Shakti Scheme – ರಾಜ್ಯ ಕಾಂಗ್ರೇಸ್ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಶಕ್ತಿ ಯೋಜನೆ ಒಂದಾಗಿದೆ. ಈ ಯೋಜನೆಯಡಿ ರಾಜ್ಯದ ಸರ್ಕಾರಿ ಬಸ್ ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಈ ಯೋಜನೆಯ ಕುರಿತು ಸಚಿವ ರಾಮಲಿಂಗಾರೆಡ್ಡಿ (Ramalinga Reddy) ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಮಾಹಿತಿ ನೀಡಿದ್ದು, 4 ಸಾರಿಗೆ ನಿಗಮಗಳು ನಷ್ಟದಲ್ಲಿದ್ದು, ಶಕ್ತಿ ಯೋಜನೆಗೆ ಸರ್ಕಾರ 2 ಸಾವಿರ ಕೋಟಿ ಹಣ ಬಾಕಿ ನೀಡಬೇಕೆಂದು ತಿಳಿಸಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಸಾರಿಗೆ ಇಲಾಖೆ ನಿಗಮಗಳ ನಷ್ಟದ ಬಗ್ಗೆ ಪ್ರಶ್ನೆ ಕೇಳಿದ್ದು, ಅದಕ್ಕೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಉತ್ತರ ನೀಡಿದ್ದಾರೆ. ಕಳೆದ 5 ವರ್ಷಗಳಿಂದ ರಾಜ್ಯದ ನಾಲ್ಕು ಸಾರಿಗೆ ನಿಗಮಗಳು ನಷ್ಟದಲ್ಲಿದೆ. 2019-20ರಿಂದ 2023-24ವರೆಗೆ ಕೆಎಸ್‌ಆರ್‌ಟಿಸಿ- 1500.34 ಕೋಟಿ ನಷ್ಟ. ಬಿಎಂಟಿಸಿ- 1544.62 ಕೋಟಿ. ಕಲ್ಯಾಣ ಕರ್ನಾಟಕ ಸಾರಿಗೆ- 777.64 ಕೋಟಿ.ವಾಯುವ ವಾಯುವ್ಯ ಕರ್ನಾಟಕ ನಿಗಮ- 1386.58 ಕೋಟಿ ನಷ್ಟದಲ್ಲಿವೆ ಎಂದು ಮಾಹಿತಿ ನೀಡಿದರು.
SUPERSTUD Portable USB Juicer Blender for Juices and Smoothie, Milk Shakes, (BXYNN-25) (Upto 63% off, Buy Now)
ಇನ್ನೂ ರಾಜ್ಯದ ನಾಲ್ಕು ಸಾರಿಗೆ ನಿಗಮಗಳು ನಷ್ಟದಲ್ಲಿದೆ. ದೇಶದ ಎಲ್ಲಾ ಸಾರಿಗೆ ನಿಗಮಗಳೂ ನಷ್ಟದಲ್ಲಿದೆ. ನಷ್ಟವನ್ನು ತಡೆಯುವ ನಿಟ್ಟಿನಲ್ಲಿ ಬಸ್ ಟಿಕೆಟ್ ದರ ಜಾಸ್ತಿ ಮಾಡಲಾಗಿದೆ. ಮುಖ್ಯಮಂತ್ರಿಗಳು 2 ಸಾವಿರ ಕೋಟಿ ಸಾಲ ಕೊಡಿಸಿದ್ದಾರೆ. ಅದನ್ನು ಸರ್ಕಾರ ತೀರಿಸುತ್ತದೆ. ಮೋಟಾರ್ ಟ್ಯಾಕ್ಸ್ ವಿನಾಯ್ತಿ ಸಾರಿಗೆ ಇಲಾಖೆಗೆ ಸರ್ಕಾರ ಕೊಟ್ಟಿದೆ. ಶಕ್ತಿ ಯೋಜನೆಗೆ ಇನ್ನೂ 2000 ಕೋಟಿ ರೂಪಾಯಿ ಬರಬೇಕಿದೆ. ತಾವು ಮೊದಲು ಸಚಿವರಾಗಿದ್ದಾಗ ಒಂದೂ ಬಸ್ ಇರಲಿಲ್ಲ, ಆದರೆ ಈಗ ಹೊಸ ಬಸ್‌ಗಳನ್ನು ಖರೀದಿಸಲಾಗಿದೆ ಮತ್ತು ಹೊಸ ನೌಕರರನ್ನು ನೇಮಿಸಲಾಗಿದೆ. ನಮ್ಮ ಅವಧಿಯಲ್ಲಿ 5,360 ಹೊಸ ಬಸ್‌ಗಳನ್ನು ಖರೀದಿಸಲಾಗಿದೆ ಎಂದು ಮಾಹಿತಿ ನೀಡಿದರು.