ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಬೇಕೆಂಬ ಕನಸು ಅನೇಕರಿಗೆ ಇರುತ್ತದೆ. ಆದರೆ ಆ ಕನಸು ಕೆಲವರಿಗೆ ಮಾತ್ರ ನನಸಾಗುತ್ತದೆ. ಬ್ಯಾಂಕ್ ನಲ್ಲಿ ಕೆಲಸ ಮಾಡಲು ಬಯಸುವಂತವರಿಗೆ SBI Jobs ಭರ್ಜರಿ ಅವಕಾಶ ನೀಡಿದೆ. SBI ನಲ್ಲಿ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಡೆಪ್ಯುಟಿ ಮ್ಯಾನೇಜರ್ (ಸಿಸ್ಟಮ್) ಹಾಗೂ ಅಸಿಸ್ಟೆಂಟ್ ಮ್ಯಾನೇಜರ್ (ಸಿಸ್ಟಮ್) ವಿಭಾಗದಲ್ಲಿ ಖಾಲಿಯಿರುವ ಸ್ಪೇಷಲಿಸ್ಟ್ ಕೇಡರ್ ಆಫಿಸರ್ ಹುದ್ದೆಗಳಿಗೆ ಅರ್ಜಿ ಆಹ್ಬಾನಿಸಿದ್ದು, ಒಟ್ಟು 1511 ಹುದ್ದೆಗಳು ಖಾಲಿಯಿದೆ. ಸೆ.14 ರಿಂದ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ಅಕ್ಟೋಬರ್ 04 ಕೊನೆಯ ದಿನಾಂಕವಾಗಿದೆ.
ಪ್ರತಿಷ್ಟಿತ ಬ್ಯಾಂಕ್ ಗಳಲ್ಲಿ ಒಂದಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿಯಿರುವ 1511 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಡೆಪ್ಯುಟಿ ಮ್ಯಾನೇಜರ್ (ಸಿಸ್ಟಮ್) ಹಾಗೂ ಅಸಿಸ್ಟೆಂಟ್ ಮ್ಯಾನೇಜರ್ (ಸಿಸ್ಟಮ್) ವಿಭಾಗದಲ್ಲಿ ಖಾಲಿಯಿರುವ ಸ್ಪೇಷಲಿಸ್ಟ್ ಕೇಡರ್ ಆಫಿಸರ್ ಹುದ್ದೆಗಳಿಗೆ SBI Jobs ನೇಮಕಾತಿ ಮಾಡಿಕೊಳ್ಳುತ್ತದೆ. ಈ ಉದ್ಯೋಗಕ್ಕೆ ನೀವು ಆಯ್ಕೆಯಾದರೇ ಒಂದು ವರ್ಷದ ಕಾಲ ಪ್ರೊಬೆಷನರಿ ಅವಧಿಯನ್ನು ಪೂರ್ಣಗೊಳಿಸಬೇಕಾಗಿದೆ. ಆಯ್ಕೆಯಾದವರು ಮುಂಬೈ ಅಥವಾ ಹೈದರಾಬಾದ್ ನಲ್ಲಿ ಕೆಲಸ ಮಾಡಬೇಕಿದೆ. ಇನ್ನೂ ಈ ಹುದ್ದೆಗಳಿಗೆ ಯಾವ ರೀತಿಯಲ್ಲಿ ಅರ್ಜಿ ಸಲ್ಲಿಸಬೇಕು, ಏನೆಲ್ಲಾ ಅರ್ಹತೆಗಳಿರಬೇಕು, ವೇತನ ಎಷ್ಟು ಎಂಬ ಮಾಹಿತಿಯನ್ನು ಇಲ್ಲಿ ನಿಮಗಾಗಿ ಹಂಚಿಕೊಳ್ಳಲಾಗಿದೆ.
to apply this job click here : https://sbi.co.in/web/careers/current-openings
ವೇತನ:
- ಸ್ಯಾಲರಿ: ಡೆಪ್ಯುಟಿ ಮ್ಯಾನೇಜರ್ (ಸಿಸ್ಟಮ್)- 64,820 ರೂ.ಗಳು
- ಅಸಿಸ್ಟೆಂಟ್ ಮ್ಯಾನೇಜರ್ (ಸಿಸ್ಟಮ್)- 48,480 ರೂ.ಗಳು
ವಯೋಮಿತಿ:
- ಡೆಪ್ಯುಟಿ ಮ್ಯಾನೇಜರ್ (ಸಿಸ್ಟಮ್) 25 ರಿಂದ 35 ವರ್ಷ.
- ಅಸಿಸ್ಟೆಂಟ್ ಮ್ಯಾನೇಜರ್ (ಸಿಸ್ಟಮ್) 21 ರಿಂದ 30 ವರ್ಷ.
ವಿದ್ಯಾರ್ಹತೆ, ಅನುಭವ ಹಾಗೂ ಅರ್ಜಿ ಶುಲ್ಕ:
- ವಿದ್ಯಾರ್ಹತೆ: ಬಿಟೆಕ್, ಬಿಇ ಇನ್ ಕಂಪ್ಯೂಟರ್ ಸೈನ್ಸ್ ಅಥವಾ ಎಂಸಿಎ ಅಥವಾ ಎಂಟೆಕ್/ ಎಂಎಸ್ಸಿ
- ಅನುಭವ: ಸಾಫ್ಟ್ವೇರ್ ಡೆವಲಪ್ಮೆಂಟ್ನಲ್ಲಿ 4 ವರ್ಷಗಳ ಅನುಭವ ಇರಬೇಕು.
- ಅರ್ಜಿ ಶುಲ್ಕ: ಜನರಲ್, ಇಡಬ್ಲುಎಸ್, ಒಬಿಸಿ 750 ರೂಪಾಯಿಗಳನ್ನು ಪಾವತಿ ಮಾಡಬೇಕು. ಎಸ್ಸಿ, ಎಸ್ಟಿ, ವಿಶೇಷ ಚೇನತರಿಗೆ ಯಾವುದೇ ಶುಲ್ಕ ಇರುವುದಿಲ್ಲ.