Shocking News – ಇಂದಿನ ಆಧುನಿಕ ಕಾಲದಲ್ಲಿ ಎಷ್ಟು ಬೇಗ ಪ್ರೀತಿಸಿಕೊಳ್ಳುತ್ತಾರೋ, ಅಷ್ಟೇ ಬೇಗ ಬ್ರೇಕಪ್ ಸಹ ಆಗುತ್ತಾರೆ. ಕೆಲವೊಂದು ಘಟನೆಗಳಲ್ಲಿ ಯುವತಿ ಅಥವಾ ಯುವಕ ಮೋಸ ಮಾಡುವಂತಹ ಘಟನೆಗಳೂ ಸಹ ನಡೆದಿರುತ್ತವೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ತನ್ನನ್ನು ಪ್ರೀತಿಸಿದ ಯುವಕ ಇದೀಗ ಬೇರೊಬ್ಬ ಯುವತಿಯನ್ನು ಮದುವೆಯಾಗಲು ಮುಂದಾಗಿದ್ದಾನೆ. ಇದರಿಂದ ಕೋಪಗೊಂಡ ಯುವತಿ ತನ್ನ ಪ್ರಿಯಕರನ ಖಾಸಗಿ ಭಾಗವನ್ನು ಕತ್ತರಿಸಿದ ಘಟನೆ ನಡೆದಿದೆ.

ಅಂದಹಾಗೆ ಈ ಘಟನೆ ಉತ್ತರಪ್ರದೇಶದ ಮುಜಾಫರ್ ನಗರದಲ್ಲಿ ನಡೆದಿದೆ ಎನ್ನಲಾಗಿದೆ. ಜೋಡಿಯೊಂದು ಸುಮಾರು 8 ವರ್ಷಗಳ ಕಾಲ ಪ್ರೀತಿಸಿಕೊಂಡಿದ್ದಾರೆ. ಆದರೆ ಯುವಕ ತನ್ನ ಪ್ರೀತಿಗೆ ಕೈಕೊಟ್ಟು ಬೇರೊಬ್ಬ ಯುವತಿಯನ್ನು ಮದುವೆಯಾಗಲು ಮುಂದಾಗಿದ್ದಾನೆ. ಈ ವಿಚಾರ ಯುವತಿಗೆ ತಿಳಿದು, ತನ್ನ ಪ್ರಿಯಕರನ ವಿರುದ್ದ ಸೇಡು ತೀರಿಸಿಕೊಳ್ಳು ನಿರ್ಧಾರ ಮಾಡಿದ್ದಾಳೆ. ತಾನು ಮಾಡಿದ ಪ್ಲಾನ್ ನಂತೆ ಯುವಕನೊಂದಿಗೆ ಕೊನೆಯ ಬಾರಿ ಮಾತನಾಡುವುದಾಗಿ ಕರೆದು ಅಲ್ಲಿ ಯುವಕನ ಖಾಸಗಿ ಭಾಗಗಳನ್ನು ಕತ್ತರಿಸಿದ್ದಾಳೆ. ಜೊತೆಗೆ ಅದೇ ಆಯುಧದಿಂದ ತಾನು ಸಹ ಆತ್ಮಹತ್ಯೆಗೆ ಮಾಡಿಕೊಳ್ಳಲು ಯತ್ನಿಸಿದ್ದಾಳೆ. ಈ ವೇಳೆ ಯುವಕ ಗಾಯಗೊಂಡಿದ್ದು, ಆತನಿಗೆ ರಕ್ತಸ್ರವಾವಾಗುತ್ತಿದ್ದರೂ ಯುವತಿಯ ಜೀವ ಉಳಿಸಲು ಆಕೆಯ ಕೈಗೆ ಬಟ್ಟೆ ಕಟ್ಟಿ ಕೂಡಲೇ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾನೆ. ಸ್ಥಳಕ್ಕೆ ಬಂದ ಪೊಲೀಸರು ಇಬ್ಬರನ್ನೂ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ ಎಂದು ತಿಳಿದುಬಂದಿದೆ.
ಸಂಬಂಧಪಟ್ಟ ವಿಡಿಯೋ ಇಲ್ಲಿದೆ ನೋಡಿ: Click Here
ಪೊಲೀಸ್ ಮೂಲಗಳ ಪ್ರಕಾರ ತನ್ನನ್ನು ಬಿಟ್ಟು ಬೇರೊಬ್ಬ ಯುವತಿಯನ್ನು ಮದುವೆಯಾಗಲು ಮುಂದಾಗಿದ್ದ ಯುವಕನನ್ನು ಕೊನೆಯ ಬಾರಿ ಭೇಟಿಯಾಗುವಂತೆ ಯುವತಿ ಕೇಳಿದ್ದಾಳೆ. ಅದರಂತೆ ಅತಿಥಿ ಗೃಹವೊಂದರಲ್ಲಿ ಭೇಟಿಯಾಗಿ, ಹರಿತವಾದ ಆಯುಧದಿಂಧ ಹಲ್ಲೆ ಮಾಡಿದ್ದಾಳೆ. ಇದೇ ಸಮಯದಲ್ಲಿ ಪ್ರಿಯಕರನ ಖಾಸಗಿ ಭಾಗಗಳನ್ನು ಕತ್ತರಿಸಿ ನಂತರ ತನ್ನ ಕೈ ಕತ್ತರಿಸಿಕೊಂಡು ಆತ್ಮಹತ್ಯೆಗೆ ಮುಂದಾಗಿದ್ದಳಂತೆ. ನಂತರ ಯುವಕ ಯುವತಿಯನ್ನು ರಕ್ಷಣೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಪೊಲೀಸರು ಸ್ಥಳಕ್ಕೆ ಹೋಗಿ ಇಬ್ಬರನ್ನೂ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿದ್ದಾರೆ. ಯುವತಿ ಈ ಘಟನೆ ಅತಿಥಿ ಗೃಹದೊಳಗೆ ನಡೆದಿದೆ ಎಂದರೇ, ಯುವಕ ಕಾರಿನಲ್ಲಿ ನಡೆದಿದೆ ಎಂದು ಹೇಳಿದ್ದಾನಂತೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.