Friday, November 22, 2024

ಮುಂದಿನ ಪೀಳಿಗೆಗಾಗಿ ಪರಿಸರವನ್ನು ಉಳಿಸಿ: ನ್ಯಾ ಜೆ.ರಂಗಸ್ವಾಮಿ

ಬಾಗೇಪಲ್ಲಿ: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಉಚಿತ ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅರಣ್ಯ ಇಲಾಖೆ ಕಾರ್ಮಿಕ ಇಲಾಖೆ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ಪುರಸಭೆ , ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಇವರ ಸಂಯುಕ್ತ ಆಶ್ರಯದಲ್ಲಿ ಪಾಲಿಟೆಕ್ನಿಕ್ ಹಾಗು ಐ ಟಿ ಐ ಕಾಲೇಜಿನಲ್ಲಿ  ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಜೆ.ಎಂ.ಎಫ್.ಸಿ  ನ್ಯಾಯಾಧೀಶ ಜೆ.ರಂಗಸ್ವಾಮಿ ರವರು ಸಸಿ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

environment day plantation in bgp 1

ಪರಿಸರ ಉಳಿಸುವ ಸಲುವಾಗಿ ನಮ್ಮ ನ್ಯಾಯಾಲಯದಿಂದ ಘೋಷಣೆ ಮಾಡಿದ ಹಾಗೆ ಗುರಿಯನ್ನು ವಕೀಲರು ಹಾಗು ಕಾನೂನು ಸೇವಾ ಸಮಿತಿ ವತಿಯಿಂದ ಹತ್ತು ಸಾವಿರ ಗಿಡಗಳನ್ನು ನೆಡುವ ಮೂಲಕ  ಪರಿಸರ ದಿನಾಚರಣೆಯನ್ನು ನಾವು ಆಚರಣೆ ಮಾಡಲಾಗುತ್ತಿದೆ. ಕಡಿಮೆ ಸಮಯದಲ್ಲಿ ಜನರಿಗೆ ಮನಮುಟ್ಟುವಂತೆ ಪರಿಸರ ಜಾಗೃತಿಯನ್ನು ನಾವು ಮೂಡಿಸಲಾಗುತ್ತಿದೆ.  ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ನಾವು ವಿವಿಧ ಅಭಿಯಾನಗಳಲ್ಲಿ ಭಾಗವಹಿಸುತ್ತೇವೆ.  ವಿವಿಧ ಸಂಘ ಸಂಸ್ಥೆಗಳು, ಸಾರ್ವಜನಿಕರು ಎಲ್ಲರೂ ಸಹ ಭಾಗವಹಿಸಿ ಪರಿಸರ ಸಂರಕ್ಷಣೆಗೆ ಮುಂದಾಗಿರಬೇಕು ಇಲ್ಲವಾದಲ್ಲಿ ಮುಂದಿನ ದಿನಮಾನಗಳಲ್ಲಿ ನಮ್ಮ ಮುಂದಿನ ಪೀಳಿಗೆಗೆ ಪರಿಸರ ಅನ್ನೋದು ಮರೀಚಿಕೆಯಾಗುತ್ತದೆ ಎಲ್ಲರೂ ಸಹ ಕೈಜೋಡಿಸಿ ಪರಿಸರವನ್ನು ಉಳಿಸಿ ಬೆಳೆಸೋಣ ಎಂದು ತಿಳಿಸಿದರು.

environment day plantation in bgp 1

ಪ್ರಪಂಚದಾದ್ಯಂತದ ವಿವಿಧ ಸಂಸ್ಥೆಗಳು ನಮ್ಮ ಭವಿಷ್ಯವನ್ನು ಸುಧಾರಿಸಲು ಸಣ್ಣ ಕ್ರಮಗಳನ್ನು ತೆಗೆದುಕೊಳ್ಳಲು ಪರಿಸರ ದಿನದಂದು ಒಗ್ಗೂಡುತ್ತವೆ. ಶಾಲೆಗಳು ಮತ್ತು ಕಛೇರಿಗಳು ವಿದ್ಯಾರ್ಥಿಗಳು ಮತ್ತು ಕೆಲಸಗಾರರನ್ನು ಮರಗಳನ್ನು ನೆಡಲು, ಸ್ಥಳೀಯ ಪ್ರದೇಶ/ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛಗೊಳಿಸಲು ಇತ್ಯಾದಿಗಳನ್ನು ಪ್ರೋತ್ಸಾಹಿಸುತ್ತವೆ.  ಈ ಸಣ್ಣ ಪ್ರಯತ್ನಗಳು ಪರಿಸರದ ಮೇಲೆ ದೊಡ್ಡ ಪರಿಣಾಮ ಬೀರುತ್ತವೆ. ಪರಿಸರ ಪರಿಸ್ಥಿತಿಗಳನ್ನು ಸುಧಾರಿಸಲು, ಸರ್ಕಾರಿ ಸಂಸ್ಥೆಗಳು ಮತ್ತು ಮುಖಂಡರು ಸಮಸ್ಯೆಗಳ ವಿರುದ್ಧ ಹೋರಾಡಲು ಒಗ್ಗೂಡುತ್ತಾರೆ ಮತ್ತು ನಮ್ಮ ಪರಿಸರವನ್ನು ಉಳಿಸಲು ಸಹಾಯ ಮಾಡುತ್ತಾರೆ.

ಸರ್ಕಾರವು ಕೈಗೊಂಡ ಕೆಲವು ಕ್ರಮಗಳು ಪರಿಸರವನ್ನು ಸಂರಕ್ಷಿಸಲು ಕಟ್ಟುನಿಟ್ಟಾದ ಕಾನೂನುಗಳನ್ನು ಒಳಗೊಂಡಿವೆ, ಉದಾಹರಣೆಗೆ ಅರಣ್ಯ ಸಂರಕ್ಷಣಾ ಕಾಯಿದೆ 1980, ಪರಿಸರ (ರಕ್ಷಣೆ) ಕಾಯಿದೆ 1986, ಇತ್ಯಾದಿ, ಮತ್ತು ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವುದು, ಉದಾಹರಣೆಗೆ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ತಿದ್ದುಪಡಿ ನಿಯಮಗಳು 2021. ನಾವು ಹೆಚ್ಚು ಮರಗಳನ್ನು ನೆಡುವುದು ಮಾಡಿದರೆ ಅದು ಮಾಲಿನ್ಯವನ್ನು ತಡೆಯುತ್ತದೆ ಮತ್ತು ಪರಿಸರವನ್ನು ಉಳಿಸಲು ಸಹಾಯ ಮಾಡುತ್ತದೆ. ಇಂತಹ ಕಾರ್ಯಗಳನ್ನು ಜನರಲ್ಲಿ ಜಾಗೃತಿ ಮೂಡಿಸುವುದು ಹೆಚ್ಚು ಹೆಚ್ಚು ನಡೆಯಬೇಕಿದೆ ಎಂದರು.

environment day plantation in bgp 0

ಈ ಸಮಯದಲ್ಲಿ  ಅರಣ್ಯ ಅಧಿಕಾರಿಗಳಾದ ಚಂದ್ರಶೇಖರ್ ರೆಡ್ಡಿ,  ಮಂಜುನಾಥ್. ಸರ್ಕಾರಿ ಅಭಿಯಂತರ ಚಿನ್ನಸ್ವಾಮಿ, ವಕೀಲರ ಸಂಘದ ಅಧ್ಯಕ್ಷರಾದ ನಂಜುಂಡಪ್ಪ, ವೆಂಕಟನಾರಾಯಣ, ಟಿ. ಎಲ್ ರಾಮಾಂಜಿ, ನರೇಂದ್ರ ಬಾಬು, ಜಿ.ಎಸ್.ಶ್ರೀನಿವಾಸ, ನಾಗಭೂಷಣ್ N, ಮಲ್ಲಿಕಾರ್ಜುನ, ಮಹೇಶಪ್ಪ,  ಆನಂದ, ಶ್ರೀನಾಥ,  ತಾಲೂಕು ಕಾನೂನು ಸೇವಾ ಸಮಿತಿಯ ಧನುಜಯ್,  ಸಂದ್ಯಾ, ಹಾಗು ಪೊಲೀಸ್ ಸಿಬ್ಬಂದಿ, ಬಾಬವಲಿ, ರಾಜೇಶ್ ಹಲವರು ಉಪಸ್ಥಿತರಿದ್ದರು..

by Admin
by Adminhttp://ismkannadanews.com
Welcome to ISM News, if you want to contact us, then feel free to say anything about www.ismkannadanews.com. We'll appreciate your feedback.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe

Latest Articles

error: Content is protected !!