ಸಿನಿಮಾಗಳಲ್ಲಿ ಹೀರೋ-ಹೀರೋಯಿನ್ ನಡುರಸ್ತೆಯಲ್ಲೋ ಅಥವಾ ಬಸ್ ನಿಲ್ದಾಣದಲ್ಲೋ ದಿಢೀರ್ ಮದುವೆ ಆಗೋದನ್ನ ನಾವು ನೋಡಿದೀವಿ. ಆದ್ರೆ ರಿಯಲ್ ಲೈಫ್‌ನಲ್ಲೂ ಇಂಥದ್ದೊಂದು ಘಟನೆ ನಡೆದಿದೆ ಅಂದ್ರೆ ನೀವು ನಂಬ್ತೀರಾ? ಹೌದು, ಶಾಪಿಂಗ್ ಮಾಲ್ ಒಂದರಲ್ಲಿ ಯುವಕನೊಬ್ಬ ಎಲ್ಲರೆದುರು ಪ್ರಿಯತಮೆಗೆ (Video) ಪ್ರಪೋಸ್ ಮಾಡಿ, ಕ್ಷಣಾರ್ಧದಲ್ಲಿ ಆಕೆಯ ಹಣೆಗೆ ಕುಂಕುಮವಿಟ್ಟು, ತಾಳಿ ಕಟ್ಟಿ ಮದುವೆಯಾಗಿದ್ದಾನೆ.

ಯಾವುದೇ ಮಂಟಪವಿಲ್ಲದೇ, ಪುರೋಹಿತರಿಲ್ಲದೇ ಮಾಲ್‌ನಲ್ಲೇ ನಡೆದ ಈ ‘ಇನ್‌ಸ್ಟಂಟ್ ಮದುವೆ’ಯ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಅಷ್ಟಕ್ಕೂ ಅಲ್ಲಿ ನಡೆದಿದ್ದೇನು? ಇಲ್ಲಿದೆ ರೋಚಕ ಸ್ಟೋರಿ.
Video – ಮಾಲ್ ಆಯ್ತು ಕಲ್ಯಾಣ ಮಂಟಪ!
ಸಾಮಾನ್ಯವಾಗಿ ಹುಡುಗರು ತಮ್ಮ ಇಷ್ಟದ ಹುಡುಗಿಗೆ ಮಾಲ್ ಅಥವಾ ಪಾರ್ಕ್‌ನಲ್ಲಿ ಪ್ರಪೋಸ್ ಮಾಡುವುದನ್ನು ನಾವು ನೋಡಿದ್ದೇವೆ. ಆದರೆ, ಉತ್ತರ ಪ್ರದೇಶದ ಘಾಜಿಯಾಬಾದ್‌ನಲ್ಲಿ ನಡೆದ ಘಟನೆ ಕೊಂಚ ಭಿನ್ನ ಹಾಗೂ ವಿಚಿತ್ರವಾಗಿದೆ. ಗಾಜಿಯಾಬಾದ್‌ನ ‘ಗೌರ್ ಸೆಂಟ್ರಲ್ ಮಾಲ್’ನಲ್ಲಿ (Gaur Central Mall) ಯುವಕನೊಬ್ಬ ತನ್ನ ಪ್ರಿಯತಮೆಗೆ ಮಂಡಿಯೂರಿ ಪ್ರಪೋಸ್ ಮಾಡಿದ್ದಾನೆ. ಇದಕ್ಕೆ ಯುವತಿಯೂ ಒಪ್ಪಿಗೆ ಸೂಚಿಸಿ ಆತನ ಮುಂದೆ ಮಂಡಿಯೂರಿ ಕುಳಿತಿದ್ದಾಳೆ. ಇಲ್ಲಿಯವರೆಗೂ ಎಲ್ಲವೂ ಸಿನಿಮೀಯ ರೀತಿಯಲ್ಲೇ ಇತ್ತು. ಆದರೆ ಆ ನಂತರ ನಡೆದದ್ದೇ ಅಚ್ಚರಿ! ಪ್ರಪೋಸ್ ಮಾಡಿದ ತಕ್ಷಣ ಯುವಕ ಜೇಬಿನಿಂದ ಕುಂಕುಮ ತೆಗೆದು ಆಕೆಯ ಹಣೆಗೆ ಇಟ್ಟಿದ್ದಲ್ಲದೆ, ಅಲ್ಲಿಯೇ ಆಕೆಯ ಕತ್ತಿಗೆ ತಾಳಿ ಕಟ್ಟಿದ್ದಾನೆ!
ಸ್ನೇಹಿತರ ಸಮ್ಮುಖದಲ್ಲಿ ದಿಢೀರ್ ಮದುವೆ
ಈ ಜೋಡಿಯ ಸುತ್ತಲೂ ಹತ್ತಕ್ಕೂ ಹೆಚ್ಚು ಸ್ನೇಹಿತರು ಜಮಾಯಿಸಿದ್ದರು. ಯುವಕ ತಾಳಿ ಕಟ್ಟುತ್ತಿದ್ದಂತೆ ಸ್ನೇಹಿತರು ಚಪ್ಪಾಳೆ ತಟ್ಟಿ, ಕೂಗುತ್ತಾ ಜೋಡಿಯನ್ನು ಹುರಿದುಂಬಿಸಿದ್ದಾರೆ. ನಂತರ ನವಜೋಡಿ ಪರಸ್ಪರ ಆಲಿಂಗನ ಮಾಡಿಕೊಂಡು ಸಂಭ್ರಮಿಸಿದ್ದಾರೆ. ಸದ್ಯ ಈ 2 ನಿಮಿಷದ (Video) ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ (Social Media) ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ನೆಟ್ಟಿಗರ ರಿಯಾಕ್ಷನ್ ಹೇಗಿದೆ?
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ಕಮೆಂಟ್ ಬಾಕ್ಸ್‌ನಲ್ಲಿ ನೆಟ್ಟಿಗರ ಕಮೆಂಟ್ಗಳ ಸುಲ್ ಮಳೆಯೇ ಸುರಿದಿದೆ. ಕೆಲವರು ಇದನ್ನು ತಮಾಷೆಯಾಗಿ ಸ್ವೀಕರಿಸಿದರೆ, ಇನ್ನು ಕೆಲವರು ಗಂಭೀರವಾಗಿ (Video) ಟೀಕಿಸಿದ್ದಾರೆ.
- ಕಾಮಿಡಿ ಕಮೆಂಟ್ಸ್: ಒಬ್ಬ ಬಳಕೆದಾರರು, “ಯಾರಾದರೂ ಅಲ್ಲೇ ಒಂದು ಲೈಟರ್ ಹಚ್ಚಿಬಿಟ್ಟಿದ್ದರೆ ಸಪ್ತಪದಿ ಕೂಡ ತುಳಿದು ಬಿಡಬಹುದಿತ್ತು” ಎಂದು ಕಿಚಾಯಿಸಿದ್ದಾರೆ. ಇನ್ನೊಬ್ಬರು, “ಇನ್ಮುಂದೆ ಗೌರ್ ಸೆಂಟ್ರಲ್ ಮಾಲ್ ಅನ್ನು ‘ಗೌರ್ ಸೆಂಟ್ರಲ್ ಮಂದಿರ’ ಎಂದು ಕರೆಯಿರಿ” ಎಂದು ತಮಾಷೆ ಮಾಡಿದ್ದಾರೆ.

- ಬೆಲೆ ಏರಿಕೆ ಎಫೆಕ್ಟ್: “ದಿನದಿಂದ ದಿನಕ್ಕೆ ಮದುವೆ ಖರ್ಚು ಮತ್ತು ಬೆಲೆ ಏರಿಕೆ ಹೆಚ್ಚಾಗುತ್ತಿದೆ. ಈ ಕಾಲದಲ್ಲಿ ಇಂತಹ ಸಿಂಪಲ್ ಮದುವೆಯೇ ಬೆಸ್ಟ್” ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here
ಸಂಪ್ರದಾಯವಾದಿಗಳ ಕೆಂಗಣ್ಣು!
ಆದರೆ, ಎಲ್ಲರೂ ಈ ಮದುವೆಯನ್ನು ಸ್ವಾಗತಿಸಿಲ್ಲ. ಅನೇಕರು ಈ ನಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. “ಮದುವೆ ಎನ್ನುವುದು ಒಂದು ಪವಿತ್ರ ಸಂಸ್ಕಾರ. ಅದನ್ನೀಗ ತಮಾಷೆಯಾಗಿ ಮಾಡಲಾಗಿದೆ. ಇಲ್ಲಿ ಹಿರಿಯರಿಲ್ಲ, ಪೋಷಕರಿಲ್ಲ, ಕೇವಲ ಕಾಮದ ಬಿರುಗಾಳಿಯಲ್ಲಿ ಇಬ್ಬರೂ ಕೊಚ್ಚಿ ಹೋಗುತ್ತಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ. Read this also : 40ರ ಅಂಕಲ್, 19ರ ಯುವತಿ ಲವ್ ಸ್ಟೋರಿ: ಪ್ರೇಮಲೋಕದಲ್ಲಿ ತೇಲಾಡುವಾಗಲೇ ನಡೆಯಿತು ಘನಘೋರ!
“ಕುಟುಂಬದ ಒಪ್ಪಿಗೆ, ಎರಡು ಕುಟುಂಬಗಳ ಒಕ್ಕೂಟ ಮದುವೆಯ ತಳಹದಿ. ಮುಂದೆ ಇವರಿಬ್ಬರ ನಡುವೆ ಜಗಳ ಬಂದರೆ ಸರಿಪಡಿಸುವವರು ಯಾರು? ಮಾಲ್‌ನಲ್ಲಿ ಏನ್ ಬೇಕಾದರೂ ಆಗಬಹುದು, ಆದರೆ ಅದನ್ನು ಮದುವೆ ಎನ್ನಲು ಸಾಧ್ಯವಿಲ್ಲ. ಇದು ಮದುವೆ ಎಂಬ ವ್ಯವಸ್ಥೆಗೆ ಮಾಡಿದ ಅವಮಾನ” ಎಂದು ಹಲವರು ಗಂಭೀರವಾಗಿ ಪ್ರಶ್ನಿಸಿದ್ದಾರೆ.
