Sadhguru – ನೆರೆಯ ಬಾಂಗ್ಲಾದೇಶದಲ್ಲಿ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ವಿರೋಧಿಸಿ ವಿದ್ಯಾರ್ಥಿಗಳು ನಡೆಸುತ್ತಿದ್ದ ಪ್ರತಿಭಟನೆ ಹಾಗೂ ಸೇನೆಯೊಂದಿಗಿನ ಕಿತ್ತಾಟ ದಿನೇ ದಿನೇ ತೀವ್ರಗೊಳ್ಳುತ್ತಿದೆ. ಇದೀಗ ಬಾಂಗ್ಲಾ ಹಿಂದೂಗಳು, ಹಿಂದೂ ದೇವಾಲಯಗಳ ಮೇಲೆ ದಾಳಿಗಳು ಹೆಚ್ಚಾಗುತ್ತಿದೆ. ಈ ಸಂಬಂಧ (Bangladesh) ಕೆಲವೊಂದು ವಿಡಿಯೋಗಳೂ ಸಹ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ. ಇದಿಗ ಈ ಕುರಿತು ಆಧ್ಯಾತ್ಮಿಕ ಗುರು ಸದ್ಗುರು ಜಗ್ಗಿ ವಾಸುದೇವ್ (Sadhguru) ರವರು ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಹಿಂದೂ ದೇವಾಲಯಗಳ (Bangladesh) ಮೇಲಿನ ಧಾಳಿಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಬಾಂಗ್ಲಾದೇಶದಲ್ಲಿ ಹಿಂದೂಗಳು ಹಾಗೂ ಹಿಂದೂ ದೇವಾಲಯಗಳ ಮೇಲೆ ಧಾಳಿಯ ಕುರಿತು ಆಧ್ಯಾತ್ಮಿಕ ಗುರು ಹಾಗೂ ಇಶಾ ಫೌಂಡೇಶನ್ ಮುಖ್ಯಸ್ಥ ಸದ್ಗುರು ಜಗ್ಗಿ ವಾಸುದೇವ್ (Sadhguru) ತಮ್ಮ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಹಿಂದೂಗಳ ಮೇಲಿನ ದೌರ್ಜನ್ಯಗಳು ಕೇವಲ ಬಾಂಗ್ಲಾದೇಶದ ಆಂತರಿಕ ವಿಷಯವಲ್ಲ, (Sadhguru) ಭಾರತ ಈ ದಿಸೆಯಲ್ಲಿ ಸಕಾರಾತ್ಮಕ ಹೆಜ್ಜೆಗಳನ್ನು ಇಡಬೇಕು. ಸೋಷಿಯಲ್ ಮಿಡಿಯಾದಲ್ಲಿ ಸದ್ಗುರು ಜಗ್ಗಿ ವಾಸುದೇವ್ ಭಾರತ ಮತ್ತು ಬಾಂಗ್ಲಾದೇಶದ ಸಂಬಂಧಗಳು ಮತ್ತು ಇತಿಹಾಸದ ಕುರಿತು ಸುದೀರ್ಘ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ ಮತ್ತು ನಮ್ಮ ನೆರೆಯ ದೇಶದಲ್ಲಿ ಅಲ್ಪಸಂಖ್ಯಾತರ ಸುರಕ್ಷತೆಯನ್ನು ಖಚಿತಪಡಿಸುವುದು ನಮ್ಮ ಜವಾಬ್ದಾರಿಯಾಗಬೇಕು ಎಂದು (Sadhguru) ಹೇಳಿದ್ದಾರೆ.
https://x.com/SadhguruJV/status/1821005874846167296
ಸುಮಾರು ವರ್ಷಗಳ ಹಿಂದೆ ಬಾಂಗ್ಲಾದೇಶವು ಈ ರಾಷ್ಟ್ರದ ಭಾಗವಾಗಿತ್ತು. ಆದರೆ ದುರದೃಷ್ಟಾವಶಾತ್ ಇಂದು ಅದು ನೆರೆಯ ದೇಶವಾಗಿದೆ. ಬಾಂಗ್ಲಾದಲ್ಲಿ ಹಿಂದೂಗಳ ಮನೆಗಳು, ದೇವಾಸ್ಥಾನಗಳು ಹಾಗೂ ಅಂಗಡಿಗಳ ಮೇಲೆ ನಡೆಯುತ್ತಿದೆ. ಅಲ್ಲಿನ ಹಿಂಸಾತ್ಮಕ ಪ್ರತಿಭಟನೆಯಿಂದಾಗಿ ಮಾಜಿ ಪ್ರಧಾನಿ ಶೇಖ್ ಹಸೀನಾ ರಾಜಿನಾಮೆ ನೀಡಿ ಭಾರತದಲ್ಲಿ ಆಶ್ರಯ ಪಡೆಯಬೇಕಾಯ್ತು. ಬಾಂಗ್ಲಾ ಗಲಬೆಕೋರರು ಶೇಖ್ ಹಸೀನಾ ರವರ ಆಸ್ತಿ ಹಾಗೂ ಬೆಂಬಲಿಗರನ್ನು ಗುರಿಯಾಗಿಸಿಕೊಂಡು ಧಾಳಿ ನಡೆಸಿದ್ದಾರೆ. ಈ ಧಾಳಿಯಲ್ಲಿ ಅನೇಕರು ಪ್ರಾಣ ಸಹ ಕಳೆದುಕೊಂಡಿದ್ದಾರೆ.
ಇನ್ನೂ ಸದ್ಗುರು (Sadhguru) ರವರು ಈ ಪೋಸ್ಟ್ ಜೊತೆಗೆ ಕೆಲವೊಂದು ಮಾದ್ಯಮದ ತುಣುಕುಗಳನ್ನು ಸಹ ಹಂಚಿಕೊಂಡಿದ್ದಾರೆ. ಅದರಲ್ಲಿ ಹಿಂದೂಗಳ ಮೇಲಿನ ದಾಳಿಯ ವರದಿಗಳನ್ನು ಪ್ರಕಟಿಸಲಾಗಿದೆ. ಈ ಪರಿಸ್ಥಿತಿಯನ್ನು ನೋಡಿದರೇ ನಮ್ಮ ನೆರೆಯ ದೇಶ ಇಂತಹ ದುರದೃಷ್ಟಕರ ಪರಿಸ್ಥಿತಿಯಿಲ್ಲಿ ಸಿಲುಕಿಕೊಂಡಿರುವುದು ವಿಷಾದನೀಯವಾದದು. ಅಲ್ಲಿನ ಧಾರ್ಮಿಕ ಉಗ್ರವಾದ ನಮ್ಮ ಪ್ರೀತಿಯ ಭಾರತದ ಮೇಲೆ ಎಂದಿಗೂ ಬೀರಬಾರದಂತೆ ನಾವೆಲ್ಲರೂ ನೋಡಿಕೊಳ್ಳೋಣ ಎಂದು ತಮ್ಮ (Sadhguru) ಪೋಸ್ಟ್ ಮೂಲಕ ಸದ್ಗುರು ತಿಳಿಸಿದ್ದಾರೆ.