ಪ್ರೀತಿ ಎಂಬ ಹೆಸರಲ್ಲಿ ನಂಬಿಸಿ, (Love Marriage) ಅಗ್ನಿಸಾಕ್ಷಿಯಾಗಿ ಕೈಹಿಡಿದ ಪತ್ನಿಯನ್ನೇ ಪತಿಯೊಬ್ಬ ಕ್ರೂರವಾಗಿ ಹತ್ಯೆ ಮಾಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನಲ್ಲಿ ಸಂಭವಿಸಿದೆ. ಆರು ವರ್ಷಗಳ ಹಿಂದೆ ಇಡೀ ಜಗತ್ತನ್ನೇ ಎದುರು ಹಾಕಿಕೊಂಡು ‘ನಿನ್ನ ಬಿಟ್ಟರೆ ನನಗೆ ಬೇರೆ ಯಾರು ಇಲ್ಲ’ ಎಂದು ಸಿನಿಮಾ ಮಾದರಿಯಲ್ಲಿ ಮದುವೆಯಾಗಿದ್ದ ಈತ, ಈಗ ಎರಡನೇ ಮದುವೆಯ ವ್ಯಾಮೋಹಕ್ಕೆ ಬಿದ್ದು ಅದೇ ಪತ್ನಿಯ ಬಾಳನ್ನೇ ಮುಗಿಸಿದ್ದಾನೆ.

Love Marriage – ಪ್ರೀತಿ ಎಂಬ ಮಾಯೆ: ಸಿನಿಮಾ ಸ್ಟೈಲ್ ಲವ್ ಸ್ಟೋರಿ
ಬೊಮ್ಮನಕಟ್ಟೆ ಪಂಡರಹಳ್ಳಿ ಕ್ಯಾಂಪ್‌ನ ನಿವಾಸಿ ಗೋಪಿ (28) ಅಡಿಕೆ ಕೊಯ್ಲು ಮೇಸ್ತ್ರಿಯಾಗಿ ಕೆಲಸ ಮಾಡುತ್ತಿದ್ದ. ಈತ ಡಿ.ಬಿ. ಹಳ್ಳಿಯ ಚಂದನಬಾಯಿ (23) ಎಂಬಾಕೆಯನ್ನು ಶಾಲಾ ದಿನಗಳಿಂದಲೂ ಪ್ರೀತಿಸುತ್ತಿದ್ದ. ಆದರೆ ಜಾತಿ ಬೇರೆಯಾಗಿದ್ದರಿಂದ ಮನೆಯವರು ಇವರ ಮದುವೆಗೆ ಒಪ್ಪಿರಲಿಲ್ಲ. ಚಂದನಬಾಯಿಗೆ ಬೇರೊಬ್ಬ ಯುವಕನ ಜೊತೆ ನಿಶ್ಚಿತಾರ್ಥ ಕೂಡ ನಡೆದಿತ್ತು.
ಆದರೆ ಹಠ ಬಿಡದ ಗೋಪಿ, ಸಿನಿಮೀಯ ಮಾದರಿಯಲ್ಲಿ ಚಂದನಬಾಯಿಯನ್ನು ಕಾರಿನಲ್ಲಿ ಅಪಹರಿಸಿಕೊಂಡು ಹೋಗಿ ಮದುವೆಯಾಗಿದ್ದ. “ನನ್ನವನು ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ” ಎಂದು ಹೆತ್ತವರನ್ನು ಎದುರು (Love Marriage) ಹಾಕಿಕೊಂಡು ಬಂದಿದ್ದ ಚಂದನಬಾಯಿಗೆ, ಅಂದು ಪ್ರೀತಿಯ ನಾಟಕವಾಡಿದವನೇ ಮುಂದೆ ಯಮನಾಗುತ್ತಾನೆ ಎಂಬ ಕಲ್ಪನೆಯೂ ಇರಲಿಲ್ಲ.
ಹಾದಿ ತಪ್ಪಿದ ಪತಿ: ಸಂಸಾರದಲ್ಲಿ ಬಿರುಗಾಳಿ
ಕಳೆದ 6 ವರ್ಷಗಳಿಂದ ಸುಂದರವಾಗಿ ಸಾಗುತ್ತಿದ್ದ ಇವರ ಸಂಸಾರದಲ್ಲಿ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಆದರೆ, ಗೋಪಿ ಇತ್ತೀಚೆಗೆ ಕ್ಲಬ್ ಸಂಸ್ಕೃತಿಗೆ ಮಾರುಹೋಗಿದ್ದ. ಅಲ್ಲಿನ ಯುವತಿಯರ ಜೊತೆ ಅಕ್ರಮ ಸಂಬಂಧ ಹೊಂದಿದ್ದಲ್ಲದೆ, ಅವರ ಹೆಸರನ್ನು ತನ್ನ ಮೈಮೇಲೆ ಹಚ್ಚೆ (Tattoo) ಹಾಕಿಸಿಕೊಂಡಿದ್ದ. ಇದನ್ನು ಚಂದನಬಾಯಿ ಪ್ರಶ್ನಿಸಿದಾಗಲೆಲ್ಲ ದಂಪತಿಗಳ ನಡುವೆ ಜಗಳವಾಗುತ್ತಿತ್ತು. “ನಾನು ಎರಡನೇ ಮದುವೆಯಾಗುತ್ತೇನೆ, ನೀನು ಒಪ್ಪಿಗೆ ನೀಡಲೇಬೇಕು” ಎಂದು ಗೋಪಿ ಪತ್ನಿಗೆ (Love Marriage) ನಿರಂತರವಾಗಿ ಮಾನಸಿಕ ಹಿಂಸೆ ನೀಡುತ್ತಿದ್ದ ಎನ್ನಲಾಗಿದೆ.
ಭಾನುವಾರ ನಡೆದ ಆ ಘೋರ ಕೃತ್ಯ!
ಕಳೆದ ಭಾನುವಾರ ಸಂಜೆ ಗೋಪಿ ತನ್ನ ಕ್ರೂರ ಮುಖವನ್ನು ತೋರಿಸಿದ್ದಾನೆ. ಪತ್ನಿ ಜೊತೆ ಮಾತನಾಡಬೇಕೆಂದು ನೆಪ ಮಾಡಿ ಮನೆಯಲ್ಲಿದ್ದ ಚಂದನಬಾಯಿಯ ತಂಗಿ ಮತ್ತು ಮಕ್ಕಳನ್ನು ಹೊರಗೆ ಕಳುಹಿಸಿದ್ದಾನೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಮತ್ತೆ ಎರಡನೇ ಮದುವೆಯ ವಿಷಯ ತೆಗೆದು ಜಗಳವಾಡಿದ್ದಾನೆ. ಚಂದನಬಾಯಿ ಇದಕ್ಕೆ (Love Marriage) ಪ್ರತಿರೋಧ ವ್ಯಕ್ತಪಡಿಸಿದಾಗ, ಸಿಟ್ಟಿಗೆದ್ದ ಗೋಪಿ ಆಕೆಯ ಕತ್ತು ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. Read this also : ವೃದ್ಧ ದಂಪತಿಯ ಶುದ್ಧ ಪ್ರೀತಿ: ಮಡದಿಯ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ನೀಡಿದ ವೃದ್ಧ ವ್ಯಕ್ತಿ – ನೆಟ್ಟಿಗರ ಮನಗೆದ್ದ ವಿಡಿಯೋ!
ಪೊಲೀಸರ ಮುಂದೆ ತಪ್ಪೊಪ್ಪಿಕೊಂಡ ಪಾಪಿ
ಕೊಲೆ ಮಾಡಿದ ಬಳಿಕ ಏನೂ ತಿಳಿಯದವನಂತೆ ನಾಟಕವಾಡಿದ್ದ ಗೋಪಿಯನ್ನು (Love Marriage) ಹೊಳೆಹೊನ್ನೂರು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಸಲಿ ಸತ್ಯ ಹೊರಬಂದಿದೆ. ಅಂದಹಾಗೆ, ಈ ಗೋಪಿ ಈ ಹಿಂದೆ ಅಪ್ರಾಪ್ತ ವಯಸ್ಕರ ಪ್ರೀತಿಗೆ ಸಹಕಾರ ನೀಡಿದ ಆರೋಪದ ಮೇಲೆ ಪೋಕ್ಸೋ (POCSO) ಪ್ರಕರಣದಡಿ ಜೈಲು ವಾಸ ಅನುಭವಿಸಿದ್ದ ಕಿರಾತಕ.

ಅನಾಥರಾದ ಮಕ್ಕಳು, ಹೆತ್ತವರ ಕಣ್ಣೀರು
ಪ್ರೀತಿಸಿ ಮದುವೆಯಾದ ಪತ್ನಿಯನ್ನೇ ಕೊಂದು ಗೋಪಿ ಈಗ ಮತ್ತೆ ಜೈಲು ಪಾಲಾಗಿದ್ದಾನೆ. ಇತ್ತ ಮಗಳ ಸಾವಿನಿಂದ ಹೆತ್ತವರು ಆಕ್ರಂದನ ಮಾಡುತ್ತಿದ್ದರೆ, ಅಮ್ಮನೂ ಇಲ್ಲದೆ, ಅಪ್ಪನೂ ಹತ್ತಿರವಿಲ್ಲದೆ ಇಬ್ಬರು ಪುಟ್ಟ ಮಕ್ಕಳು ಅನಾಥರಾಗಿ ಬೀದಿಗೆ ಬಿದ್ದಿರುವುದು ನೋಡುವವರ ಕಣ್ಣಲ್ಲಿ ನೀರು ತರಿಸುತ್ತಿದೆ.
