Siddaramaiah – ಕರ್ನಾಟಕ ಸಿಎಂ ಸಿದ್ದರಾಮಯ್ಯ ರವರಿಗೆ ಮುಡಾ (Muda Scam) ಸಂಕಷ್ಟ ಎದುರಾಗಿದ್ದು, ವಿಪಕ್ಷಗಳು ಸಿದ್ದರಾಮಯ್ಯನವರ (Siddaramaiah) ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ. ರಾಜ್ಯದ ಜನತೆಗೆ ಸಿಎಂ ಸಿದ್ದರಾಮಯ್ಯ ಮೋಸ ಮಾಡುತ್ತಿದ್ದಾರೆ, ಕೂಡಲೇ ಸಿಎಂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ವಿಪಕ್ಷಗಳು ಪಟ್ಟು ಹಿಡಿದಿವೆ. ಆಗಾಗ ಕೆಲವೊಂದು ಸಭೆಗಳಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ನವರೂ ಸಹ ವಿಪಕ್ಷಗಳಿಗೆ ಸರಿಯಾಗಿ ಕೌಂಟರ್ ಕೊಡುತ್ತಿದ್ದಾರೆ. ಇದೀಗ ಸಿಎಂ ಸಿದ್ದರಾಮಯ್ಯನವರು ಮತ್ತೊಮ್ಮೆ ಗುಡುಗಿದ್ದಾರೆ ಜೊತೆಗೆ ಮಾರ್ಮಿಕವಾಗಿಯೂ ನುಡಿದಿದ್ದಾರೆ.
ರಾಜ್ಯ ಬಿಜೆಪಿ ಹಾಗೂ ಜೆಡಿಎಸ್ ನಾಯಕರುಗಳು ಸಿಎಂ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದು, ಸಿದ್ದರಾಮಯ್ಯ (Siddaramaiah) ನಾಡಿನ ಜನರಿಗೆ ಮೋಸ ಮಾಡುತ್ತಿದ್ದಾರೆ ಎಂದು ಗುಡುಗುತ್ತಿದ್ದಾರೆ. ವಿಪಕ್ಷಗಳ ಆರೋಪಗಳಿಗೆ ಸಿಎಂ ಸಿದ್ದರಾಮಯ್ಯ(Siddaramaiah) ಕೌಂಟರ್ ಕೊಟ್ಟಿದ್ದಾರೆ. ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ್ದಾರೆ. ಎಲ್ಲಿಯವರೆಗೂ ನನ್ನ ಮೇಲೆ ನಿಮ್ಮ ಆಶೀರ್ವಾದ ಇರುತ್ತದೆಯೋ ಅಲ್ಲಿಯವರೆಗೂ ನಾನು ಜಗ್ಗಲ್ಲ. ಬಿಜೆಪಿ ಜೆಡಿಎಸ್ ಗೆ ನಾನು ಯಾವುದೇ ಕಾರಣಕ್ಕೂ ಹೆದರಲ್ಲ. ಅವರಿಗೆ ಮಾಡಲು ಬೇರೆ ಕೆಲಸವಿಲ್ಲ. ಆದ್ದರಿಂದ ಬೇಡದ ಹೇಳಿಕೆ ಮತ್ತು ಸುಳ್ಳು ಆರೋಪಗಳನ್ನು ಮಾಡುತ್ತಾರೆ. ಅದಕ್ಕೆಲ್ಲ ನಾನು ತಲೆ ಕೆಡಿಸಿಕೊಳ್ಳಲ್ಲ. ಸತ್ಯಕ್ಕೆ ಜಯ ಸಿಕ್ಕೇ ಸಿಗುತ್ತೆ. ನಾನು (Siddaramaiah) ಅಧಿಕಾರದಲ್ಲಿ ಇರೋವರೆಗೂ ನಿಮ್ಮೆಲ್ಲರ ಕೆಲಸ ಮಾಡುತ್ತೇನೆ. ನಾಡಿನ ಜನತೆಯ ಸೇವೆ ಮಾಡುತ್ತೇನೆ. ನಿಮಗೆ ಗೌರವ ತರುವಂತಹ ಕೆಲಸ ಮಾಡುತ್ತೇನೆ ವಿನಃ ಅಗೌರವ ತರುವಂತಹ ಕೆಲಸ ಮಾಡುತ್ತೇನೆ ಎಂದು (Siddaramaiah) ಸಿಎಂ ಸಿದ್ದರಾಮಯ್ಯ ಮಾರ್ಮಿಕವಾಗಿ ನುಡಿದಿದ್ದಾರೆ.
ಇನ್ನೂ ನಾನು ರಾಜ್ಯದ ಜನರಿಗೆ (Siddaramaiah) ಅನ್ಯಾಯ ಮಾಡಿಲ್ಲ. ಯಾವತ್ತೂ ನಿಮ್ಮಿಂದ 1 ರೂಪಾಯಿನೂ ಲಂಚ ತೆಗೆದುಕೊಂಡಿಲ್ಲ. ನನ್ನ ಮೇಲೆ ವಿಪಕ್ಷಗಳು ಸುಳ್ಳು ಆರೋಪಗಳನ್ನು ಮಾಡುತ್ತಿವೆ. ಕಾಂಗ್ರೇಸ್ ಗ್ಯಾರಂಟಿಗಳಿಂದ ಜನರಿಗೆ ಅನುಕೂಲವಾಗುತ್ತಿದೆ. ಬಿಜೆಪಿಯವರ ಸುಳ್ಳು ಆರೋಪಗಳನ್ನು ನೀವು ಸಹಿಸಿಕೊಳ್ಳುತ್ತೀರಾ ಎಂದು (Siddaramaiah) ಜನರಿಗೆ ಪ್ರಶ್ನೆ ಮಾಡಿದರು. ಇನ್ನೂ ನನ್ನ ಜೀವನ ತೆರೆದ ಪುಸ್ತಕದಂತೆ ಇದೆ. ಬಿಜೆಪಿಯವರು ಇದೀಗ ಮುಡಾ ಪ್ರಕರಣ ಅಂತಾರೆ, ನನ್ನ ಬಾಮೈದಾ ತಂಗಿಗೆ ಅರಶಿಣ ಕುಂಕುಮ ಹಚ್ಚಿ ಕೊಟ್ಟ ಜಮೀನಿನನ್ನು ದೊಡ್ಡದು (Siddaramaiah) ಮಾಡಿದ್ದಾರೆ. ಅದಕ್ಕೆ ಆ ಸೈಟ್ ಬೇಡವೇ ಬೇಡಾ ಅಂತಾ ವಾಪಸ್ಸು ಕೊಟ್ಟಿದ್ದೇನೆ. ನಾನಿನ್ನೂ ಬೇರೆ ಮನೆಯಲ್ಲಿದ್ದೇನೆ. ನನಗೆ ಸ್ವಂತ ಮನೆ ಸಹ ಇಲ್ಲ. ಈಗ ಮನೆ ಕಟ್ಟುತ್ತಿದ್ದೇನೆ. ರಾಜ್ಯದ ಜನತೆಯೇ ನನ್ನ ಮಾಲೀಕರು. ನೀವೇ ಹೇಳಿ ನಾನು ತಪ್ಪು ಮಾಡಿದ್ದೀನಾ ಎಂದು (Siddaramaiah) ಪ್ರಶ್ನೆ ಮಾಡಿದ್ದಾರೆ.
ಬಿಜೆಪಿಯ ಹಿರಿಯ ನಾಯಕ ಯಡಿಯೂರಪ್ಪ, ಅವರ ಮಗ ವಿಜಯೇಂದ್ರ, ಕೇಂದ್ರ ಸಚಿವ ಕುಮಾರಸ್ವಾಮಿ ಸೇರಿದಂತೆ ಅನೇಕರಿಗೆ ನನ್ನನ್ನು ಕಂಡರೇ ಹೊಟ್ಟೆಯುರಿ. ಈ ಕಾರಣದಿಂದಲೇ ನನ್ನ (Siddaramaiah) ಮೇಲೆ ಇಲ್ಲಸಲ್ಲದ ಆರೋಪ ಮಾಡ್ತಿದ್ದಾರೆ. ಮೂರು ಬಾರಿ ಪ್ರಧಾನಿಯಾಗಿರುವ ಮೋದಿ ಕೊಟ್ಟ ಮಾತಿನಂತೆ ನಡೆದಿದ್ದಾರೆಯೇ? ಒಂದು ವರ್ಷ ಪ್ರಧಾನಿಯಾಗಿ ಮೋಡಿ ಬಡವರ ಪರ ಒಂದು ಯೋಜನೆಯಾದರೂ ಜಾರಿ ಮಾಡಿದ್ದಾರೆಯೇ, ರಾಜ್ಯಕ್ಕೆ (Siddaramaiah) ವಿಶೇಷ ಅನುದಾನದ ಜೊತೆಗೆ ನೀರಾವರಿ ಯೋಜನೆಗಾಗಿ ಸುಮಾರು 5495 ಕೋಟಿ ನೀಡಲು ನಿರ್ಮಲಾ ಸೀತಾರಾಮನ್ ಶಿಫಾರಸ್ಸು ಮಾಡಿದ್ದು ಈ ಹಣ ಸಹ ಕೊಟ್ಟಿಲ್ಲ. ಈ ರೀತಿಯಾಗಿ ರಾಜ್ಯಕ್ಕೆ ಘೋಷಣೆ ಮಾಡಿದ ಅನುದಾನ ಕೊಟ್ಟೆ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.