ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಹಂಪಸಂದ್ರ ಸರ್ಕಾರಿ ಪ್ರೌಢಶಾಲೆಯಲ್ಲಿ ಕಳೆದ 2007 ರಿಂದ ವಿಜ್ಞಾನ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಹರೀಶ ರಾಜ್ ಅರಸ್ ರವರಿಗೆ 2024-25 ನೇ ಸಾಲಿನ ರಾಜ್ಯ ಮಟ್ಟದ ಶಿಕ್ಷಕರ ಪ್ರಶಸ್ತಿಗೆ (Best Teacher Award) ಆಯ್ಕೆ ಮಾಡಲಾಗಿದೆ. ಅಕ್ಷರ ಮಾತೆ ಸಾವಿತ್ರಿಬಾಯಿ ಪುಲೆ ರವರ ಹೆಸರಿನಲ್ಲಿ ಸೆ.5 ರಂದು ನಡೆಯಲಿರುವ ರಾಜ್ಯಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ. ಸರಳ ಹಾಗೂ ಸಜ್ಜನಿಕೆಯ ಶಿಕ್ಷಕ ಹರೀಶ್ ರಾಜ ಅರಸ್ ರವರಿಗೆ (Best Teacher Award) ಒಲಿದ ಈ ಗೌರವಕ್ಕೆ ಗುಡಿಬಂಡೆ ತಾಲೂಕಿನ ಶಿಕ್ಷಕ ವೃಂದ, ಶಿಷ್ಯವೃಂದ ಸೇರಿದಂತೆ ಅನೇಕರು ಶುಭ ಹಾರೈಸಿದ್ದಾರೆ.
ಶಿಕ್ಷಕ ಹರೀಶ ರಾಜ್ ಅರಸ್ ರವರು 2020-21ನೇ ಸಾಲಿನಲ್ಲಿಯೇ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು (Best Teacher Award) ಪಡೆದುಕೊಂಡಿದ್ದಾರೆ. 2014 ರಲ್ಲಿ ದಕ್ಷಿಣ ಭಾರತದ ವಿಜ್ಞಾನ ವಸ್ತುಪ್ರದರ್ಶನದಲ್ಲಿ ಮಾರ್ಗದರ್ಶನ ಶಿಕ್ಷಕನಾಗಿ ವಿದ್ಯಾರ್ಥಿಯ ಬುಕ್ ಅವಾರ್ಡ್ ನಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. (Best Teacher Award) 2024 ಜನವರಿಯಲ್ಲಿ ನಡೆದ ದಕ್ಷಿಣ ಭಾರತ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಶಿಕ್ಷಕರ ವಿಭಾಗದಲ್ಲಿ ಅನಿಲಗಳ ಅಯಾನೀಕರಣ ವಿಷಯದಲ್ಲಿ ಪ್ರದರ್ಶಿಸಿದ ಮಾದರಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದರು.
ಇನ್ನೂ ಹರೀಶ್ ರಾಜ ಅರಸ್ ರವರ ಶಿಷ್ಯ ವೃಂದದಲ್ಲಿ 10 ಕ್ಕೂ ಹೆಚ್ಚು ಮಂದಿ ರಾಜ್ಯ ಮಟ್ಟದ ವಿಜ್ಞಾನ (Best Teacher Award) ವಸ್ತು ಪ್ರದರ್ಶನದಲ್ಲಿ ಭಾಗವಹಿಸಿರುತ್ತಾರೆ. ಮಾದರಿ ವಿಜ್ಞಾನ ಪ್ರಯೋಗಾಲಯವನ್ನು ಸಹ ಶಾಲೆಯಲ್ಲಿ ಮುಖ್ಯ ಶಿಕ್ಷಕರ ಸಹಕಾರದೊಂದಿಗೆ ಮಾಡಿರುತ್ತಾರೆ. 4 ಬಾರಿ ದಕ್ಷಿಣ ಭಾರತ ವಿಜ್ಞಾನ ವಸ್ತು ಪ್ರದರ್ಶನದ ಶಿಕ್ಷಕರ (Best Teacher Award) ವಿಭಾಗದಲ್ಲಿ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಪಡೆದಿರುತ್ತಾರೆ. ಚುಟವಟಿಕೆ ಆಧಾರಿತ ಹಾಗೂ ಪ್ರಾಯೋಗಿಕ ವಿಧಾನ, ವಿಜ್ಞಾನ ಬೋಧನೆಯಲ್ಲಿ ಕಲಿಕೆಗೆ ಹೆಚ್ಚು ಪರಿಣಾಮಕಾರಿ ಎಂದು ನಂಬಿರುವ ಹರೀಶ್ ರಾಜ ಅರಸ್ ರವರು ವಿಜ್ಞಾನ ವಿಭಾಗದಲ್ಲಿ ಮಕ್ಕಳಿಗೆ ಉತ್ತಮವಾದ ಶಿಕ್ಷಣವನ್ನು ನೀಡಿರುತ್ತಾರೆ. ಅದರಲ್ಲೂ ವಿದ್ಯಾರ್ಥಿಗಳಿಂದ Low Cost and No Cost ವಸ್ತುಗಳಿಂದ ಮಾದರಿಗಳನ್ನು (Best Teacher Award) ಮಕ್ಕಳ ಮೂಲಕವೇ ಮಾಡಿಸುತ್ತಿರುತ್ತಾರೆ.
ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿಗೆ ಭಾಜನರಾದ (Best Teacher Award) ಹರೀಶ ರಾಜ್ ಅರಸ್ ತನಗೆ ಈ ದೊಡ್ಡ ಗೌರವ ದೊರೆತಿರುವುದು ಸಂತಸದಾಯಕವಾದ ವಿಚಾರವಾಗಿದೆ. ಈ ಪ್ರಶಸ್ತಿ ದೊರೆತಿರುವುದು ನನ್ನ ಜವಾಬ್ದಾರಿ ಮತಷ್ಟು ಹೆಚ್ಚಿಸಿದೆ. ಮುಂದಿನ ದಿನಗಳಲ್ಲಿ ಮತಷ್ಟು ಸಾಧನೆ ಮಾಡಲು ಶ್ರಮಿಸುತ್ತೇನೆ. (Best Teacher Award) ಜೊತೆಗೆ ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ಹೆಚ್ಚು ಆಸಕ್ತಿ ಮೂಡಿಸಿ ಅವರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವಂತೆ ಮಾಡುತ್ತೇನೆ. ನನಗೆ ಪ್ರಶಸ್ತಿ ಬಂದ ಸುದ್ದಿ ತಿಳಿಯುತ್ತಿದ್ದಂತೆ ಹಿತೈಶಿಗಳು, ಮಾರ್ಗದರ್ಶಕರು ಹಾಗೂ ಶ್ರೇಯೋಭಿಲಾಷಿಗಳು, ಜನಪ್ರತಿನಿಧಿಗಳು ಶುಭಾಷಯಗಳನ್ನು ತಿಳಿಸಿದ್ದು ಅವರಿಗೆ ನನ್ನ ಹೃದಯ ಪೂರ್ವಕ ಅಭಿನಂದನೆಗಳನ್ನು ತಿಳಿಸುತ್ತೇನೆ ಎಂದರು.