School – ಮದ್ಯದ ಮತ್ತಿನಲ್ಲಿ (alcohol) ತಾವು ಏನು ಮಾಡುತ್ತಿದ್ದೇವೆ ಎಂಬ ಅರಿವೇ ಕಳೆದುಕೊಂಡು ಕೆಲವರು ದುರ್ವರ್ತನೆ ತೋರುತ್ತಾರೆ. ಇಂತಹದ್ದೇ ಒಂದು ಆಘಾತಕಾರಿ ಘಟನೆ ಮೀರತ್‌ನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಕುಡುಕನೊಬ್ಬ ಶಾಲೆಗೆ ನುಗ್ಗಿ, ತರಗತಿಯಲ್ಲಿ ಗದ್ದಲ ಮಾಡಿದ್ದಲ್ಲದೇ, ಮಕ್ಕಳನ್ನು ಓಡಿಸಿ, ಶಿಕ್ಷಕರಿಗೆ ಬೆದರಿಕೆ ಹಾಕಿದ್ದಾನೆ. ಈ ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ.
School – ಘಟನೆಯ ವಿವರ:
ಮಾರ್ಚ್ 16ರಂದು ನಡೆದ ಈ ಘಟನೆಯಲ್ಲಿ, ಮದ್ಯದ ಪ್ರಭಾವದಲ್ಲಿದ್ದ ಕುಡುಕನೊಬ್ಬ ಶಾಲೆಗೆ ನುಗ್ಗಿ ತರಗತಿಯೊಳಗೆ ನೇರವಾಗಿ ಪ್ರವೇಶಿಸಿದ್ದಾನೆ. ಅವನು ತನ್ನ ಶರ್ಟ್ ಬಿಚ್ಚಿಕೊಂಡು, ಮೇಜಿನ ಮೇಲೆ ಕುಳಿತು ಶಿಕ್ಷಕರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ. ಇದರ ಜೊತೆಗೆ, ಅವನು ತರಗತಿಯಲ್ಲಿದ್ದ ಮಕ್ಕಳನ್ನು ಓಡಿಸಿ, ಶಿಕ್ಷಕರೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ.

ಈ ಘಟನೆಯ ವಿಡಿಯೋವನ್ನು @HateDetector ಎಂಬ ಎಕ್ಸ್ (Twitter) ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ, ಸೊಂಟದಲ್ಲಿ ಮದ್ಯದ ಬಾಟಲಿ ಹಾಗೂ ಕೈಯಲ್ಲಿ ಶರ್ಟ್ ಹಿಡಿದುಕೊಂಡು ಶಾಲೆಗೆ ನುಗ್ಗಿದ ಕುಡುಕನ ದೃಶ್ಯಗಳು ಕಾಣುತ್ತವೆ. ಈ ವಿಡಿಯೋ 3.2 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲ್ಪಟ್ಟಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಬಹಳಷ್ಟು ಚರ್ಚೆಗೆ ಕಾರಣವಾಗಿದೆ.
School – ವಿಡಿಯೋ ಲಿಂಕ್: ಘಟನೆಯ ವಿಡಿಯೋ ನೋಡಿ
ಕಳೆದ ಮಾರ್ಚ್ 16 ರಂದು ಹಂಚಿಕೊಳ್ಳಲಾದ ಈ ವಿಡಿಯೋ 3.2 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಕಂಡಿದೆ. ಜೊತೆಗೆ ವಿವಿಧ ರೀತಿಯ ಕಾಮೆಂಟ್ ಗಳು ಹರಿದುಬರುತ್ತಿವೆ. ಓರ್ವ ನೆಟ್ಟಿಗ ಈ ರೀತಿಯ ಘಟನೆಗಳು ಉತ್ತರ ಪ್ರದೇಶ ಹಾಗೂ ಬಿಹಾರದಲ್ಲಿ ನಡೆಯುತ್ತಿರುತ್ತವೆ, ಅಲ್ಲಿಯೇ ಇದೆಲ್ಲವೂ ಸಾಧ್ಯ ಎಂತಲೂ, ಮತ್ತೋರ್ವ ಇಂತಹವರನ್ನು ಕೂಡಲೇ ಒದ್ದು ಒಳಗೆ ಹಾಕಿ ಶಿಕ್ಷೆ ನೀಡಬೇಕು ಎಂತಲೂ ಮತ್ತೆ ಕೆಲವರು ದೇಶದಲ್ಲಿ ರೌಡಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂತಲೂ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ಅದರ ಜೊತೆಗೆ ಬಹುತೇಕರು ಸರ್ಕಾರ ಈ ರೀತಿಯ ಘಟನೆಗಳನ್ನು ತಡೆಯಲು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತಿದ್ದಾರೆ.