂದು ಚೆನ್ನಪಟ್ಟಣ ರೇಷ್ಮೆ ತರಬೇತಿ ಕೇಂದ್ರದ ಪ್ರಾಂಶುಪಾಲ ಕುಮಾರ ಸುಬ್ರಮಣ್ಯ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಪೋಲಂಪಲ್ಲಿ ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ರೇಷ್ಮೆ ಇಲಾಖೆ ವತಿಯಿಂದ ಕ್ಷೇತ್ರ ಮಟ್ಟದ ರೇಷ್ಮೇ ಕೃಷಿ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
Sericulture – ವೈಜ್ಞಾನಿಕ ನಿರ್ವಹಣೆಯಿಂದಲೇ ಉತ್ತಮ ಇಳುವರಿ
ಹಿಪ್ಪುನೇರಳೆಗೆ ತಗುಲುವ ಪ್ರಮುಖ ಕೀಟಗಳು, ಅವುಗಳ ಹತೋಟಿ ಕ್ರಮಗಳು ಹಾಗೂ ರೇಷ್ಮೆ ಹುಳು ಸಾಕಾಣಿಕೆ ಮನೆಯಲ್ಲಿ ಅನುಸರಿಸಬೇಕಾದ ನೈರ್ಮಲ್ಯ ಮತ್ತು ನಿರ್ವಹಣಾ ವಿಧಾನಗಳ ಬಗ್ಗೆ ವಿವರವಾದ ಮಾಹಿತಿ ನೀಡಿದರು. ನಮ್ಮ ದೇಶದಲ್ಲಿ ಅತ್ಯಂತ ಲಾಭದಾಯಕ ಕೃಷಿಯಲ್ಲಿ ರೇಷ್ಮೆ ಬೆಳೆ ಸಹ ಒಂದಾಗಿದೆ. ಆದರೆ ಇತ್ತೀಚಿಗೆ ರೇಷ್ಮೆ ಬೆಳೆಯುವುದು ಕಡಿಮೆಯಾಗುತ್ತಿದೆ. ಸರಿಯಾದ ಕ್ರಮಗಳನ್ನು ಅನುಸರಿಸದೇ ಇರುವುದರಿಂದ ಬೆಳೆ ಸರಿಯಾಗಿ ಸಿಗದೇ ರೈತರು ಈ ಬೆಳೆ ಬೆಳೆಯಲು ಆಸಕ್ತಿ ತೋರುತ್ತಿಲ್ಲ ಎಂದು ಹೇಳಬಹುದಾಗಿದೆ. ಆದರೆ ರೈತರು ವೈಜ್ಞಾನಿಕ ಕ್ರಮಗಳನ್ನು ಅನುಸರಿಸುವ ಮೂಲಕ ಉತ್ತಮ ಇಳುವರಿಯೊಂದಿಗೆ ಲಾಭ ಸಹ ಪಡೆಯಬಹುದು. ತಮ್ಮ ಬೆಳೆಗಳಿಗೆ ರೋಗಗಳು ತಗುಲಿದರೇ ಅಥವಾ ಬೆಳೆಗೆ ಸಂಬಂಧಿಸಿದ ಸಂದೇಹಗಳಿದ್ದರೇ ರೇಷ್ಮೆ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ಎಂದು ಸಲಹೆ ನೀಡಿದರು.
Sericulture – ಮಲ್ಬೆರಿ ಕಿಟ್ ಬಳಕೆಗೆ ಪ್ರಾತ್ಯಕ್ಷಿಕೆ
ಬಳಿಕ ಬೆಂಗಳೂರಿನ ಸುಕೃಷಿ ಸಂಸ್ಥೆಯ ಡಾ.ಅಂಬಿಕಾ ಮಾತನಾಡಿ, ಹಿಪ್ಪುನೇರಳೆ ಬೆಳೆಯಲ್ಲಿ ಕಾಣಿಸಿಕೊಳ್ಳುವ ಥ್ರಿಪ್ಸ್ ಮತ್ತು ನುಸಿಯಂತಹ ಕೀಟಗಳ ನಿಯಂತ್ರಣಕ್ಕಾಗಿ ಮಲ್ಬೆರಿ ಕಿಟ್ ಅನ್ನು ಪರಿಣಾಮಕಾರಿಯಾಗಿ ಬಳಸಬೇಕು. ನಮ್ಮ ಸಂಸ್ಥೆ ಸಂಪೂರ್ಣವಾಗಿ ಗಿಡಮೂಲಿಕೆಗಳಿಂದ ತಯಾರಿಸಿದಂತಹ ಉತ್ಪನ್ನಗಳನ್ನು ಅಭಿವೃದ್ದಿಪಡಿಸಿದ್ದು, ಇವು ಬೆಳೆಗಳಿಗೆ ಹಾನಿ ಮಾಡುವುದಿಲ್ಲ. ರಾಸಾಯನಿಕಯುಕ್ತ ಔಷಧಿಗಳನ್ನು ಬಳಸುವ ಬದಲಿಗೆ ಈ ಔಷಧಿಯನ್ನು ಬಳಸಿದರೇ ಉತ್ತಮ ಎಂದು ಹೇಳಿದ ಅವರು. ರೈತರಿಗೆ ಔಷಧಿ ಬಳಕೆಯನ್ನು ಯಾವ ರೀತಿ ಮಾಡಬೇಕು ಎಂಬುದರ ಕುರಿತು ಪ್ರಾತ್ಯಕ್ಷಿಕೆ ಮೂಲಕ ವಿವರಣೆ ನೀಡಿದರು. Read this also : ಭಾರತದ ಯುವಕರಿಗೆ ಬಂಪರ್ ಆಫರ್! ಉಚಿತ AI ತರಬೇತಿ ನೀಡಲು ಮುಂದಾದ EY ಮತ್ತು ಮೈಕ್ರೋಸಾಫ್ಟ್
Sericulture – ಕಾರ್ಯಕ್ರಮದಲ್ಲಿ ಹಾಜರಿದ್ದ ರೈತರು
ಇನ್ನೂ ಕಾರ್ಯಕ್ರಮದಲ್ಲಿ ಹಾಜರಿದ್ದ ರೈತರು ರೇಷ್ಮೆ ಬೆಳೆಯುವಾಗ ತಾವು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಸವಾಲುಗಳ ಬಗ್ಗೆ ತಜ್ಞರ ಬಳಿ ಚರ್ಚೆ ನಡೆಸಿ ಪರಿಹಾರ ಕಂಡುಕೊಂಡರು. ಈ ವೇಳೆ ತಾಲೂಕು ರೇಷ್ಮೆ ಬೆಳೆಗಾರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ವೇಣುಗೋಪಾಲ್, ರೇಷ್ಮೆ ನಿರ್ದೇಶಕರಾದ ಶ್ರೀನಿವಾಸ್, ನಟರಾಜು, ರೇಷ್ಮೆ ಬೆಳಗಾರರ ಸಂಘದ ವೆಂಕಟಶೀವಾರೆಡ್ಡಿ, ಪಿ.ವಿ.ನಾರಾಯಣಪ್ಪ ಸೇರಿದಂತೆ ರೇಷ್ಮೆ ಬೆಳೆಗಾರರು ಹಾಜರಿದ್ದರು.