ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದ, ಕೋಝಿಕ್ಕೋಡ್ ಮೂಲದ ದೀಪಕ್ ಎಂಬುವವರ ಆತ್ಮ**ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ದೊಡ್ಡ ಬೆಳವಣಿಗೆಯಾಗಿದೆ. ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಸುಳ್ಳು ಆರೋಪ ಮಾಡಿ ವಿಡಿಯೋ ಹರಿಬಿಟ್ಟಿದ್ದ ಶಿಮ್ಜಿತಾ ಮುಸ್ತಫಾಳನ್ನು (Shimjitha arrested) ಪೊಲೀಸರು ಕೊನೆಗೂ ಬಂಧಿಸಿದ್ದಾರೆ.

Shimjitha arrested – ಅಡಗಿದ್ದವಳು ಸಿಕ್ಕಿಬಿದ್ದಿದ್ದು ಹೇಗೆ?
ಪ್ರಕರಣ ದಾಖಲಾದ ದಿನದಿಂದ ತಲೆಮರೆಸಿಕೊಂಡಿದ್ದ ಶಿಮ್ಜಿತಾಳನ್ನು ವಡಕಾರದಲ್ಲಿರುವ ಆಕೆಯ ಸಂಬಂಧಿಕರ ಮನೆಯಲ್ಲಿ ಪೊಲೀಸರು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ. ಘಟನೆ ನಡೆದು ಸುಮಾರು 6 ದಿನಗಳ ನಂತರ ಈ ಬಂಧನ ನಡೆದಿದೆ. ಈಕೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಕೋಝಿಕ್ಕೋಡ್ ಜಿಲ್ಲಾ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೂಡ ಸಲ್ಲಿಸಿದ್ದಳು. ಆದರೆ, ಪೊಲೀಸರು ಆಕೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಸಲಿಗೆ ನಡೆದಿದ್ದೇನು?
ಕಳೆದ ಶುಕ್ರವಾರ ಪಯ್ಯನ್ನೂರಿನಲ್ಲಿ ಬಸ್ ಪ್ರಯಾಣ ಮಾಡುತ್ತಿದ್ದ ಸಂದರ್ಭದಲ್ಲಿ, ದೀಪಕ್ ಎಂಬ ವ್ಯಕ್ತಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಶಿಮ್ಜಿತಾ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದಳು. ಈ ವಿಡಿಯೋ ಕೇವಲ ಒಂದೇ ದಿನದಲ್ಲಿ 2.3 ಮಿಲಿಯನ್ ವೀಕ್ಷಣೆ ಪಡೆದಿತ್ತು. ವಿಡಿಯೋ ವೈರಲ್ (Shimjitha arrested) ಆಗಿ ಸಮಾಜದಲ್ಲಿ ಅವಮಾನಕ್ಕೊಳಗಾದ ದೀಪಕ್, ತಾನು ಅಮಾಯಕ ಎಂದು ಹೇಳುತ್ತಿದ್ದರೂ ಯಾರೂ ನಂಬದಿದ್ದಾಗ ಮಾನಸಿಕವಾಗಿ ಕುಸಿದು ಆತ್ಮ**ಹತ್ಯೆ ಮಾಡಿಕೊಂಡಿದ್ದರು.

ಸಿಸಿಟಿವಿ ಮತ್ತು ಸಾಕ್ಷ್ಯಗಳು ಹೇಳುವುದೇನು?
ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದು, ಬಸ್ಸಿನಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಆದರೆ ಪ್ರಾಥಮಿಕ ವರದಿಗಳ ಪ್ರಕಾರ, ಬಸ್ಸಿನಲ್ಲಿ ಅಂತಹ ಯಾವುದೇ (Shimjitha arrested) ಘಟನೆ ನಡೆದ ಬಗ್ಗೆ ದೃಶ್ಯಾವಳಿಗಳಲ್ಲಿ ಪುರಾವೆ ಸಿಕ್ಕಿಲ್ಲ. ಬಸ್ಸಿನಲ್ಲಿದ್ದ ನೌಕರರು ಮತ್ತು ಇತರ ಪ್ರಯಾಣಿಕರು ನೀಡಿರುವ ಹೇಳಿಕೆಯ ಪ್ರಕಾರ, ಅಂದು ಲೈಂಗಿಕ ಕಿರುಕುಳ ನಡೆದ ಬಗ್ಗೆ ಯಾರೂ ದೂರು ನೀಡಿರಲಿಲ್ಲ. ಈಗ ಪೊಲೀಸರು ಖಾಸಗಿ ಬಸ್ ನೌಕರರಿಂದ ಹೆಚ್ಚಿನ ಹೇಳಿಕೆಗಳನ್ನು ಪಡೆಯುತ್ತಿದ್ದಾರೆ.
Read this also : ಬಸ್ಸಿನಲ್ಲಿ ಮಹಿಳೆಗೆ ಕಿರುಕುಳ ಆರೋಪ : ವಿಡಿಯೋ ವೈರಲ್ ಬೆನ್ನಲ್ಲೇ ಕೇರಳದ ವ್ಯಕ್ತಿ ಆತ್ಮ*ತ್ಯೆ..!
ಸಾಮಾಜಿಕ ಜಾಲತಾಣದ ‘ವಿಚಾರಣೆ’ ಅಪಾಯಕಾರಿ!
ಈ ಪ್ರಕರಣವು ಇಂದಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾ ವಿಚಾರಣೆಗಳು (Social Media Trials) ಎಷ್ಟು ಅಪಾಯಕಾರಿ ಎಂಬುದಕ್ಕೆ ಕನ್ನಡಿ ಹಿಡಿದಿದೆ. ಸತ್ಯಾಸತ್ಯತೆ (Shimjitha arrested) ತಿಳಿಯುವ ಮೊದಲೇ ವ್ಯಕ್ತಿಯನ್ನು ಅಪರಾಧಿ ಎಂದು ಬಿಂಬಿಸುವುದು ಒಬ್ಬ ಅಮಾಯಕನ ಪ್ರಾಣವನ್ನೇ ಬಲಿಪಡೆದಿದೆ. ಪ್ರಸ್ತುತ ಶಿಮ್ಜಿತಾ ವಿರುದ್ಧ ಪೊಲೀಸರು ಲುಕ್ ಔಟ್ ನೋಟಿಸ್ ಕೂಡ ಹೊರಡಿಸಿದ್ದರು, ಈಗ ಆಕೆಯ ವಿಚಾರಣೆಯಿಂದ ಇನ್ನಷ್ಟು ಸತ್ಯಗಳು ಹೊರಬರಬೇಕಿದೆ.
